ಈ ಪುಟವನ್ನು ಪ್ರಕಟಿಸಲಾಗಿದೆ
೭೦
ಹಳ್ಳಿಯ ಚಿತ್ರಗಳು

ಚಿಕ್ಕದು ಎಂದರೆ ನಿಮ್ಮ ಕೈಯಲ್ಲಿ ಒಂದು ಮಾರು. ಸದಸ್ಯರಾಗಲಪೇಕ್ಷಿಸುವವರು ಈ ಎರಡನೆಯ ಕವಡಿಯಲ್ಲಿ ನುಸಿಯಬೇಕಾಗಿದ್ದಿತು. ಯಾರು ಸಲೀಸಾಗಿ ನುಸಿದುಕೊಂಡು ಹೋಗಿಬಿಡುತ್ತಿದ್ದರೋ ಅವರು ಸದಸ್ಯರಾಗಲು ಅರ್ಹರಾಗುತ್ತಿರಲಿಲ್ಲ. ಯಾರ ಹೊಟ್ಟೆಯು ನುಸಿಯುವಾಗ ಆ ಕವಡಿಯಲ್ಲಿ ಸಿಕ್ಕಿಕೊಳ್ಳುತ್ತಿದ್ದಿತೋ ಅವರು ಮಾತ್ರ ಸದಸ್ಯರಾಗಲು ಯೋಗ್ಯರಾಗುತ್ತಿದ್ದರು. ಇದೇ ಆ ಬೊಜ್ಜು ಬೆಳೆದವರ ಸಂಘದ ನಿಯಮವಾಗಿದ್ದಿತಂತೆ. ಅಲ್ಲಿಯ ಮೂರು ಸದಸ್ಯರನ್ನು ಸೇರಿಸಿ ತೂಕಮಾಡಿದರೆ ಅವರ ಭಾರವು ೧,೨೦೦ ಪೌಂಡು ಇರುತ್ತಿದ್ದಿತಂತೆ. ಇಂತಹ ಸಂಘಕ್ಕೆ ಸದಸ್ಯರಾಗಲು ನಮ್ಮ ಜೋಡಿದಾರರೂ ಅರ್ಹರಾಗಿದ್ದರು.

೯. ಜೋಡಿದಾರರ ಚಟುವಟಿಕೆ

ಜೋಡಿದಾರರು ಸ್ವಲ್ಪ ದಪ್ಪವಾದ ಮಾತ್ರಕ್ಕೆ ಅವರಿಗೆ ಚಟುವಟಿಕೆ ಕಡಮೆ ಎಂದು ಊಹಿಸಬೇಡಿ. ಈವತ್ತೂ ಅವರಷ್ಟು ಕೆಲಸಮಾಡಲು ಹುಡುಗರೆನ್ನಿಸಿಕೊಳ್ಳುವ ನಮಗೇ ಆಗುವುದಿಲ್ಲ. ಈಗ ೫ ವರ್ಷಗಳ ಕೆಳಗೆ ನಡೆದ ಸಂಗತಿಯೊಂದನ್ನು ಕೇಳಿ. ಜೋಡಿದಾರರು ನಮ್ಮೂರ ನದಿಗೆ ಸ್ನಾನಕ್ಕೆ ಹೋಗಿದ್ದರು. ಸ್ನಾನವಾದಸಂತರ ಪರಿಷ್ಕಾರವಾಗಿ ಪಂಚೆಕಚ್ಚೆ ಪಂಚೆಯನ್ನುಟ್ಟು, ಹನ್ನೆರಡು ನಾಮ ಧರಿಸಿಕೊಂಡು, ಪೂರ್ವ ದಿಕ್ಕಿಗೆ ಎದುರಾಗಿ ಕುಳಿತುಕೊಂಡು, ಜಪವನ್ನು ಮಾಡುತ್ತಿದ್ದರು. ನದಿಯಲ್ಲಿ ೪-೫ ಜನ ಗಂಡಸರು ಸ್ನಾನಮಾಡುತ್ತಿದ್ದರು. ಹೆಂಗಸರನೇಕರು ಪಾತ್ರೆಗಳನ್ನು ಬೆಳಗುತ್ತಿದ್ದರು. ಇದ್ದಕ್ಕಿದ್ದಂತೆ ವಿಧವೆಯೊಬ್ಬಳು "ಅಯ್ಯೋ ನನ್ನ ತಟ್ಟಿ ಹೋಯಿತಲ್ಲ. ಮನೆಗೆ ಹೋದರೆ ತಲೆಗೆ ಬೂದಿ ಹುಯ್ತಾರೆ. ಅದನ್ನ ತಂದ್ಯೋಡೋರು ಯಾರೂ ಇಲ್ವೆ?” ಎಂದು ಕೂಗಿ ಅತ್ತಳು. ತಟ್ಟೆ ಯಾವಾಗಲೋ ನೀರಿನಲ್ಲಿ ತೇಲಿಹೋದುದನ್ನು ವಿಧವೆಯು ಈಗತಾನೆ ಹೋಯಿತೆಂದುಕೊಂಡಳು. ನದಿಯ ಕಡೆಗೆ ನೋಡುವುದರಲ್ಲಿ ತಟ್ಟೆಯು ಮೊದಲೇ ಹೇಳಿದ ಮಟ್ಟೆಕಲ್ಲು ಮಡುವಿನ ಬಳಿ ತೇಲಿ ಹೋಗುತ್ತಿತ್ತು. ವಿಧವೆಯು “ಪುಣ್ಯಾತ್ಮರು ಯಾರಾದರೂ ಈಜಿ ಹೋಗಿ