ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೪೨

                                                                          ಚಿರಸ್ಮರಣೆ

ಇಲ್ಲದೆ ಹೋದರೆ ಏನಾದರು ಮಾಡಬಹುದಿತ್ತು...."

 "ಏನೂ ದೊಡ್ದದಲ್ಲ ಊರಿನಲ್ಲಿ ನಮ್ಮ ಜನ ಅನುಭವಿಸ್ತಿರೋ ಕಷ್ಟದ
ಎದುರಲ್ಲಿ ನಮ್ಮ ದೇನೂ ದೊಡ್ದ ವಿಷಯವಲ್ಲ " ಎಂದರು ಮಾಸ್ತರು.
  ವಕೀಲರೆದ್ದು,"ವಿಚಾರಣೆಗೆ ಮುಂಚೆ ಇನ್ನೊಂದ್ಸಲ ಬರ್ ತೇನೆ" ಎಂದು ಹೇಳಿ

ಹೊರಬಿದ್ದರು

  ಒಳಗೆ, ಎಡೆಬಿಡದ ಪ್ರಸ್ನೆಗಳಿಗೆ ಕಾರಣವಾಯಿತು. ವಕೀಲನ ಆಗಮನದ

ವರ್ತೆ.

 "ಅವರು ನಮ್ಮವರೆ?"
 ಅದನ್ನು ಉತ್ತರಿಸುವುದು ಸುಲಭವಾಗಿರಲಿಲ್ಲ.ಮಾಸ್ತರೆಂದರೆ:
 "ನಾಮ್ಮವರೆ ಅಂತ ಕೇಳಿದರೆ ಏನು ಹೇಳೋಣ?ನಮ್ಮ ಮಕ್ಕಳನ್ನು ಕಾಲೇಜಿಗೆ
ಕಳಿಸಿ ವಕೀಲರಾಗಿ ಮಾಡೋ ಯೋಚನೆ ಹಿಂದೆಯೇ ನಮ್ಮಗೆ ಇದ್ದಿದ್ರೆ ನಮ್ಮ
ವಕೀಲರೇಂತ ಈಗ ಹೇಳೋದು ಸಾದ್ಯವಾಗ್ತಿತ್ತು.ಇವರು ಶಹರದವರು. ಹತ್ತು
ವರ್ಷಕ್ಕೆ ಹಿಂದೆ ಅವರೂ ಒಮ್ಮೆ ರಾಷ್ಟ್ರಿಯ ಹೋರಾಟದಲ್ಲಿ ಜೈಲು ನೋಡಿದ್ರು.
ನಮ್ಮ ಮೇಲೆ ಸಹಾನುಭೂತಿ ಇರೋದರಿಂದಲೇ ನಮ್ಮ ಪರ ವಕಾಲತಿಗೆ
ಒಪ್ಪಿದ್ದಾರೆ.ನಮ್ಮವರು ಜನರಿಂದ ಕೂಡಿಸಿಕೊಡೋ ಫೀಸು ಅಷ್ಟರಲ್ಲೇ ಇದೇಂತ
ಅವರಿಗೆ ಗೊತ್ತೇ ಇದ್ದೀತು.ಮದರಾಸಿನ ಪಿಳ್ಳೆಅನ್ನೋರೂ ಅಷ್ಟೆ...."
  ....ಮಾಸ್ತರು ಊಹಿಸಿ ಹೇಳಿದ್ದಂತೆಯೇ ಹೊರಗೆ ರಕ್ಷಣಾ ಸಮಿತಿಯವರು
ಕರಪತ್ರಗಳನ್ನು ಹೊರಡಿಸಿದರು.ನ್ಯಾಯಾಸ್ಧಾನದ ವೆಚ್ಚಕ್ಕೋಸ್ಕರ ಸಹಾಯಧನ
ಯಾಚನೆ; ಬಂಧಿತರ ಕುಟುಂಬಗಳಿಗಾಗಿ ನೆರವು ನೀಡಬೇಕೆಂದು ವಿನಂತಿ. ಈ
ಕರಪತ್ರಗಳ ವಿಷಯ ಸೂಕ್ಷ್ಮವಾಗಿ ತಿಳಿಸಿದವಳು ಚಿರುಕಂಡನ ಹೆಂಡತಿ-ಭೇಟಗೆ
ಬಂದಾಗ.
   "ಹಿಂದೆ ಅಪ್ಪು ಅಣ್ಣನ ಕೈಲಿ ನೀವು ಸೀರೆ ಕಳಿಸ್ತಿರಿಲ್ವ? ಅಂಧದೇ ಎರಡು
  ಮೂರು ಪುನಃ ಬಂದಿದೆ."
     ತಾನು ಕಳುಹಿಸಿದ್ದ ಸೀರೆ.... ಚಿರುಕಂಡನಿಗೆ ಅದೇನೆಂದು ಮೊದಲು
  ಅರ್ಧವಗಲಿಲ್ಲ.ಬಳಿಕ,ವರ್ಷಗಳ ಹಿಂದೆ ತಾನು ಬರೆಯುತ್ತಿದ್ದ ಕರಪತ್ರಗಳನ್ನು
  ಅಪ್ಪು ತ್ರಿಕರಪುರಕ್ಕೊಯ್ದು ಚಂದುವಿಗೆ ಕೊಡುತ್ತಿದ್ದುದು ನೆನಪಾಗಿ ಹೆಂಡತಿಯ
  ಮಾತು ಅರ್ಥವಾಯಿತು.
     ಮಿನುಗಿದ ಆತನ ಕಣ್ಣುಗಳನ್ನು ನೋಡಿ ಆಕೆಯೆಂದಳು:
     "ಈಗ ದೂರದಿಂದ ಬರುತದೆ.ಈ ಸೀರೆಯೋರು ದುಡ್ದು ಕೂಡಿಸ್ತಿದ್ದಾರೆ.