ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೭೮ ಚಿರಸ್ಮರಣೆ ಉದ್ದೇಶಕ್ಕೋಸ್ಕರ ಊರು ಬಿಟ್ಟರು:ಒಬ್ಬ ಅಪ್ಪುವಿನ ತಮ್ಮ, ಇನ್ನೊಬ್ಬ ಕುಂಞ್ಂಬುವಿನ ತಮ್ಮ.ರೈತರು ತಮ್ಮ ಮಕ್ಕಳನ್ನು ಹೆಚ್ಚಿನ ವಿಧ್ಯಾಭ್ಯಾಸಕ್ಕಾಗಿ ಹೊರಗೆ ಕಳುಹಿಸಿದುದು ಅದೇ ಮೊದಲು.ಅದು ಸಾಮಾನ್ಯ ವಿಷಯವಾಗಿರಲಿಲ್ಲ.

ಮಕ್ಕಳೇ ಇಲ್ಲದ ಕೋರನೆಂದ:

'ರೈತ ಮಕ್ಕಳೆಲ್ಲ ಮಹಾ ದಡ್ಡರೂಂತ ಹೇಳ್ತಿದ್ರು.ಈಗ ನೋಡೋಣ.ಯಾರ ಹುಡುಗರು ಚೆನ್ನಾಗಿ ಕಲೀತಾರೆ,ಯಾರ ಹುಡುಗರು ಮೇಲಕ್ಕೆ ಬರ್ತ್ತಾರೇಂತ,ಈಗ ನೋಡೋಣ."

ಅಂಥ ಸಂದರ್ಭಗಳಲ್ಲೆಲ್ಲ,ಆ ಮಾತು ಬಂದಾಗಲೆಲ್ಲ,ಕೋರನಿಗೂ ಇತರರಿಗೂ ಮಾಸ್ತರು ನೆನಪಾಗುತ್ತಿತ್ತು.
ಮಾಸ್ತರು ಹೋದಮೇಲೆ ಅವರಿಂದ ಮೊದಲ ಕಾಗದವನ್ನು ಯಾರೋ ತಂದು ಕೊಟ್ಟಾಗ,ರೈತರು ತಂಡತಂಡವಾಗಿ ಬಂದು,"ಏನು ಬರೆದಿದ್ದಾರೆ?"ಎಂದು ಕೇಳಿ ಹೋದರು.ಎಲ್ಲರೂ ಓದಿಯಾದ ಮೇಲೂ ಓದಿಸಿ ಕೇಳಿಯಾದ ಮೇಲೂ ಅಪ್ಪು ಅದನ್ನು ಮನೆಗೊಯ್ದು ಒಬ್ಬನೇ ಓದಿದ;ಹೆಂಡತಿ ಜಾನಕಿಗೆ ಅದನ್ನು ತೋರಿಸಿದ.
ಅಪ್ಪುವಿನ ತಂದೆಯೆಂದ:
ಮಾಸ್ತರು ಚಿನ್ನದಂಥ ಮನುಷ್ಯ.ಅವರನ್ನ ಇಲ್ಲೇ ಇರಿಸಿಕೊಳ್ಳೋ ಅದ್ರುಷ್ಟ ನಮಗಿಲ್ದೇಹೋಯ್ತು.ಇದ್ದಾಗಲೂ ಅವರನ್ನು ನಾವು ಸರಿಯಾಗಿ ನೋಡಿಕೊಳ್ಲಿಲ್ಲ."
ಹೊಸ ಮಾಸ್ತರು ಯಾರು ಬರುವರೋ ಎಂದು ಹಲವರು ಕುತೂಹಲದಿಂದ ಕಾದು ನೋಡಿದರು.ಹಾದಿ ನೋಡಿದರು.ಆದರೆ ಯಾರ ಸುಳಿವು ಇರಲಿಲ್ಲ.ಉಪಾಧ್ಯಾಯರು ಸಿಗದ ನೆಪ ಹೇಳಿ ಜಮೀನ್ಡಾರರು ಶಾಲೆಯನ್ನೇ ಮುಚ್ಚಿಬಿಡಬಹುದೆಂದು ರೈತರಿಗೆ ಸಂದೇಹ ಬಂತು.ಅವರ ಆಪೇಕ್ಷೆಯಂತೆ, ಸಂಘದ ಕಾರ್ಯದರ್ಶಿ ಚಿರುಕಂದನೂ ವಯಸ್ಸಾದ ಇಬ್ಬರು ರೈತರೂ ಜಮೀನ್ದಾರರಿಬ್ಬನ್ನು ಕಾಣಲು ಹೋದರು.
ನಂಬಿಯಾರರು ಬಂದವರನ್ನು ಕಡೆಗಣ್ಣಿನಿಂದ ನೋಡಿ, "ನೀವು ಯಾರು ಕೇಳೋದಕ್ಕೆ?"ಎಂದು ಅಬ್ಬರಿಸಿದರು.

"ನಾವು ಸಂಘದವರು." "ಸಂಘಕ್ಕೂ ನಮಗೂ ಯಾವ ಸಂಬಂಧವೂ ಇಲ್ಲ." ಶಾಲೆ ನಡೆಸೋ ಮುಖ್ಯಸ್ಥರು ನೀವಾದ್ದರಿಂದ ನಮ್ಮ ಮಕ್ಕಳ ವಿಧ್ಯಾಭ್ಯಾಸಕ್ಕೆ ಸಂಬಂಧಿಸಿ ಮಾತಾಡೋದಕ್ಕೆ ನಾವು ನಿಮ್ಮಲ್ಲಿಗೆ ಬಂದಿದ್ದೇವೆ."