೮೪
ಕೊಟ್ಟಿದ್ದಳು. ಕೊನೆಗೆ ಸಂಜೆ ನಳಿನಿಯನ್ನು ತಮ್ಮ ಬಂಧುಗಳ
ಮನೆಗೆ ಎಳ್ಳು ಬೀರಲು ಕರೆದೊಯ್ಯಬೇಕಾಗಿ ಬಂದಾಗಲಂತೂ ಅವಳ
ಸಂತೋಷಕ್ಕೆ ಪಾರವೇ ಇರಲಿಲ್ಲ, ಅವಸರವಾಗಿ ಹೆರಳು ಹಾಕಿಕೊಂಡು
ಬೇರೊಂದು ಸೀರೆಯನ್ನುಟ್ಟುಕೊಳ್ಳುವ ಶಾಸ್ತ್ರ ಮುಗಿಸಿ ಕೈಯಲ್ಲೊಂದು
ಅರಿಶಿನ ಕುಂಕುಮ ಇತ್ಯಾದಿಗಳ ಬೆಳ್ಳಿಯ ತಟ್ಟೆಯನ್ನೆತ್ತಿಕೊಂಡಳು.
ಸಕ್ಕರೆ ಅಚ್ಚು, ಕೊಬ್ಬರಿ ಬಟ್ಟಲುಗಳು ಕಬ್ಬಿನ ತುಂಡುಗಳು ತುಂಬಿ
ದೊಂದು ಬುಟ್ಟಿಯೂ, ಎಳ್ಳಿನ ಪಾತ್ರೆಯೂ ಮನೆಯ ಆಳಿನ ಪಾಲಿಗೆ
ಗಂಟುಬಿದ್ದವು. ಸರಿ ! ಇನ್ನು ನಳಿನಿಯು ರಾಜಿಯ ಕೈಹಿಡಿದು,
ಮನೆಯಿಂದ ಜಪಾನೀ ಬೊಂಬೆಯಹಾಗೆ ಮುದ್ದು ಮುದ್ದಾಗಿ ಹೊರ
ಬಿದ್ದಳು.
ದಾರಿಯಲ್ಲಿ ಈ ಹೆಣ್ಣು ಮಗುವಿನ ಅಲಂಕಾರವನ್ನೇ ಎಲ್ಲರೂ
ನೋಡಿ ಬೆರಗಾಗುತ್ತಿದ್ದಾರೆಂದು ರಾಜಿ ಒಂದು ರೀತಿಯಲ್ಲಿ ಹೆಮ್ಮೆ
ಪಟ್ಟು ಕೊಂಡು ಮುಂದೆ ನಡೆದಿದ್ದಳು. ಈ ಜೋಡಿ ನಿಜವಾಗಿಯೂ
ಜನರ ಮನವನ್ನಾಕರ್ಷಿಸುವಂತಿತ್ತು. ಅದರಂತೆಯೇ ನಾಲ್ಕಾರು
ಮಂದಿ ರಸಿಕರ ತಂಡವೊಂದು ರಸ್ತೆಯ ಮಗ್ಗುಲಲ್ಲೇ ನಿಂತಿದ್ದುದು
ಇವರನ್ನು ಹಿಂಬಾಲಿಸಿತು. ಅವರ ಮಾತುಗಳೂ ಒಂದು ನಿಕಟ
ಸರಣಿಯಲ್ಲಿದ್ದು, ರಾಜಿಯ ಕಿವಿಗೆ ಬೀಳಲೆಂದೇ ಉದ್ದೇಶಪೂರ್ವಕವಾಗಿ
ಗಟ್ಟಿಯಾಗಿದ್ದವು. ರಾಜಿಯು ಅಸಹ್ಯಗೊಂಡು ಕೊಂಚ ವೇಗವಾಗಿ
ಮುನ್ನಡೆದು ನಳಿನಿಯನ್ನು ಹೆಚ್ಚು ಕಡಿಮೆ ಎಳೆದೊಯ್ಯಲಾರಂಭಿಸಿದಳು.
ಅವಳ ನಡಿಗೆಯ ಗತಿ ಹೆಚ್ಚಿದಂತೆ ಹಿಂಬಾಲಿಸುತ್ತಿದ್ದವರ ನಡಿಗೆಯ
ವೇಗವೂ ಹೆಚ್ಚಲಾರಂಭಿಸಿತು. ರಾಜಿಯ ಮನೆಯ ಆಳು ಹಿಂದೆಬಿದ್ದ.
ಅವನಿಗ್ಯಾವ ಆತುರವೂ ಇರಲಿಲ್ಲವಾದ್ದರಿಂದ ಅವನು ನಿಧಾನವಾಗಿಯೇ
ನಡೆದು ಬರುತ್ತಿದ್ದ.
ರಾಜಿಯು ಚೌಕದಲ್ಲೊಮ್ಮೆ ನಿಂತು ಹಿಂದಕ್ಕೆ ಒಂದು ಬಾರಿ
ತಿರುಗಿ, ಆಳಿಗೆ ಬೇಗ ನಡೆದುಬಾರೆಂದು ಕೂಗಿ ಹೇಳಿದಳು. ಹಿಂಬಾಲ