ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬೦ ಚಿರನಸ್ಮರಣೆ

  ಸಮಿತಿಯ ಒಬ್ಬ ಸದಸ್ಯ ನುಡಿದ:
  "ಜಾಗ ಗೊತ್ತು ಮಾಡುವ ಜವಾಬ್ದಾರಿ ನನಗಿರಲಿ. ತಂದೆಗೂ ಅಣ್ಣನಿಗೂ

ಹೇಳಿ ಒಪ್ಪಿಸ್ತೇನೆ. ನಮ್ಮ ಹೊಲದ ಉತ್ತರಕ್ಕೆ ಖಾಲಿ ಜಾಗ ಇದೆಯಲ್ಲ ಅಲ್ಲೇ ಕಟ್ಟಬಹುದು. ಕಯ್ಯೂ ರಿಗೆಲ್ಲ ಅದು ಕೇಂದ್ರವೇ."

  ಆ ಸಲಹೆ ಮಾಡಿದವನು ಪೊಡವರ ಕುಂಇಂಬು.
  ಅಪ್ಪುವಿನ ತಂದೆತೆಂದ:
  "ನಮ್ಮ ಜಾಗದಲ್ಲೂ ಕಟ್ಟಬಹುದಾಗಿತ್ತು. ಆದರೆ ಇದು ಹಳ್ಳಿಗೆ

ಕೇಂದ್ರವಲ್ಲ.... ಆಗಲಿ. ಹಾಗೇ ಆಗಲಿ. ಪೊಡವರ ಕುಂಇಂಬು ಹೇಳಿದ್ದನ್ನು ವರದಿ ಪುಸ್ತಕದಲ್ಲಿ ಬರ್ಕೊಳ್ಳಿ."

  ಸೀಮೀಣ್ಣೆ ದೀಪದ ಹೊಗೆ ಬೆಲಕಿನಲ್ಲಿ, ನೆಲದ ಮೇಲೆ ಮಂಡಿಯೂರಿ,

ಚಿರುಕಂಡ ಅದನ್ನು ಬರೆದುಕೊಂಡ; ನೇರವಾಗಿ ಕುಳಿತು, ಕೆಳಕ್ಕೆ ನೋಡುತ್ತ ಇತರರಿಗೆ ಕೇಳಿಸುವಂತೆ ಬರೆದುದನ್ನೋದಿದ.

  ಹಿಂದೆ ಗೋಡೆಗೊರಗಿ ಕುಳಿತಿದ್ದರು ಮಾಸ್ತರು. ಅವರ ಕಣ್ಣು ಮಂಜಾಯಿತು.

ಯಾರಿಗೂ ಕಾಣಿಸದಂತೆ, ಭುಜದ ಮೇಲಿದ್ದ ಅಂಗವಸ್ರ್ತವನ್ನೆತ್ತಿ ಅವರು ತಮ್ಮ ಕಣ್ಣಗಳಿಗೆ ಒತ್ತಿಕೊಂಡರು.

                   ೧೩

ಒಂದು ಸಂಜೆ ಕಣ್ಣ ಅಪ್ಪುವನ್ನು ಹುಡುಕಿ ಬಂದು, :ರಾತ್ರೆಯ ಊಟಕ್ಕೆ ನಮ್ಮನೆಗೆ ಬಾ ರಾಜ" ಎಂದ.

  "ಕೇಳಿದಿಯಾ ಅಮ್ಮ?" ಎಂದು ಅಪ್ಪು ತಾಯಿಯನ್ನು ಕರೆದ.
  "ಏನೋ ಕಣ್ಣ ಸಮಾಚಾರ? ದೇವಕಿಗೆ ಬಯಕೆ ಊಟವೇನೋ?" ಎಂದಳು

ಅಪ್ಪುವಿನ ತಾಯಿ.

  ಆ ಊಹೆಯಲ್ಲಿ ನಿಜಾಂಶವಿದ್ದುದರಿಂದ ಕಣ್ಣನ ಮುಖ ರಂಗೇರಿತು. ಆತ

ಮಾತನಾಡಲಿಲ್ಲ.

  "ಆಹ್ಹಾ!" ಎಂದ ಅಪ್ಪು, "ಅಮ್ಮ ಊಹಿಸಿದ್ದು ನಿಜವೇ." ತಾಯಿಯತ್ತ ನೋಡಿ

ಆತನೆಂದು: "ಅಲ್ಲ, ನಿನಗೆ ಹ್ಯಾಗಮ್ಮ ಹೊಳೀತು ಇದು?"

  "ಸಾಕು ಸಾಕು! ಎಲ್ಲರೂ ನಿನ್ನ ಹಾಗೆ ಹಗಲು ರಾತ್ರೆ ಸಂಘ--ಬಾವುಟಗಲ

ಧ್ಯಾನ ಮಾತ್ರ ಮಾಡ್ತಾರೇಂತೆ ತಿಳಿದ್ಯಾ?"

  ಅಪ್ಪು ನಕ್ಕ; ಮರುಮಾತನ್ನಾಡಲಿಲ್ಲ. ಕಣ್ಣನತ್ತ ತಿರುಗಿ ಹೇಲಿದ: