ಪ್ರಶ್ನೆ. ಆದರೆ ಗ್ರಂಧಕರ್ತ ಹಾಗೆಂದು ಕೇಳುವ ಅವಶ್ಯತೆಯೂ ತೋರಲಿಲ್ಲ. ತಾವಾಗಿಯೇ ಅಭಿಪ್ರಾಯ ಹೇಳಲು ಓದುಗರು ಉತ್ಸುಕರಾಗಿದ್ದರು.
ನಾನು ಮಾತಾಡಲು ಅವಕಾಶ ಕೊಡದೆ, ಒಂದು ಕುರ್ಚಿಯನ್ನು
ನನ್ನೆಡೆಗೆ ಎಳೆದು ಕುಳಿತು, ಅವರು ಅಂದರು:
"ಮನೆಕೆಲಸ ಮುಗಿದಾಗ ಹೊತ್ತು ಬಹಳನಾಯ್ತು ನಿನ್ನೆ. ಆದರೂ
ನಡುರಾತ್ರಿಯಹೊತ್ತಿಗೆ ಹಾಳೆಗಳನ್ನು ತೆರೆದೆ ಇದ್ದುದನ್ನು ಇದ್ದ ಹಾಗೆಯೇ ಹೇಳಲೆ?"
ಉಗುಳು ನುಂಗುವಹಾಗಾಯಿತು ನನಗೆ ಆದರೂ ತೋರಿಸಿಕೊಳ್ಳದೆ
ಹೇಳಿದೆ:
"ಟೀಕಿಸಿ ನಿರ್ದಾಕ್ಷಿಣ್ಯವಾಗಿ ಹೇಳಿ ಓದುಗರ ಮನಸ್ಸಿನಲ್ಲಿ ಇರು
ವುದನ್ನು ಇರುವ ಹಾಗೆಯೇ ತಿಳಿಯುವುದರಿಂದ ಬರೆಯುವವರ ಆರೊಗ್ಯಕ್ಕೆ ಹಿತವಾಗ್ತದೆ!"
"ಈ ಕಾದಂಬರೀದು ಆಮೆಯ ನಡಿಗೆ ಅನಿಸ್ತು."
"ಹೂಂ"
"ಆದರೆ ಹಾಗಾದ್ದು ಸ್ವಲ್ಪಹೊತ್ತುಮಾತ್ರ ನನ್ನ ಆಸಕ್ತಿ ಕೆರಳಿ
ಸೋದರಲ್ಲಿ ಯಶಸ್ವಿಯಾದಳು ನಿಮ್ಮ ಕಥಾನಾಯಿಕೆ ತುಂಗಮ್ಮ ಆಮೇಲೆ ಪುಸ್ತಕ ಕೆಳಗಿಡದೆ ಒಂದೇ ಉಸುರಿಗೆ ಓದಿದೆ ಕೊನೆಯ ಅಧ್ಯಾಯವನ್ನು ಮುಗಿಸಿದಾಗ ಬೆಳಿಗ್ಗೆ ಘಂಟೆ ಐದಾಗಿತ್ತು."
"ಸಾಹಿತ್ಯದಲ್ಲಿ ನಿಮಗಿರೋ ಶ್ರದ್ಧೆ ಪ್ರಶಂಸನೀಯ."
"ಹಾಗಲ್ಲ ಪುಟ ಹಾರಿಸಿಕೊಂಡು ಓದುವುದಾಗಲಿಲ್ಲ
ನನ್ನಿಂದ....ಅಲ್ಲದೆ, ನೀವು ಆರಿಸಿಕೊಂಡಿರುವ ವಸ್ತು---ಚಿತ್ರಿಸಿರುವ ಜೀವನ---ನನ್ನ ಪಾಲಿಗೆ ಹೊಸತು. ಆಸಕ್ತಿಯಿಂದ ಓದಿದೆ"
ಅಷ್ಟು ಹೇಳಿ ಅವರು ಒಮ್ಮೆಲೆ ಸುಮ್ಮನಾದರು. ಇದು ನನ್ನ ಸರದಿಯೇನೋ ಎಂದು ಯೋಚಿಸುತ್ತಿದ್ದಾಗಲೇ ಅವರೇ ಮಾತು ಮುಂದುವರಿ
ಸಿದರು:
"ಪುಸ್ತಕ ಓದಿ ಮುಗಿದಮೇಲೆ ನನ್ನ ಕುತೂಹಲ ಸ್ವಲ್ಪ ಹೆಚ್ಚಿದೆ.