ಈ ಪುಟವನ್ನು ಪ್ರಕಟಿಸಲಾಗಿದೆ
೮೩

ಆಕಾಂಕ್ಷೆ
ಸೌಜನ್ಯ ಶೀಲ ನಡೆವಳಿಕೆ ಮತ್ತು ನುಡಿವಳಿಕೆ. ಇಂತಹ ಕಷ್ಟಗಳಿಗೆ ಸಿಕ್ಕಿ ರಾಜಿಯು ಕೊರಗುತ್ತಿದ್ದುದರ ಪರಿಚಯ ಒಂದೊಂದು ಬಾರಿ ಮೂರ್ತಿಗೂ ಆಗುತ್ತಿತ್ತು. ಆಗ ಅವನೂ ಮನನೊಂದು ರಾಜಿಗೆ ನಾಲ್ಕು ಸಹಾನುಭೂತಿಯ ಮಾತುಗಳಾಡಲೆಳಸಿ ಅವಳೂ ವ್ಯಂಗ್ಯವಾಗಿ “ ಯಾಕೆ ? ಹೆಂಗಸರೇನೂ ಇದನ್ನೂ ಅವಮಾನ' ಅಂತ ತಿಳಿದೇ ಇದ್ರೆ ಆಯ್ತಲ್ಲ; ಅವರೂ ಸಿಪಾಯಿಗಳಿಗಿಂತ ಮಹಾ ತ್ಯಾಗಿಗಳೆನ್ನಿಸಿ ಕೊಳ್ಳೋಲ್ವೆ ?” ಅಂದು ಬಿಟ್ಟು ಮೂರ್ತಿಯ ಮೇಲೆ ಸ್ವಲ್ಪ ಮಟ್ಟಿ ಗಾದರೂ ತನ್ನ ಸೇಡು ತೀರಿಸಿಕೊಳ್ಳಲೆತ್ನಿಸುತ್ತಿದ್ದಳು. ಆದರೂ ಎಷ್ಟೇ ಆಗಲಿ ಹೆಂಗರುಳು; ತಾನಂದುದಕ್ಕೆ ತಾನೇ ಮತ್ತೆ ಮರುಗಿ ಮೂರ್ತಿಯ ಬಳಿ ಕಣ್ಣೀರಿಡುತ್ತ ಕೂಡುತ್ತಿದ್ದಳು. ಆಗ ಮೂರ್ತಿಯ ಸರದಿ ! “ ನಾನೇಕೆ ಯುದ್ಧ ಭೂಮಿಯಲ್ಲೇ ಸಾಯದೆ ಹಿಂದಿರುಗಿದೆ ? ಅಲ್ಲಿ ಬೇರೆಯವರ ಸ್ಥಾನ-ಮಾನಗಳ ರಕ್ಷಣೆಗೆ ಹೋರಾಡಿದವನು, ಇಲ್ಲಿ ಕೈಹಿಡಿದವಳ ಮಾನರಕ್ಷಣೆ ಮಾಡಲೂ ಕೈಲಾಗದಷ್ಟು ಕೀಳ್ದೆಸೆಗಿಳಿದು ಕೂಡುವಂತಾಯಿತೆ ?” ಎಂದು ಗೋಳಾಡುತ್ತಿದ್ದ.
×X
ಸಂಕ್ರಾಂತಿ ಹಬ್ಬದ ದಿನ. ಮೂರ್ತಿಯ ಪುಟ್ಟ ತಂಗಿ ನಳಿನಿಯು ಅಂದು ಕಂಕುಳಲ್ಲೊಂದು ಪುಟ್ಟ ಬೊಂಬೆಯನ್ನೆತ್ತಿಕೊಂಡು ಬಂಧುಗಳ ಮನೆಗಳಿಗೆಲ್ಲ ಹೋಗಿ ಎಳ್ಳು ಬೀರುವ ಸಡಗರ. ಇದಕ್ಕೆ ನಾಲ್ಕೈದು ದಿನಗಳಿಂದ ಮನೆಯ ಹೆಂಗಸರು ಸಿದ್ಧತೆಗಳನ್ನು ಮಾಡಿಕೊಂಡು ಬಂದಿದ್ದರು. ಮಧ್ಯಾಹ್ನದ ಊಟವಾದಾಗಲಿಂದ ನಳಿನಿಗೆ ಅಲಂಕಾರ ಸಂಭ್ರಮದಿಂದ ಜರುಗಿತ್ತು. ಮೂರ್ತಿ ಈ ದೃಶ್ಯಗಳನ್ನೆಲ್ಲ ಮನಸ್ಸಿನಲ್ಲೇ ಕಲ್ಪಿಸಿಕೊಳ್ಳುತ್ತ ಮೌನದಿಂದ ಕುಳಿತು ಒಂದು ಬಗೆಯ ಆನಂದಾನು ಭವದ ಸವಿಗಾಣುತ್ತಿದ್ದ. ಮೂರ್ತಿಯ ಕಡೆಯಿಂದ ಯಾವ ಬಗೆಯ ಕೂಗಾಟವೂ ಅಂದು ಆರಂಭವಾಗದಿದ್ದುದನ್ನು ಕಂಡು ರಾಜಿಯ ಮನವೂ ಹರ್ಷಿಸುತ್ತಿತ್ತು. ಇದರಿಂದ ಅವಳಿನ್ನಷ್ಟು ಉತ್ತೇಜಿತಳಾಗಿ ನಳಿನಿಯ ಅಲಂಕಾರಗಳಿಗೆ ಹೆಚ್ಚು ಮುತುವರ್ಜಿಯಿಂದ ಗಮನ