ಈ ಪುಟವನ್ನು ಪ್ರಕಟಿಸಲಾಗಿದೆ
೨೭ ಘಂಟೆಗಳಲ್ಲಿ
೫೧

“ಹಾಗಾದರೆ ನಾನೀಗಲೇ ಹೋಗಿ ಅವರಿಗೆಲ್ಲಾ, ನಾನು 'ನಿಮ್ಮ ಹೆಂಡತಿ' ಅಲ್ಲಾಂತ ಹೇಳಿ ಬಿಟ್ಟೇನೆ. ಅವರೇನುಬೇಕಾದರೂ ತಿಳ್ಕೊಳ್ಳಲಿ, ನನಗೇನಾಗಬೇಕಾಗಿದೆ” ಎಂದು ಕೃತಕಕೋಪದಿಂದ ಕೂಡಿ ಶಶಿಯು ಬಾಗಿಲ ಕಡೆ ಹೊರಟಳು. ಗಿರೀಶನು ಗಾಬರಿಬಿದ್ದು, ಅವಳನ್ನು ತಡೆಯುತ್ತಾ “ಇದೇನೆ ನನಗೆ ನೀನು ಮಾಡೋ ಪ್ರತ್ಯುಪ ಕಾರ ? ನಿನಗೆ ಏನೋ ಒಂದು ಆಶ್ರಯ ಒದಗಿಸೋಣಾಂತ ಪ್ರಯತ್ನ ಪಟ್ಟಿದ್ದಕ್ಕೆ ಈಗ ಸಾರ್ಧಕವಾಯ್ತು. ನೀನು ಹಾಗೆ ಮಾಡಿದರೆ ನನ್ನ ಗತಿ ...?” ಎಂದು ಅರೆ ದೈನ್ಯದಿಂದಲೂ, ಅರೆ ಕೋಪದಿಂದಲೂ ಮೆಲ್ಲನುಸುರಿದ.

“ಹಾಗಾದರೆ ಇನ್ನೊಂದು ಸಲ ಆ ಸರಣೀಲಿ ಮಾತ್ನಾಡಬೇಡಿ.”

"ಆಯ್ತು ..... ಹಾಗೆ ಮಾತಾಡೋಲ್ಲ .... ತಪ್ಪಾಯ್ತು-ಮಹಾಪ ರಾಧವಾಯ್ತು, ಶತಾವರಾಧನಯು ಏನು ಬೇಕಾದ್ರೂ ಇಟ್ಕ” ಎಂದವಳ ಕಡೆ ತನ್ನ ಸೋಲನ್ನೊಪ್ಪಿಕೊಂಡವನಂತೆ ನೋಡುತ್ತ ಹಲ್ಲು ಕಿರಿದ, ಶಶಿಯು ಹಸನ್ಮುಖಿಯಾದಳು ಗಿರೀಶನು, ...'ಯು ಸೀ' ...ನಾನೆಸಲ ಹೇಳೋದೇ ಒಂದು ಆದರೆ ನನ್ನ ಭಾವನೆಯೇ ಒಂದು .. ಇದು ನನ್ನ ಸ್ವಭಾವವಾಗಿ ಹೋಗಿದೆ ...ಆದ್ರಿಂದ ನಾನ್ಯಾ ನಾಗಲಾದ್ರೂ ಏನಾದರೂ ಅಪ್ಪಿ ತಪ್ಪಿ ನಿನ್ನ ಮನಸ್ಸಿಗೆ ನೋವಾಗೋ ಹಾಗೆ ಮಾತಾಡಿದರೆ ಅದನ್ನ ಲಕ್ಷಕ್ಕೆ ತಕೋಬೇಡಾ ಶಶಿ ” ಎಂದ. ಇಷ್ಟು ಹೇಳೋ ಹೊತ್ತಿಗೆ ಅವನ ಮುಖವೆಲ್ಲಾ ನಾಚಿಕೆಯಿಂದ ಕೆಂಪೇರಿತು. ಅವನ ಮೂಗಿನ ತುದಿಯಲ್ಲಿ ಬೆವರಿನ ಬಿಂದುಗಳು ತಲೆದೋರಿದವು. ಅವನ ಆ ಅವಸ್ಥೆಯನ್ನು ನೋಡಿ ಶಶಿಗೆ ನಗುವು ತಡೆಯಲಾಗದಷ್ಟು ಒತ್ತಿಕೊಂಡು ಬಂದರೂ ಸಾಹಸಪಟ್ಟು ತಡೆದು ಕೊಂಡಳು. ಅವನ ಮಿತ್ರರು ಹೇಳಿದ ತಂತಿ ಸುದ್ದಿಯ ವಿಚಾರವಾಗಿ ಅವನನ್ನು ಪ್ರಶ್ನಿಸಲು ಅವಳ ಮನಸ್ಸು ಆಗಿನಿಂದ ಕಾತರಗೊಂಡಿತ್ತು. ಈಗ ಸಂದರ್ಭ ಒದಗಿತೆಂದುಕೊಂಡು.

“ನಿಮ್ಮ ಸ್ನೇಹಿತರಿಗೆ ಏನಂತ ತಂತಿ ಕೊಟ್ಟಿದ್ದೀರಿ?” ಎಂದು ಕೇಳಿದಳು.