ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚಿರಸ್ಮರಣೆ ಆದರೆ,ಕನಸಿಗಿಂತ ದೂರವಾಗಿತ್ತು ವಾಸ್ತವತೆ.ಮಳೆ ನಿಂತಿತು.ಜನ ಪ್ರವಾಹ ಇಳಿದುಹೋಯಿತು.ಒಗ್ಗಟ್ಟಿಲ್ಲದ ನಾಯಕರಿಲ್ಲದ ಹೋರಾಟವನ್ನು ಸರಕಾರ ಮುರಿದಿಕ್ಕಿತು.... . ಕಯ್ಯೂರಿನ ನಾಲ್ವರನ್ನು ಗಲ್ಲಿಗೇರಿಸಲು ಅಳುವವರು ದಿನ ಗೊತ್ತು ಮಾಡಿದರು.ಅದು ಮತ್ತೆ ಮುಂದಕ್ಕೆ ಹೋಯಿತು.ದಿನವನ್ನು ಮೊದಲೇ ಜಾಹೀರು ಮಾಡುವುದು ಮೂರ್ಖತನವಾದೀತೆಂದು, ಕಣ್ಣಾನೂರಿನ ಜನ ಕೆರಳಿ ಪರಿಸ್ಥಿತಿ ವಿಕೋಪಕ್ಕೆ ಹೋದೀತೆಂದು, ಸರಕಾರ ಅಳುಕಿತು. ಅಪ್ಪು ರೇಗಿ ನುಡಿದ: "ಎಂಥ ಹಿಂಸೆ!ಒಂದೇ ಸಾರಿ ಮುಗಿಸಬಾರದೆ?" ಪೆಟ್ಟು ತಿಂದು ಮಲಗಿದ ಹೆಬ್ಬಾವಿನ ಹಾಗೆ ಮನಸ್ಸು ರೋಸಿದ್ದ ಆ ಸ್ಥಿತಿಯಲ್ಲೂ ದಿನವೂ ಮಾಸ್ತರು ಯಾವನಾದರೂ ಕಾವಲುಗಾರನನ್ನು ಆ ನಾಲ್ವರೆಡೆಗೆ ಕಳುಹಿಸಿ ಸುಖದುಃಖ ವಿಚಾರಿಸುತ್ತಿದ್ದರು. ಕುಂಞಂಬುವಿನ ದೇಹಪ್ರಕ್ರುತಿ ಅಷ್ಟೋಂದು ಚೆನ್ನಾಗಿರಲಿಲ್ಲ.ಆತ ಏಳುವುದು ತಡವಾದರೆ, ಎಡಬಲಗಳಿಂದ ಅಬೂಬಕರ್ ಮತ್ತು ಚಿರುಕಂಡ ಕಾತರಗೊಂಡು "ಮೈಚೆನ್ನಾಗಿಲ್ವ ಕುಂಞಂಬು?" ಎಂದು ಕೇಳುತ್ತಿದ್ದರು. ಚಿರುಕಂಡ ನಿದ್ದೆಯಲ್ಲಿ ನರಳಿದರೆ, ಅಪ್ಪು ಎಚ್ಚರಗೊಂಡು ಕರೆದು ಕೇಳುತ್ತಿದ್ದ:

"ಚಿರುಕಂಡ.... ಯಾಕೆ ಹಾಗ್ಮಾಡ್ತೀಯಾ?"

ಒಬ್ಬರಿಂದ್ದೊಬ್ಬರನ್ನು ಪ್ರತ್ಯೇಕಿಸಿದ ಗೋಡೆಗಳಿದ್ದರು ಒಬ್ಬರು ಮುಖ ಇನ್ನೊಬ್ಬರಿಗೆ ಕಾಣಿಸದಿದ್ದರೂ, ಸದಾ ಕಾಲವೂ ಅನ್ಯೋನ್ಯ ನೋಡುತ್ತ ಮಾತನಾಡುತ್ತ ಜತೆಯಲ್ಲೆ ಇರುವೆವೆನೋ ಎನ್ನುವಹಾಗೆ, ಅವರು ದಿನ ಕಳೆದರು. ಗಲ್ಲಿಗೇರಿಸುವ ದಿನವನ್ನು ಕೊನೆಯವರೆಗೂ ಗೋಪ್ಯವಾಗಿಡುವರೆಂದೂ ತಿಂಗಳ ಕೊನೆಯಲ್ಲಿ ಮರಣದಂಡನೆ ಜಾರಿಯಾಗಬಹುದೆಂದೂ ಖಚಿತ ವಾರ್ತೆ ಅಧಿಕಾರಗಳ ಕಣ್ಣು ತಪ್ಪಿಸಿ ನುಸುಳಿಕೊಂಡು ಸೆರೆಮನೆಯೊಳಗೆ ಬಂತು. ಅಪ್ಪು ಮತ್ತು ಆ ಮೂವರು ಸಂಗಾತಿಗಳ ಸಂಬಂಧಿಕರನ್ನು ಕೊನೆಯ ಭೇಟಿಗೆ ಕರೆಸುವ ವಿಷಯದಲ್ಲಿ ವಿಳಂಬವಾಗಬಾರದೆಂದು ಮಾಸ್ತರು ಕಾರ್ಯೋನ್ಮುಖರಾದರು. ....ಆ ನಾಲ್ವರು ಕಯ್ಯೂರು ಯೋಧರ ಸಂಬಂಧಿಕರು ಕಣ್ಣಾನೂರು ಸೇರಿ ಭೇಟಿಗೆಂದು ಬಂದುದು ಒಂದು ಮಧ್ಯಾಹ್ನ. ಸೆಕೆಯ ಕಾರಣದಿಂದ ಅಪ್ಪುವಿಗೆ ಮಂಪರುಬಂದಿತ್ತು. ಕಣ್ಣುಗಳನ್ನು ಅರೆತೆರೆದು