ಈ ಪುಟವನ್ನು ಪ್ರಕಟಿಸಲಾಗಿದೆ
ಬಿ, ಎಸ್ ವೆಂಕಟರಾಮ್

೬೪
ಕೊಳ್ಳಲಾರಂಭಿಸಿತು. ಅದುವರೆಗೆ ಕಿಟಕಿಯ ಕಡೆ ನೂರಾರುಬಾರಿ ತಲೆ ಹಾಕಿ ನೋಡಿದವಳಿಗೆ ಆಗ ಮತ್ತೊಮ್ಮೆ ನೋಡುವ ಧೈರ್ಯವಾಗಲಿಲ್ಲ. ಹೃದಯವು ಒತ್ತಿಯೊತ್ತಿ ಹೇಳಿದರೂ ಮನಸ್ಸು ಧೈರ್ಯತ್ತಾಳಲಿಲ್ಲ. ಕೊನೆಗೆ ಅಂಜುತ್ತಂಜುತ್ತ ಎದ್ದು ನಿಂತು ಕಿಟಕಿಯ ಮೂಲಕ ನೋಡಿದಳು. ಕಿಟ್ಟನೆ ಚೀರುವಹಾಗಾಯಿತು. ಮನದ ಉದ್ವೇಗವನ್ನು ತಡೆದುಕೊಂಡು ದಡದಡನೆ ಹೊರಕ್ಕೋಡಿ ಬಂದಳು,ಮೂರ್ತಿ ಯನ್ನಿಬ್ಬರು ಸಿಪಾಯಿಗಳು ಮೆಲ್ಲನೆ ಹಿಡಿದೆತ್ತಿಕೊಂಡು ಆವರಣ ದೊಳಕ್ಕೆ ಕರೆತಂದರು. ಹಿಂದೆಯೇ ಮತ್ತೊಬ್ಬ ಸಿಪಾಯಿಯು ಒಂದು ' ವೀಲ್‌ ಚೇರ್ ' ತಳ್ಳಿಕೊಂಡು ಒಳಕ್ಕೆ ತಂದಿಟ್ಟ. ಅದರ ಮೇಲೆ ಮೂರ್ತಿಯನ್ನು ಆ ಸಿಪಾಯಿಗಳು ಕೂಡಿಸಿ ತಮ್ಮ ಗೌರವ ಸಲ್ಲಿಸಿ ಅವನಿಂದ ಅಪ್ಪಣೆ ಪಡೆದು ಹೊರಟರು.
ಅಲ್ಲಿಯವರೆಗೂ ಅವಡುಗಚ್ಚಿಕೊಂಡು ನೋಡುತ್ತ ನಿಂತಿದ್ದ ರಾಜಿಯು ತನ್ನ ಸುತ್ತಮುತ್ತಲಿದ್ದವರ ಪರಿವೆಯೇ ಇಲ್ಲದೆ, ಹೋಗಿ ಮೂರ್ತಿಯ ಕುರ್ಚಿಯಮೇಲೆ ಬಿದ್ದು ಬಿಕ್ಕಿ ಬಿಕ್ಕಿ ಅಳಲಾರಂಭಿಸಿದಳು. ಮೂರ್ತಿಯ ಬಾಯಿಂದ “ಯಾರು ?........ರಾಜಿ ” ಎಂದೆರಡು ಶಬ್ದ ಹೊರಟಿತು.
ನಾಜಿ ವಿಮಾನದಾಳಿಗೆ ಮೂರ್ತಿಯು ಚಿಕಿತ್ಸೆ ನೀಡುತ್ತಿದ್ದ ಆಸ್ಪತ್ರೆಯೂ ಸಿಕ್ಕಿ ನೆಲಸಮವಾಗಿತ್ತು. ಆಗ ಅಳಿದುಳಿದವರಲ್ಲಿ ಮೂರ್ತಿಯೊಬ್ಬ. ಆದರೆ ಉಳಿದವರೆಲ್ಲ ಏನಾದರೊಂದು ಅಂಗವನ್ನು ಕಳೆದುಕೊಂಡಿದ್ದರು. ಮೂರ್ತಿಯ ಕಾಲುಗಳೂ, ಕಣ್ಣುಗಳೂ ಹೋಗಿ ಬಿಟ್ಟಿದ್ದವು.
ಅಕಾಂಕ್ಷೆಯೇನೋ ಹಿರಿದು ; ಆದರೆ ಅದರ ಸಾಫಲ್ಯಕ್ಕೆ ಮೂರ್ತಿಯು ನೀಡಿದ ಬೆಲೆಯು ಅದಕ್ಕೂ ಹಿರಿದು. ಡಾ|| ಮೂರ್ತಿಯು ಕ್ಯಾರ್ಪ್ಟ ಮೂರ್ತಿಯಾಗಿಯೇ ಹಿಂದಿರುಗಿದ ; ಆದರೆ ಆ ಸಾಧನೆಗೆ ಅವನು ತೆತ್ತ ಬೆಲೆಯೆಷ್ಟು ?
+++++