ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚಿರಸ್ಮರಣೆ ೧೫೮

  ಘೌಜದಾರರು ಹೊಸದುಗರ್ಗಕ್ಕೆ ಒಯ್ಯಲೆಂದು ಕಯ್ಯೂರಿನ ತರಕಾರಿ ಹಣ್ಣು

ಹೊಂಪಲುಗಳು ದೊಡ್ಡ ಬುಟ್ಟಿ ಸಿದ್ಧವಾಯಿತು. ಹೊತ್ತುಕೊಳ್ಳಲು ಪೋಲೀಸರು ಮುಂದಾದರೂ, ರೈತರೆದುರು ಪೋಲೀಸರ ಘನತೆಗೆ ಚ್ಯುತಿ ಬರಬಾರದೆಂದು, ಚರ್ವತ್ತೂರು ರೈಲು ನಿಲ್ದಾಣದವರೆಗೂ ಒಬ್ಬ ಆಳನ್ನು ನಂಬಿಯಾರರು ಕಳುಹಿಸಿಕೊಟ್ಟರು.

  ಬೀಳ್ಕೊಡುತ್ತ ಅವರು, ಅಗಾಗ್ಗೆ ಭೇಟಿಕೊಡುತ್ತಿರಲು ಆಹ್ವಾನ ನಿಡಿದರು.

ಅವರೆಂದರು:

  "ಈ ಸಲ ಎಲ್ಲ ಅವಸರದಲ್ಲೇ ಆಯ್ತು. ಮುಂದಿನ ಸಾರಿ ಬಂದಾಗ ಏಳೆಂಟು

ದಿವಸ ಒಲ್ಲೇ ಕ್ಯಾಂಪ್ ಮಾಡಿ. ಕಯ್ಯೂರಿನ ಆತಿಥ್ಯ ಎಂಥದೂಂತ ತೋರಿಸಿಕೊಡ್ತೇನೆ!...."

  ....ಆ ರಾತ್ರಿಯೇ ರೈತಸಂಘದ ಕಯ್ಯೂರಿನ ಸಭೆ ಸೇರಿ ಹಗಲು ಹೊತ್ತು

ನಡೆದ ಘಟನೆಗಳನ್ನು ಪರಿಶೀಲಿಸಿತು. ನೀಲೇಶ್ಟರದಿಂದ ಕತ್ತಲಾದಾಗ ಹಿಂತಿರುಗಿದ ಮಾಸ್ತರೂ ಸಭೆಯಲ್ಲಿ ಭಾಗವಹಿಸಿದರು.

  ತಾವು ಇಲ್ಲದೇ ಇದ್ದಾಗ ಪೋಲೀಸರ ಆಗಮನದಂತಹ ಮುಖ್ಯ 

ಘಟನೆಯೊಂದು ಜರಗಿ ಎಲ್ಲವೂ ಸರಿಯಾದ ರೀತಿಯಲ್ಲೇ ನಡೆದುದನ್ನು ಕಂಡು, ಮಾಸ್ತರಿಹಗೆ ಸಂತೋಷಾವಾಯಿತು. ತಾವು ಕಯ್ಯೂರು ಬಿಡಬೇಕಾದ ಪರಿಸ್ಥಿತಿಯನ್ನು ಕುರಿತು ನೀಲೇಶ್ವರದಲ್ಲಿ ಸಹಬಾಂಧವರೊಡನೆ ಚರ್ಚಿಸಿ ಬರಲು ಹೋಗಿದ್ದ ಅವರಿಗೆ, ನಿಶ್ಟಿಂತೆತಿಂದ ತಾವಿನ್ನು ಈ ಊರಿನಿಂದ ಹೊರಡಬಃಉದೆಂದು ತೇರಿತು.

  ಸಂಘ ಮುಂದೆ ಮಾಡಬೇಕಾದ ಕೆಲಸ ಕಾರ್ಯಗಳ ಬಗೆಗೆ ದೀರ್ಘ ವರ್ಚೆ

ನಡೆಯಿತು. ಬರಲಿದ್ದುದು ಮಳೆಗಾಲ. ರೈತರಿಗೆ ಹೆಚ್ಚು ಬಿಡುವಿರುವ ಸಮಯ. ಆಗ ಹಳ್ಳಿಯ ರೈತರನ್ನು ಹಲವಾರು ಗುಂಪುಗಳಾಗಿ ವಿಂಗಡಿಸಿ, ಕಥೆ ಹಾಡುಗಾರಿಕೆಗಳ ಕಾಲಕ್ಷೇಪದ ಜತೆಗೆ ಅಬ್ಯಾಸ ಕೂಟಗಳು ನಡೆಯಬೇಕೆಂದಾಯಿತು. ಇನ್ನು ಓದು ಬಾರದ ಗಂಡಸರು ಹೆಂಗಸರಿಗೆ ಅಲ್ಲಲ್ಲಿ ತರಗತಿಗಳು. ವರ್ಷಕ್ಕೆ ಒಂದಾಣೆ ಪಡೆದು ಪ್ರಾಯಸ್ಥರಾದ ರೈತರೆಲ್ಲರನ್ನೂ ಸಂಘಕ್ಕೆ ಸೇರಿಸುವುದು.

  ಮಳೆಗಾಲ ಮುಗಿಯುವ ಹೊತ್ತಿಗೆ ಸಂಘಕ್ಕೋಸ್ಕರ ಸ್ಟಂತದ್ದೊಂದು

ಗುಡಿಸಲನ್ನು ಕಟ್ಟುವ, ಅಲ್ಲಿ ವಾಚನಾಲಯ ತೆರೆಯುವ, ಸಲಹೆ ಬಂತು. ಅದಕ್ಕೆ, ಊರಿನ ಕೇಂದ್ರದಲ್ಲೇ ಎಲ್ಲಾದರೂ ಜಾಗ ಸಿಗುವುದೇನೋ ಎಂದು ಅವರು ವಿಚಾರಿಸಿದರು.