ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚಿರಸ್ಮರಣೆ ೧೭೯ ಹಾಗೆ ಹೇಳಿದ ಚಿರುಕಂಡನನ್ನು ನಂಬಿಯಾರರು ಮೇಲಿನಿಂದ ಕೆಳಗಿನವರೆಗೂ ನೋಡಿ ಕುತ್ಸಿತನಗೆ ನಕ್ಕು,ಅಂದರು:

"ಆಗಲೇ ಮಕ್ಕಳೂ ಅದರೇನಪ್ಪ ನಿನಗೆ?"
ಆ ಪ್ರಶ್ನೆ ಕೇಳಿಯೂ ಕೇಳಿಸದಂತೆ ಚಿರುಕಂಡನೆಂದ:

"ಇಲ್ಲಿ ಇನ್ನೂ ಗ್ರಾಮಪಂಚಾಯಿತಿ ಇಲ್ಲ.ನೀವು ಆದಕ್ಕೆ ಆಸ್ಪದವನ್ನೇ ಕೊಟ್ಟಿಲ್ಲ.ಇದ್ದಿದ್ದರೆ ಪಂಚಾಯಿತಿಯವರೇ ಶಾಲೆ ನಡೆಸ್ತಿದ್ರು." "ಓಹೋ! ನಡೆಸದೇನು ಮಾಡ್ತಿದ್ರು?ಈಗಲೂ ಪಂಚಾಯಿತಿ ಸ್ಥಾಪಿಸೋದಕ್ಕೆ ನಿಮ್ಮನ್ನು ಯಾರು ತಡೀತಾರೆ?ಬರೀರಿ ಸರ್ಕಾರಕ್ಕೆ.ಬರ್ಲಿ ಕಲೈಕ್ಟರು ಚುನಾವಣೆ ನಡೆಸ್ಲಿ!" "ಮಾಡಬೇಕಾಗಿ ಬಂದಾಗ ಅದನ್ನು ಮಾಡಿಯೇ ಮಾಡ್ತೇವೆ,ಆದರೆ ಈಗ ಶಾಲೆ ಮುಚ್ಚಿರೋದು ಸರಿಯಲ್ಲ." "ನಿಮ್ಮ ಸಂಘದಲ್ಲಿ ಒಬ್ಬ ಗುಮಾಸ್ತ ಇಲ್ಲದೆ ಬಹಳ ತೊಂದರೆಯಾಗಿದೆ,ಅಲ್ಲ? ಯಾವನಾದರೂ ಪೇಪರು ಓದೋ ಮಾಸ್ತರು ಬಂದರೆ ಸರಿಯಾಗ್ತದೆ!" ಕೆಣಕುವ ಎಂತಹ ನುಡಿಗಳಿದ್ದರೂ ರೇಗದೆಯೇ ಮಾತನಾಡುವ ಚಿರುಕಂಡನ ಸಾಮರ್ಥ್ಯ ವಿಸ್ಮಯಕರವಾಗಿತ್ತು. "ನಮ್ಮ ಸಂಘದಲ್ಲಿ ಕೆಲಸ ಮಾಡೋರಿಗೇನೂ ಈಗ ಅಭಾವ ಇಲ್ಲ ಹುಡುಗರಿಗೆ ಪಾಠ ಹೇಳಿಕೊಡೋದಕ್ಕೆ ಮಾಸ್ತರರಿದ್ದರೆ ಸಾಕು." ಚಿರುಕಂಡನ ನಿರ್ಭೀತ ಶಾಂತ ಮುಖಮುದ್ರೆಯನ್ನು ಕಂಡು ಸಹಿಸುವುದಾಗಲಿಲ್ಲ ನಂಬಿಯಾರರಿಂದ. ಅವರು ಕೂಗಾಡಿದರು: "ಹೋಗಿ!ಹೋರಠೋಗಿ!ನಾನು ಶಾಲೆ ತೆರೆಯೋದಿಲ್ಲ.ನನ್ನಿಷ್ಟ!"

ಕೊನೆಯದಾಗಿ ಚಿರುಕಂಡನೆಂದ.

"ಇನ್ನು ಸ್ವಲ್ಪ ದಿನ ಕಾದು ನೋಡ್ತೇವೆ. ಆಗಲೂ ಶಾಲೆ ಶುರುವಾಗದಿದ್ರೆ ಮುಂದಿನ ಕ್ರಮ ಕೈಗೊಳ್ತೇವೆ." ಕಟ್ಟ ಕಡೆಯದಾಗಿ ಮಾತು ತನ್ನದೇ ಆಗಬೇಕೆಂದು ನಂಬಿಯಾರರೆಂದರು: "ಓಹೋ! ಸಂತೋಷವಾಗಿ ಹಾಗೆ ಮಾಡಿ!" ಅಲ್ಲಿಂದ ಸಂತೋಷವಾಗಿ ಹಾಗೆ ಮಾಡಿ!" ಅಲ್ಲಿಂದ ಸಂಘದ ಪ್ರತಿನಿಧಿಗಳು ನಂಬೂದಿರಿಯಲ್ಲಿಗೆ ಹೋದರು. "ಸಂಘದವರು!ಬನ್ನಿ-ಬನ್ನಿ-ಏನ್ಸಮಾಚಾರ?"ಎಂದು ಆತ ದೇಶಾವರದ ನಗೆ ಬೀರಿದರು. ವಿಷಯವೇನೆಂದು ಚಿರುಕಂಡ ವಿವರಿಸಿದಾಗ,ಆ ಜಮೀನ್ದಾರರೆಂದರು: