ಒಂದು ದಿವಸ ಭಾಷ್ಯಕಾರ ತಿರುನಕ್ಷತ್ರ. ನಾಮದ ಅಯ್ಯಂಗಾರಿಗಳಿಗೆ ಭಾಷ್ಯಕಾರರ ತಿರುನಕ್ಷತ್ರವೆಂದರೆ ೧೦ ಉಂಡೆ ನಾಮ, ಒಂದು ಸೇರು ಕುಂಕುಮ ವೆಚ್ಚ, ಇದು ಅಯ್ಯಂಗಾರಿಗಳಿಗೆ ಒಂದು ವಿಧವಾದ ಮೊಹರಂ. ಮೈಗೆ ಕೆಂಪು ಬಿಳುಪು ನಾಮ ಬಳಿದಿದ್ದೂ ಬಳಿದಿದ್ದೆ. ನೋಡಿದವರಿಗಂತೂ ಗಾಬರಿಯಾಗಿಬಿಡುತ್ತೆ. ಹೀಗೆ ನಾಮ ಹಾಕಿದ ಅಣ್ಣ ತಮ್ಮಂದಿರನ್ನು ಕಂಡು ಎಷ್ಟೋ ಮಕ್ಕಳು ಚಿಟ್ಟನೆ ಚೀರಿದುದುಂಟು. ಆದರೆ ನಮಗೆಲ್ಲಾ ಆ ದಿವಸ ಆನಂದ. ಆ ದಿವಸದ ಈ ಬಣ್ಣ ಬಳಿದುಕೊಳ್ಳುವುದಕ್ಕೆ ಎರಡು ಮೂರು ಮನೆಗಳು ಗೊತ್ತು. ಆ ಮನೆಯವರೇ ಆ ದಿವಸ ನಾಮ ಒದಗಿಸಿಕೊಡುತ್ತಾರೆ. ಇದು ಬಹಳ ಪುಣ್ಯ ಕೆಲಸವೆಂದು ಪರಿಗಣಿಸಲ್ಪಟ್ಟಿದೆ. ನಾಮವಿಡುವುದರಲ್ಲಿ ಪ್ರಸಿದ್ಧರಾದ ೨-೩ ಕಲಾವಿದರು ಈ ಕೆಲಸವನ್ನು ಪ್ರಾರಂಭಿಸಿ ಬಂದವರಿಗೆಲ್ಲಾ ನಾವು ಹಾಕಲು ಮೊದಲುಮಾಡುತ್ತಾರೆ. ಇದರಲ್ಲಿ ಬಗೆ ಬಗೆಯ ಕ್ರಮಗಳುಂಟು. ನಾಮವನ್ನು ಒಂದು ಕ್ರಮದಲ್ಲಿಯೇ ಹಾಕಬೇಕೆಂದು ನಮ್ಮ ಶಾಸ್ತ್ರದಲ್ಲಿ ಹೇಳಿದೆ. ಆದರೆ ಈ ಹಬ್ಬದ ದಿವಸ ಅದನ್ನು ಅನುಸರಿಸಬೇಕಾದುದಿಲ್ಲ. ಅದು ಕೇವಲ ವ್ರತಾದಿಗಳಿಗೆ ಮಾತ್ರ ಅನ್ವಯಿಸತಕ್ಕದ್ದು. ಈ ದಿವಸ ಯಾವ ಕ್ರಮದಲ್ಲಿ ಬೇಗ ನಾಮಗಳನ್ನು ಹಾಕಬಹುದೋ ಆ ಕ್ರಮವನ್ನು ಅನುಸರಿಸುತ್ತಿದ್ದರು. ಒಬ್ಬನು ದೇಹದ ಒಂದೊಂದು ಅವಯವಕ್ಕೂ ನಾಮ, ಶ್ರೀಚೂರ್ಣಗಳನ್ನು ಬೇಗ ಬೇಗ ಬಳಿಯುತ್ತಿದ್ದನು. ಮತ್ತೊಬ್ಬನು ಎಲ್ಲರ ತೋಳಿಗೂ ಒಂದು ಕಡೆಯಿಂದ ಬಿಳೇ ನಾಮವನ್ನು ಹಾಕುತಿದ್ದನು. ಅನಂತರ ಬೆನ್ನು ಹೊಟ್ಟೆ ಕತ್ತು ಈ ಕ್ರಮದಲ್ಲಿ ಸಾಗುತ್ತಿದ್ದಿತು. ಕೆಲವರಿಗಂತೂ ಹಣೆಯು ಇನ್ನೂ ಅಗಲವಾಗಿಲ್ಲವಲ್ಲಾ ಎಂದು ದುಃಖವುಂಟಾಗಿದ್ದಿತು. ಹಣೆಯ ಎರಡು ಕಡೆಯೂ ಅದು ಇರುವಷ್ಟು ಅಗಲವೂ ಬಿಳೆಯ ನಾಮ, ಮಧ್ಯೆ ಒಂದು ಅಂಗುಲ ಅಗಲ ಕೆಂಪು ನಾಮ, ಊರಿನ ಎಲ್ಲಾ ಹುಡುಗರಿಗೂ ಆ ದಿವಸ ಹನ್ನೆರಡು, ಹದಿನಾಲ್ಕು, ಹದಿನೆಂಟು ನಾಮ. ಅನಂತರ ಹುಡುಗರು ಊರಿನ ಸುತ್ತ ಅವ್ಯವಸ್ಥೆಯಿಂದ ರಾಮಾನುಜ ಎಂದು ಕಿರಚುತ್ತಿದ್ದರು. ಈಚೆಗೆ ನಮ್ಮ ಮಣೆಗಾರರು ಆ ಅವ್ಯವಸ್ಥೆಗೆ ಒಂದು ವ್ಯವಸ್ಥೆಯನ್ನು ಕೊಟ್ಟರು. ಈ ರೀತಿಯಾಗಿ ನಾಮಧಾರಿ
ಪುಟ:ಹಳ್ಳಿಯ ಚಿತ್ರಗಳು.djvu/೫೭
ಈ ಪುಟವನ್ನು ಪ್ರಕಟಿಸಲಾಗಿದೆ
ನಮ್ಮ ಜೋಡಿದಾರರ ಕೆಲವು ಚಿತ್ರಗಳು
೪೩