———೪———
ಮೂರ್ತಿಯು ಮನೆಯ ಮೂಲೆದೇವರಾಗಿ ಕೂಡಲಾರಂಭಿಸಿ
ಐದಾರು ತಿಂಗಳುಗಳು ಕಳೆದವು. ಅವನು ಯೋಧನಾಗಿ ತೆರಳುವ
ಮುಂಚೆ ಮನೆಯವರೆಲ್ಲರ ಪ್ರೀತಿ-ವಿಶ್ವಾಸಗಳಿಗೆ ಎಷ್ಟು ಪಾತ್ರನಾಗಿ
ದ್ದನೋ, ಯುದ್ಧ ಭೂಮಿಯಿಂದ ಅಂಗಹೀನನಾಗಿ ಹಿಂದಿರುಗಿದ
ಈ ಕೆಲ ತಿಂಗಳುಗಳಲ್ಲೇ ಅಷ್ಟಕ್ಕಷ್ಟೂ ಮನೆಯವರೆಲ್ಲರ ಆಕ್ರೋಶ
ಅಸಹ್ಯಗಳಿಗೆ ಈಡಾಗಿಬಿಟ್ಟಿದ್ದ. ಇತರರ ನೆರವನ್ನೇ ಅವಲಂಬಿಸಿ
ಕೊಂಡು ತನ್ನ ಬಾಳನ್ನು ನಿರ್ವಹಿಸಬೇಕಾಗಿ ಬಂದ ತನ್ನ ಅಸಹಾಯ
ಕತೆಯ ಬಗ್ಗೆ ಅವನೇ ರೊಚ್ಚಿಗೆದ್ದು, ತನ್ನ ಆ ಸಿಟ್ಟನ್ನು ಅವಕಾಶ
ದೊರೆತಾಗಲೆಲ್ಲ ಮನೆಯ ಪ್ರತಿಯೊಬ್ಬ ವ್ಯಕ್ತಿಯಮೇಲೂ ತೀರಿಸಿ
ಕೊಳ್ಳುತ್ತಿದ್ದ. ಇದರಿಂದ ಕ್ರಮಕ್ರಮವಾಗಿ ಯಾರೊಬ್ಬರೂ ಅವನ
ಕೋಣೆಯಬಳಿ ಸುಳಿಯದಾದರು. ಕೊನೆ ಕೊನೆಗೆ ಅವನ ಕೂಗಾಟ-
ಆರ್ಭಟಗಳಿಗೆಲ್ಲ, ಕೈ ಹಿಡಿದ ಸಹಾಯಶೂನ್ಯ ರಾಜಿಯೊಬ್ಬಳು ಮಾತ್ರ
ಗುರಿಯಾಗಿ ಉಳಿದುಕೊಂಡಳು. ಅವಳ ಮಾನಸಿಕ ಶಾಂತಿಯನ್ನೂ
ಹಾರಿಸಿ, ಚಿತ್ರಹಿಂಸೆ ಕೊಡುವಷ್ಟು ಮಟ್ಟಿಗೆ ಮೂರ್ತಿ ಕ್ರೂರಿಯಾದ.
ಆ ಬಗೆಯ ಕ್ರೌರ್ಯಕ್ಕೆ ಸಿಕ್ಕಿ ಯಾವ ರೀತಿ ರಾಜಿಯು ಮಿಲವಿಲನೆ
ಒದ್ದಾಡುವಳೆಂಬ ಚಿತ್ರ ಮೂರ್ತಿಯ ಕುರುಡುಕಣ್ಣಿನ ಮುಂದೂ
ಆಗಾಗ ನಿಂತು, ಅವನಿಗೆ ಏನೋ ಒಂದು ಬಗೆಯ ವಿಕಟ ಆನಂದ
ದೊರೆಯುತ್ತಿತ್ತು. ಈ ಒಂದು ವಿಚಿತ್ರಾನಂದವನ್ನು ಮತ್ತೆ ಮತ್ತೆ
ಮೂರ್ತಿ ಪಡೆಯಲಾಶಿಸುತ್ತಿದ್ದುದರ ಪರಿಣಾಮವಾಗಿ ರಾಜಿಯು
ಒಮ್ಮೊಮ್ಮೆ ಯತ್ನ ತಪ್ಪಿ ಪ್ರತಿಭಟಿಸುವಂತಾದರೂ ಮೂರ್ತಿಯ
ಬಾಯಿಂದ ಹೊರಡಲಾರಂಭಿಸುತ್ತಿದ್ದ ಅಪಶಬ್ದಗಳನ್ನು ಕೇಳಲಾರದೆ
ಉಪಾಯಶೂನ್ಯಳಾಗಿ ಕಣ್ಣೀರು ಮಿಡಿಯುತ್ತಿದ್ದಳು. ಆಗ ಅವಳ
ಬಾಯಿಂದ ಮತ್ತೆ 'ನನಗಿನ್ನೂ ಸಾವು ಬಾರದೇ ?' ಎಂಬ ಮಂತ್ರದ
ಪುನರ್ಪಠಣೆಯಾಗುತ್ತಿತ್ತು. ಅದೊಂದೇ ಮೂರ್ತಿಯ ರಣ ಗುಂಡಿಗೆ
11