84 ಹನುಮದ್ರಾಮಾಯಣ. ಸುರಸಾಂಗನೆ ಬಂದು ಮುಂ | ಬರಿವ ಮಹಾಬಲಕುಮಾರನಂ ತಡೆದಳಣಂ } ೬ | ಪಲಗಾಲಮಶನವಿಲ್ಲದೆ ! ಬಳಲಿರ್ಪ್ಪಿಯುದರದನಲನಂ ತಣ್ಣಿಸು ನೀ | ನೊಳವೊಕ್ಕುಮಲ್ಲದಿರಲಾ | ನುಳಿಸೆ ನಿನ್ನೊಡಲನೆಂದು ಬಾಯ್ದೆರೆದಳವಳ [ ೮ | ಪೆಂಗುಸು ನೀನೆನ್ನೊಡಲಂ || ನುಂಗುವೊಡಂ ಸಾಕೆ ನಿನ್ನ ಬಾಯ್ದೆ ರೆಯೆನುತಂ || ಪಿಂಗಲನಯನಂ ಬಳೆಯ || ಇಂಗನೆ ಬಾಯ್ದೆರೆದಳಯ್ತು ಯೋಜನಮಾಗಳ್ | ೯ | ದ್ವಿಗುಣಿಸಿ ಬಳೆದಂ ಹನುಮಂ || ಮಗುಳದಕಿರ್ಮ್ಮಡಿಯೋಳಾಸ್ಯಮಂ ತೆರೆಯಲ್ಯಂ || ಮಿಗಿಲಾಗೆ ಬಳೆಯಲಾದುದು | ಸುಗಮ ಜನಾಯತವದನಂ || 18 ಇವಳೊಡನೇಂ ಕಚ್ಚಮೆನುತೆ | ಪವನಜನಂಗುಷ್ಟಮಾತ್ರನಾಗುತೆ ಸುರಸಾ || ಯುವತಿಯ ವದನದಿನಿಳಿಯುತೆ | ತವಕದೆ ಪೊರವಂದು ನಿಂದನವಳಿದಿರಿನೊಳಂ | | ೧೧ ಕಾಣುತಮಾ ಸುರಸೆ ಜಗ | ಫ್ಲ್ಯಾಣಜನಂ ಪೊಗಳು ತನ್ನ ವೃತ್ತಾಂತಮನುಂ || ಮಾಣದೆ ನುಡಿದುಂ ದಿವಿಜರ | ತಾಣಕ್ಕಂ ಪೋಗೆ ಮುಂದೆ ನಡೆದಂ ಹನುಮಂ || ೧೨ || ಗಗನಾದ್ಯದೊಳನುಗಮಿಸ | ಬೃಗರಾಜನ ಪುತ್ರನಬ್ಬಿಯನುಮತಿಯಿಂದಂ || ಖಗಮಂಡಲಮಂ ಸೋಂಕುವ | ಬಗೆಯಿಂ ತಲೆದೋರ್ದ್ಭು ನಿಂದನನಿಲಜನಿದಿರೊಳ್ || ೧೩ || ಏನದ್ಭುತಮಿದು ಕಡಲಿಂ || ತಾನೊಗೆದುದು ಶೈಲಮೆಂದು ವಿಸ್ಮಯದಿಂದಂ || ವಾನರನೀಕ್ಷಿಸುತಿರಲಾ ! ಮೈನಾಕಂ ಪುರುಷನಾಗಿ ಬಂದಿಂತೆಂದಂ || ೧೪ |
ಪುಟ:ಹನುಮದ್ದ್ರಾಮಾಯಣಂ.djvu/೯೨
ಈ ಪುಟವನ್ನು ಪರಿಶೀಲಿಸಲಾಗಿಲ್ಲ.