ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 ಚಿರಸ್ಮರಣೆ ೨೪೧

   "ಅದು ನಿಜ."
   "ಚವತ್ತೂರಿನಿಂದ ನಡೆದುಕೊಂಡು ಹೋಗಬೇಕು,ಅಲ್ಲವೂ?"
   "ಹೌದು.ಆದರೆ ಬೇರೆ ಅನು ಕೊಲವೆಲ್ಲ ನಮ್ಮವರು ಮಾಡ್ತಾರೆ."
  "ಆಗಲಿ,ಆಗಲಿ.ನನ್ನ ಅನುಕೊಲದ ವಿಷಯ ಆಮೇಲೆ ಮಾತಾಡೋಣ.
ಮೊದಲು ಈ ಕೇಸು ನಾವು ಗೆಲ್ಬೇಕು."
   ಚಿರುಕಂಡ ಕೇಳಿದ:
  "ಈ ಕೋಟಿ೯ನಲ್ಲಿ ಕೇಸು ಎಷ್ಟು ತಿಂಗಳು ನಡೀಬಹುದು?"
  ವಕೀಲರು ಚಿರುಕಂಡನತ್ತ ಆಸಕ್ತಿಯಿಂದ ನೋಡಿ ಹೇಳಿದರು:
  "ಕಡೇ ಪಕ್ಷ ನಾಲ್ಕು ತಿಂಗಳಾದರೂ ಆದೀತು.ಸ್ವಷಲ್ ಕೋಟು೯
 ನ್ಯಾಯಾಧೀಶರು ಬೇಗನೆ ಯಾಕೆಮುಗಿಸ್ತಾರೆ ಹೇಳಿ?"
  "ಈ ಕೋಟು೯ ಅದ್ಮೇಲೆ?"ಎಂದ ಅಪ್ಪು.
  ಈತನಿಗೆ ನ್ಯಾಯ ವ್ಯವಹರಣೆಯ ವಿಷಯ ಹೆಚ್ಚು ತಿಳಿಯದೆಂದು ಖಚಿತವಾಗಿ
 ವಕೀಲರೆಂದರು:
  "ಈ ನ್ಯಾಯಾಧೀಶರು ಆರೋಪ ನಿದಿ೯ಷ್ಟಪಡಿಸಿ ಸೆಷನ್ಸ್ ಗೆ ಹಾಕ್ತಾರೆ.ಸೆಷನ್ಸ್
 ವ್ಯವಹರಣೆಗೆ ನಮ್ಮ ಕಡೆಗೆ ಮದರಾಸಿನಿಂದ ಪಿಳ್ಳೆಯೂ ಬರ್ತಾರಂತೆ.ಪಿಳ್ಳೆ ಹೆಸರು
 ಕೇಳದ್ದೀರೋ?"
   ಅದು ಯಾರೋ,ಅಪ್ಪು-ಚಿರುಕಂಡರಿಗೆ ಗೊತ್ತಿರಲಿಲ್ಲ.ಮಾಸ್ತರೆಂದರು:
   "ಹೊಂ.ಅವರು ಪ್ರಖ್ಯಾತ ವಕೀಲರೂಂತ ಗೊತ್ತು."
   "ಸರಿ.ನೀವೇನೂ ಹೆದರ್ಬೇಡಿ."
 ವಕೀಲರು ಹೆದರಿಕೆಯ ಪ್ರಸ್ತಾಪಮಾಡಿದರೆಂದು ಅಪ್ಪುವಿಗೆ ನಗು ಬಂತು.
ಆದರೆ ನಗುವುದು ಅಭಾಸವೆನಿಸೀತೆಂದು ಆತ ತುಟಿಗಳನ್ನು ಬಿಗಿಹಿಡಿದ.
  ತಾವು ಚಿತ್ರಿಸಿಕೊಂಡಿದ್ದ ಮೊಕದ್ದಮೆಯ ಬೆಳೆವಣಿಗೆಯ ಸೊಕ್ಷ್ಮ ರೂಪವನ್ನು
ಆ ಮೂವರು ಮುಂದಿಡುತ್ತ,ವಕೀಲ ರಾಜಾರಾಯರೆಂದರು:
 "ಆ ಪೋಲೀಸಿನವರು-ಏನು ಅವನ ಹೆಸರು? ಸುಡುಗಾಡಿಂದು.....ಹಾಂ....
ಸುಬ್ಬಯ್ಯ-ಅವನು ಸತ್ತದ್ದು ಆಕಸ್ಮಿಕ ಅಂತಲೇ ನಮ್ಮ ಡಿಫೆನ್ಸ್ ವಾದ.ಅದೇ
ಸರಿಯಾದದ್ದು...."
  ಇವರ ಮಾತುಕತೆ ಇನ್ನೂ ಮುಗಿದಿಲ್ಲವೇನೋ ಎಂದು ನೋಡುತ್ತ ಅತ್ತ
ಸುಳಿದ ಜೇಲರನ್ನು ಕಂಡು,ತಗ್ಗಿದ ಸ್ವ್ರರದಲ್ಲಿ ವಕೀಲರು ಕೇಳಿದರು:
 "ಇಲ್ಲಿ ನಿಮಗೆಲ್ಲ ಅನುಕೊಲವಾಗಿದೆಯೋ?ನೀವು ರಾಜಕೀಯ ಕೈದಿಗಳಲ್ಲ,
 .'

16