ಮೊರೆಯಿಟ್ಟಿತು. ಮುಖವು ಬಿಳಿಚಿಕೊಂಡಿತು. “ ನನಗಿನ್ನೂ ಹಾಳು ಸಾವು ಬರಲಿಲ್ಲವಲ್ಲಾ' ಎಂದುಕೊಂಡು ಕಂಬನಿದುಂಬಿ ರಭಸದಿಂದ ಕೋಣೆಯಿಂದ ಓಡಿಹೋದಳು.
ಮೂರ್ತಿಗೆ ನಗು ಬಂದಿತು. ರಾಜಿಯು ಹದಿನಾರಾಣೆ ಕಂದಾ ಚಾರದವಳು ! ಅವಳಿಗಿ ಮಾತುಗಳು ಅಸಭ್ಯವೆಂದು ತೋರಿ ಕೋಪ ಬಂದಿರಬೇಕೆಂದುಕೊಂಡ. ಅವಳನ್ನು ಆಗಿಂದಾಗ್ಗೆ ರೇಗಿಸಲು ಒಂದು ಒಳ್ಳೆಯ ಸಾಧನವೇ ಸಿಕ್ಕಿತೆಂದು ಹೊಟ್ಟೆ ಹುಣ್ಣಾಗುವಷ್ಟು ನಕ್ಕು ಬಿಟ್ಟ.
ನಗುನಗುತ್ತ ಅವನ ನಗು ನಿಕಟವಾಯಿತು. ಹುಚ್ಚನಂತೆ ನಕ್ಕ. ಕಣ್ಣುಗಳಲ್ಲಿ ನೀರುತುಂಬಿತು, ಓಡುವ ಮುಂಚೆ ರಾಜಿಯಾಡಿದ ಮಾತುಗಳು ಮೆಲ್ಲಮೆಲ್ಲನೆ ಅವನ ಸುತ್ತಲೂ ಮೊರೆಯಲಾರಂಭಿಸಿದವು - ನನಗಿನ್ನೂ ಹಾಳುಸಾವು ಬರಲಿಲ್ಲವಲ್ಲಾ........ ನನಗಿನ್ನೂ ಹಾಳು ಸಾವು ಬರಲಿಲ್ಲವಲ್ಲಾ” ಎಂದು ಮೆದಳು ಅದಕ್ಕೆ ಮಾರ್ದನಿ ಕೊಟ್ಟಿತು. ಕಿವಿಯಲ್ಲಿ ಮತ್ತೂ ಗಡುಸಾಗಿ ಅದೇ ಮಾತುಗಳು ಮತ್ತೊಮ್ಮೆ ಮೊರೆದವು. ಈ ಬಾರಿ ಹೃದಯವೂ ಅತಿ ಭಯಂಕರವಾಗಿ ಅದಕ್ಕೆ ಮಾರ್ದನಿ ಕೊಟ್ಟಿತು. ಕುಳಿತಿದ್ದ ಮೂರ್ತಿಯು ತಟ್ಟನೆ ಮಂಕುಬಡಿ ದವನಂತೆ ಹಾಸಿಗೆಯಲ್ಲಿ ಹಿಂದಕ್ಕೆ ಬಿದ್ದ. ಮಂಚದ ಅಂಚು ದೊಪ್ಪನೆ ತಗುಲಿತು, ಈ ಪೆಟ್ಟಿನಿಂದಾದ ನೋವನ್ನರಿಯುವಷ್ಟು ಪರಿವೆಯೂ ಮೂರ್ತಿಗಿರಲಿಲ್ಲ. ಅಲುಗಾಡದೆ ಶವದಂತೆ ಬಿದ್ದಿದ್ದ. ಕಣ್ಣೀರು ಮೆಲ್ಲನೆ ಹರಿದು ಬಂದು “ದೇವರು ತನ್ನನ್ನು ಯುದ್ಧರಂಗದಲ್ಲೇ ಸಾಯಗೊಡದೆ ಏಕೆ ಹೀಗೆ ಹಿಂತಿರುಗಿಸಿದನೆಂದು ಮನವು ಮರುಗಿತು. ಕ್ಷಣಕಾಲಾನಂತರ.... ಕ್ಷಮಿಸು, ರಾಜಿ !”....ಎಂದು ಅವನ ನೊಂದ ಹೃದಯವು ನುಡಿಯಿತು. ಅದನ್ನೇ ಅವನ ನಾಲಿಗೆಯು ಮೆಲ್ಲನೆ ಉಚ್ಚರಿಸಿತು. ಆದರೆ ಆ ನುಡಿಗೆ ಕಿವಿಗೊಡಲು ರಾಜಿಯು ಅಲ್ಲಿರಲಿಲ್ಲ.
ಮೂರ್ತಿಯು ಒಂದೆರಡು ಬಾರಿ ಕೂಗಿ, ಹೇಳಿಕಳುಹಿಸಿದರೂ
ರಾಜಿಯು ಅವನ ಕೋಣೆಯ ಕಡೆ ಅಂದು ಸುಳಿಯಲಿಲ್ಲ.
XX