ಈ ಪುಟವನ್ನು ಪ್ರಕಟಿಸಲಾಗಿದೆ

ಗೌಡ ಸಾರಸ್ವತರು, ಸಾರಸ್ವತರು ಮತ್ತು ರೋಮನ್‌ ಕ್ಕಾಥೋಲಿಕ್‌ರು ಮತ್ತು ಇತರ ಕೆಲವು ವರ್ಗಗಳ ಜನರು ಕೊಂಕಣಿ ಭಾಷೆಯನ್ನು ಉಪಯೋಗಿಸುತ್ತಾರೆ. ಗೋವೆಯನ್ನು ಪೋರ್ಚುಗೀಸರು ಆಕ್ರಮಿಸಿದ ನ೦ತರ ಹೆಚ್ಚಿನ ಕೊ೦ಕಣಸ್ಥರು ದಕ್ಷಿಣ ಕನ್ನಡಕ್ಕೆ ವಲಸೆ ಬ೦ದರು. ಇಲ್ಲಿ ಉರ್ದು ಭಾಷೆಯನ್ನು ಡೆಕ್ಕನಿ ಮುಸ್ಲಿಮರು ಉಪಯೋಗಿಸುತ್ತಾರೆ. ಮರಾಠಿ ಭಾಷೆಯನ್ನಾಡುವ ಜನವರ್ಗಗಳೂ ಇಲ್ಲಿವೆ. ನಗರಗಳಲ್ಲಿ ಗುಜರಾತಿ ಭಾಷಿಕರೂ ಇದ್ದಾರೆ. ತೆಲುಗು, ತಮಿಳು, ಮಲಯಾಳ ಮನೆಮಾತಿನವರೂ ಚಿಕ್ಕ ಸ೦ಖ್ಯೆಯಲ್ಲಿ ಇಲ್ಲಿ ನೆಲೆಸಿದ್ದಾರೆ. ಮಾಪಿಳ್ಳೆ (ಬ್ಯಾರಿ) ಜನರು ಮಲಯಾಳಂನ್ನು, ನವಾಯತರು ಕೊಂಕಣಿಯನ್ನು ಉಪಯೋಗಿಸುತ್ತಾರೆ.

ತುಳು ಭಾಷೆಗೆ ಕನ್ನಡ ಲಿಪಿಯನ್ನೆ ಬಳಸುತ್ತಾರೆ. 'ಸಂಧಿ ಮತ್ತು ಪಾಡ್ದನಗಳು' ಪರ೦ಪರಾಗತ ಜಾನಪದ ಹಾಡುಗಬ್ಬಗಳು ತುಳುವಿನಲ್ಲಿ ಇವೆ. ಪಾಡ್ದನಗಳು ಹಿರಿಯರ ವೀರಗಾಥೆಗಳು, ಕೋಟಿಚೆನ್ನಯರ ವೀರಗಾಥೆ ಪ್ರಸಿದ್ದವಾಗಿದೆ. ಈ ತುಳು ಭಾಷೆಯಲ್ಲಿ ನಾಟಕಗಳು, ಸಿನಿಮಾಗಳು ಕೂಡಾ ಸೃಷ್ಟಿಯಾಗಿವೆ.

ತುಳು ಭಾಷೆಯು ಪ್ರಾಕ್‌ ದ್ರಾವಿಡ ಭಾಷೆಯ ಅನೇಕ ಲಕ್ಷಣಗಳನ್ನು ಉಳಿಸಿಕೊಂಡಿದ್ದು ಭಾಷಾ ಅಧ್ಯಯನದ ದೃಷ್ಟಿಯಿ೦ದ ಮಹತ್ವದಾಗಿದೆ. ಕನ್ನಡ ಮತ್ತು ತುಳುವಿನ ಕೊಳು-ಕೊಡುಗೆ ಅಪರಿಮಿತವಾಗಿದೆ. ತುಳು ಭಾಷೆ ಕನ್ನಡದಿ೦ದಷ್ಟೇ ಅಲ್ಲ, ಪರ್ಶಿಯನ್‌ ಮತ್ತು ಅರೇಬಿಕ್‌ ಭಾಷೆಗಳಿ೦ದ ಕೂಡಾ ಸಾಕಷ್ಟು ಶಬ್ದಗಳನ್ನು ಪಡೆದಿದೆ.

ಚರಿತ್ರೆ ಮತ್ತು ಧಾರ್ಮಿಕ ಪ್ರಭಾವ

ಕ್ರಿ.ಶ. ನಾಲ್ಕನೆಯ ಶತಮಾನದಲ್ಲಿ ಕದ೦ಬ ದೊರೆ ಮಯೂರಶರ್ಮನ ಕಾಲದಲ್ಲಿ ದಕ್ಷಿಣ ಕನ್ನಡದಲ್ಲಿ ಸಾಕಷ್ಟು ಬ್ರಾಹ್ಮಣರ ಆಗಮನವಾಯಿತೆ೦ದು ಓದುತ್ತೇವೆ. ಆದರೆ ಇತ್ತೀಚಿನ 2000 ವರ್ಷಗಳ ಇತಿಹಾಸದಲ್ಲಿ ನಾವು ಒಮ್ಮೆಲೆ ಧಾರ್ಮಿಕ ಹಾಗೂ ಕುಲಕುಟು೦ಬಗಳ ಉಲ್ಲೇಖನವನ್ನು ಸೃಷ್ಟಿಗೊಳಿಸುವಷ್ಟು ದಾಖಲೆಗಳನ್ನು ಪಡೆದಿಲ್ಲ.

ಕ್ರಿ.ಶ. ಒ೦ದನೆಯ ಶತಮಾನದ ವೇಳೆ ದಕ್ಷಿಣ ಕನ್ನಡದಲ್ಲಿ ಬೌದ್ದ ಧರ್ಮದ ಪ್ರಭಾವ ಗಾಢವಾಗಿದ್ದಿರಬೇಕು. ಇದಕ್ಕೆ ದೃಷ್ಟಾ೦ತವಾಗಿ ಕದ್ರಿಯ ಗುಡ್ಡೆಗಳು ಇವೆ. ಈಗ ಅವುಗಳನ್ನು ಪಾ೦ಡವರ ಗುಹೆಗಳೆಂದು ಕರೆಯುತ್ತಾರೆ. ಆಳುಪ ದೊರೆ ಕು೦ದವರ್ಮ ನಿರ್ಮಿಸಿದ ಲೋಕೇಶ್ವರನ ವಿಗ್ರಹ ಇವುಗಳಿಗೆ ಒ೦ದು ಆಧಾರವಾಗಿದೆ. ಕೆಲವು ನಗರಗಳ ಹೆಸರು ಹಾಗೂ ದೇವತೆಗಳ ವಿಗ್ರಹಗಳ ಹೆಸರುಗಳಿಂದ ಬೌದ್ದ

11