ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೮೦ ಚಿರಸ್ಮರಣೆ "ಏನಪ್ಪ ಮಾಡೋದು?ನಂಬಿಯಾರರಿಗೋ ಬೇರೆ ಮಕ್ಕಳಿಲ್ಲ.ನನಗೆ ಇದ್ದಾರೆ. ಶಾಲೆ ಮುಚ್ಚಿದರೂ ಈಗ ಆವರಿಗೆ ಚಿಂತೆಯಿಲ್ಲ.ಚಿಂತೆ ನನಗೆ ಮಾತ್ರ! ನಮ್ಮಿಂದಾಗಿ ನಿಮಗೂ ತೊಂದರೆ.ನಮ್ಮ ಸಣ್ಣ ಹುಡುಗರನ್ನೂ ನೀಲೇಶ್ವರಕ್ಕೇ ಕಳಿಸಿ,ಅಲ್ಲಿಯೇ ಮನೆಮಾಡೋಣಾಂತ ಒಂದು ಯೋಚನೆಯೂ ನನಗಿದೆ.... ಏನಪ್ಪ ಮಾಡೋದು?"

"ನಿಮ್ಮಿಷ್ಟ ಶಾಲೆ ಮುಚ್ಚಿದರೆ ಎಷ್ಟೋ ಹುಡುಗರಿಗೆ ತೊಂದರೆಯಾಗ್ತದೆ.ಶಾಲೆಗೇಂತ ವರ್ಷವೂ ಎಲ್ಲ ರೈತರೂ ವಂತಿಗೆ ಕೊಡ್ತಾ ಬಂದಿದ್ದಾರೆ. ಈವರೆಗೂ ಯಾರೂ ಅದರ ಲೆಕ್ಕ ಕೇಳಿಲ್ಲ.ಈಗ ಮುಚ್ಚೋದಕ್ಕೆ ಕಾರಣವಾದರೂ ಏನು? ಕಾರಣ ಕೇಳೋ ಹಕ್ಕಾದರೂ ರೈತರಿಗಿದೆಯಷ್ಟೆ?"
ನೀಳವಾದ ಕರಿಯ ದೇಹ, ತಳ್ಳಗಿನ ಕುಡಿಮೀಸೆ.ಕಿರಿದಾಗಿ ಕತ್ತರಿಸಿದ್ದ ಕ್ರಾಪು, ಶುಭ್ರವಾದ ಬಿಳಿಯ ಅಡ್ಡಪಂಚೆ,ನೀಳವಾದ ಬಿಳಿಯ ಶರಟು-ಹಾಗಿದ್ದ ಚಿರುಕಂಡನನ್ನು ನಂಬೂದಿರಿ ನೋಡಿಯೇ ನೋಡಿದರು.ಈತ ಕಯ್ಯೂರಿನವನೇ ತಾನೆ? ಎಂದು ಅವರಿಗೆ ಆಶ್ಚರ್ಯವಾಯಿತು.ತಮಗೆ ತಿಳಿಯದೆಯೇ ಜನ ಹೇಗೆ ಬದಲಾಗಿದ್ದಾರೆ ಎಂದು ಅಚ್ಚರಿಯೂ ಅನಿಸಿತು.ಚಿರುಕಂಡ ಏನು ಹೇಳುತ್ತಿದ್ದನೆಂಬುದನ್ನು ಆಗಲೆ ಮರೆತಿದ್ದ ಆವರು, ಕನಸಿನಿಂದ ಎಚ್ಚೆತ್ತವರೆಂತೆ ಅಂದರು:
"ಹೂ.ಏನಂದಿರಿ?ಮುಚ್ಚೋದಕ್ಕೆ ಏನು ಕಾರಣ ಅಂತ್ಲೆ? ನನಗೆ ಗೊತ್ತಿಲ್ಲಪ್ಪ ನಂಬಿಯಾರನ್ನೇ ಕೇಳ್ಬೇಕು.ಶಾಲೆ ತೆರೀಲೇಬೇಕೂಂತ ಹಿಂದೆ ಗಲಾಟೆ ಮಾಡಿದವರೂ ಅವರೇ,ಈಗ ಮುಚ್ಚಿರೋದೂ ಅವರೇ."
"ಆದರೂ ನೀವಿಬ್ಬರೂ ಇದಕ್ಕೆ ಕಾರಣ ಅಂತ ಜನ ಆಡಿಕೊಳ್ತಾರೆ."
ವೈರಿಬಣದಲ್ಲಿ ಬಿರುಕು ಹುಟ್ಟಿಸುವ    ಶಲವಿತ್ತು ಚಿರುಕಂಡನ ಆ ಮಾತಿನಲ್ಲಿ.
"ಛೇ!ಛೆ!ಅದು ಸರಿಯಲ್ಲ.ನಂಬಿಯಾರಿಗೆ ನಾನು ಹೇಳ್ತೀನಪ್ಪ;ಬೇಗ ಯಾರನ್ನಾದರೂ ಕರೆಸೀಂತ ಹೇಳ್ತೇನೆ."
ಸಂಘದ ನಿಯೋಗ ಹಿಂತಿರುಗಿತು.
ನಂಬೂದಿರಿ ನಂಬಿಯಾರರೊಡನೆ ಅದೇನು ಮಾತನಾಡಿದರೋ ಬಿಟ್ಟಿರೋ ಶಾಲೆ ಮತ್ತೆ ಶುರುವಾಗಲೇ ಇಲ್ಲ.
ಸಂಘದ ಕಾರ್ಯಸಮಿತಿ ಮತ್ತೆ ಸಭೆ ಸೇರಿ ಚರ್ಚಿಸಿ ಶಾಲೆಯ ವಿಶ್ವಸ್ಥ ಸಮಿತಿಯ ಮುಖ್ಯಸ್ಥರಿಗೆ ಪತ್ರ ಬರೆಯಲು ತೀರ್ಮಾನಿಸಿತು.
ಪತ್ರದ ಸಾರಾಂಶವಿಷ್ಟು:"ಶಾಲೆಯ ಲೆಕ್ಕಪತ್ರಗಳನ್ನೆಲ್ಲ ಒಡನೆಯೇ