ಕಾಣುತ್ತೆ" ಎಂದಳು. ಜೋಡಿದಾರರಿಗೆ ಮತ್ತೇನೂ ತೋಚಲಿಲ್ಲ. ಹೊಡೆದಾಡುವುದಕ್ಕೆ ಮೊದಲೇ ಪುಳಿಚಾರು. ಅಲ್ಲದೆ ನೂರಾರು ಜನರ ಎದುರಾಗಿ ಒಬ್ಬ ಕಾದಾಡುವುದೆಂದರೆ ಸಾಮಾನ್ಯವೆ? ಅವರೆಲ್ಲಾ ಬಂದ ಮೇಲೆ ಎಲ್ಲರಿಗೂ ಸಮಾಧಾನವನ್ನು ಹೇಳಿ ತನ್ನ ನಿರಪರಾಧಿತ್ವವನ್ನು ತೋರಿಸಿಕೊಳ್ಳಬಹುದಾಗಿದ್ದಿತು. ಆದರೆ ಅಲ್ಲಿ ಬರುತ್ತಿರುವವರು ಸಮಾಧಾನವನ್ನು ಕೇಳಲು ಬರುವವರಾಗಿರಲಿಲ್ಲ. ಮಾತು ಕಥೆ ಯಾವುದೂ ನಡೆಯುವುದಕ್ಕೆ ಮುಂಚೆ ಪ್ರತಿಯೊಬ್ಬನೂ ಒಂದೊಂದು ಬೈಗಳದೊಂದಿಗೆ ಇವರಿಗೆ ಒಂದೊಂದು ಏಟನ್ನು ಹಾಕಿಬಿಡುತ್ತಿದ್ದನು. ಮಾತು ಕಥೆ ಸಮಾಧಾನ ಇದೆಲ್ಲಾ ಆಮೇಲೆ. ಆದುದರಿಂದ ಜೋಡಿದಾರರು ಅಲ್ಲಿ ಹೆಚ್ಚು ಹೊತ್ತು ನಿಂತರೆ ಪ್ರಯೋಜನವಿಲ್ಲವೆಂದುಕೊಂಡು “ಕಾಲಾಯ ತಸ್ಯೆ ನಮಃ” ಕಾಲಿಗೆ ಬುದ್ದಿ ಹೇಳಿ ಓಡುವುದಕ್ಕೆ ಪ್ರಾರಂಭಿಸಿದರು. ಈಗ ಅವರ ಜೀವನ ಮರಣಗಳು ಅವರ ಕಾಲಿನ ಮೇಲೆ ಅವಲಂಬಿಸಿದ್ದುವು. “ತಲೆ ಹೋಗುವುದಕ್ಕೆ ಕಾಲು ಹೊಣೆ?" ಎಂಬ ನುಡಿಯು ನಿಶ್ಚಯವಾಗಿಯೂ ಅವರಿಗೆ ಅನ್ವಯಿಸುವಂತಾಯಿತು. ಪಾಪ ಅವರಿಗೆ ಬೆಳಗಿನಿಂದ ಆಯಾಸವಾಗಿ ಸುದಾರಿಸಿಕೊಳ್ಳಬೇಕು ಎನ್ನುವ ಹೊತ್ತಿಗೆ ಇದೊಂದು ಗ್ರಹಚಾರ ಬಂದಿತು. ಆದರೇನು? ಹಳ್ಳಿಯವರು ಇವರನ್ನು ಬಿಡಲಿಲ್ಲ. ಜೋಡಿದಾರರು ಮುಂದೆ ಅವರು ಹಿಂದೆ; ಹುಚ್ಚು ನಾಯಿಯನ್ನು ಓಡಿಸಿಕೊಂಡು ಹೋದಂತೆ ಇವರನ್ನು ಓಡಿಸಿಕೊಂಡು ಹೋದರು. ಜೋಡಿದಾರರು ಪಂಚೆಯನ್ನುಟ್ಟಿರಲಿಲ್ಲ. ಅದು ಇನ್ನೂ ಅವರ ತಲೆಯ ಮೇಲೆಯೇ ಇದ್ದಿತು. ಕೋಡಿಯನ್ನು ದಾಟುವುದಕ್ಕಾಗಿ ಸೊಂಟಕ್ಕೆ ಸುತ್ತಿದ್ದ ಒಂದು ಚೌಕದ ಹೊರತು ಮತ್ತಾವ ಬಟ್ಟೆಯನ್ನೂ ಇವರು ತೊಟ್ಟಿರಲಿಲ್ಲ. ಬೆಳಗಿನಿಂದಲೂ ನಡೆದು ಆಯಾಸಗೊಂಡಿದ್ದುದರಿಂದ ಇವರ ವೇಗವು ನಿಧಾನವಾಗಿ ಕಡಮೆಯಾಗುತ್ತಾ ಬಂದಿತು. ಇವರಿಗೂ ಇವರ ಬೇಟೆಗಾರರಿಗೂ ನಡುವೆ ಇದ್ದ ದೂರವ ಕಡಮೆಯಾಯಿತು. ತಮಗೆ ನೂರು ವರುಷ ಅಂದಿಗೆ ತುಂಬಿತೆಂದು ಅವರು ತಿಳಿದರು. ಆದದಾಗಲಿ ಇನ್ನು ಓಡುವುದಕ್ಕೆ ಆಗುವುದಿಲ್ಲ ಕುಳಿತುಬಿಡುತ್ತೇನೆ ಎಂದು ಅವರು ಯೋಚಿಸು ತಿದ್ದರು. ಎದುರಿಗೆ ಮತ್ತೊಂದು ಹಳ್ಳಿಯು ಕಣ್ಣಿಗೆ ಬಿದ್ದಿತು. "ಆ
ಪುಟ:ಹಳ್ಳಿಯ ಚಿತ್ರಗಳು.djvu/೭೪
ಈ ಪುಟವನ್ನು ಪ್ರಕಟಿಸಲಾಗಿದೆ
೬೦
ಹಳ್ಳಿಯ ಚಿತ್ರಗಳು