ಈ ಪುಟವನ್ನು ಪ್ರಕಟಿಸಲಾಗಿದೆ

ಅರಸುಮನೆತನಗಳೆ೦ದರೆ ಅಜಿಲರು, ಬ೦ಗರು, ಚೌಟರು, ಭೈರರಸ ಒಡೆಯರು, ಮೂಲರು, ಸಾಮಂತರು, ಪಡುಬಿದ್ರೆ ಬಲ್ಲಾಳರು, ಎರ್ಮಾಳ್‌ ಹೆಗ್ಗಡೆ, ಕಾಪು ಮಾರ್‍ಡ ಹೆಗ್ಗಡೆ, ವಿಠಲ ಎಂಬ ಅರಸುಮನೆತನಗಳು ಮುಖ್ಯವಾಗಿವೆ.

ಈ ಅರಸು ಮನೆತನಗಳು ಕೆಲವು ಗ್ರಾಮಗಳ ಒಡೆತನ ಹೊ೦ದಿದ ತು೦ಡರಸರ ಹಾಗೆ ದಕ್ಷಿಣ ಕನ್ನಡವನ್ನು ಆಳುತ್ತಿದ್ದುವು. ಇವರ ಕಾಲದಲ್ಲಿ ಅಜಿಲರು ವೇಣೂರನ್ನು, ಬ೦ಗರು ಬಂಗಾಡಿ, ಮಂಗಳೂರು ನ೦ದಾವರ, ಚೌಟರು ಪುತ್ತಿಗೆ ಉಲ್ಲಾಳ ಮೂಡಬಿದ್ರೆ, ಬೈರರಸ ಒಡೆಯರು ಕಳಸ, ಕೆರವಾಸೆ, ಕಾರ್ಕಳ, ಮೂಲರು ಬೈಲ೦ಗಡಿ, ಸಾವ೦ತರು ಸೀಮಂತೂರು, ಒಳಲಂಕೆ ಪಡುಪಣ೦ಬೂರು, ಪಡುಬಿದ್ರೆ, ಎರ್ಮಾಳು ಹೆಗ್ಗಡೆಯವರು ಎರ್ಮಾಳ, ಕಾಪು ಹೆಗ್ಗಡೆ ಕಾಪು, ತೊಳಹರರು ಸೂರಾಲ. ವಿಠಲ ಮನೆತನ ವಿಟ್ಲದ ಮೂಲಕ ತಮ್ಮ ರಾಜಧಾನಿಗಳನ್ನು ನಿರ್ಮಿಸಿಕೊ೦ಡು ರಾಜ್ಯ ವಿಸ್ತಾರ ಮಾಡಿಕೊ೦ಡು ಆಳಿದರು. ವಿಜಯನಗರದ ಆರಸರ ಪ್ರತಿನಿಧಿಗಳು ಬಾರಕೂರು ಮತ್ತು ಮ೦ಗಳೂರುಗಳನ್ನು ಮುಖ್ಯಕೇ೦ದ್ರವಾಗಿಟ್ಟುಕೊ೦ಡು ಆಳತೊಡಗಿದರು. ವಿಜಯನಗರದ ಅರಸರಿಗೆ ಹೊರದೇಶದ ವಸ್ತುಗಳನ್ನು ಆಮದು ಮಾಡಿಕೊಳ್ಳಲು ಮಂಗಳೂರು ಮತ್ತು ಬಾರಕೂರುಗಳು ಪ್ರಮುಖ ಬ೦ದರುಗಳಾಗಿದ್ದುವು.

ಹದಿಮೂರನೇ ಶತಮಾನದಲ್ಲಿ ಆಫ್ರಿಕನ್‌ ಯಾತ್ರಿ ಇಬ್ನಬಟೂಟ ಸದಾಶಿವಗಡದಿ೦ದ ಕಲ್ಲಿಕೋಟೆಯವರೆಗೆ ಮಾಡಿದ ತನ್ನ ಯಾತ್ರೆಯಲ್ಲಿ ಅನೇಕ ಅ೦ಶಗಳನ್ನು ಹೇಳಿದ್ದಾನೆ. ಆ ಕಾಲದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಅನೇಕ ತುಂಡರಸರಿಂದ ಆಳಲ್ಪಡುತ್ತಿತ್ತೆಂದು ಅವರೆಲ್ಲ ಬಾರಕೂರಿನಲ್ಲಿ ವಾಸಿಸುತ್ತಿದ್ದ ವಿಜಯನಗರದ ಪ್ರತಿನಿಧಿ 'ಓಡೆಯರ್‌'ಗೆ ಕಪ್ಪಕಾಣಿಕೆಗಳನ್ನು ಸಲ್ಲಿಸುತ್ತಿದ್ದರೆ೦ದು ತಿಳಿದು ಬರುತ್ತದೆ.

1342ರ ವೇಳೆ ಇಬ್ನಬಟೂಟ ದಕ್ಷಿಣ ಕನ್ನಡವನ್ನು ಸಂದರ್ಶಿಸಿದ್ದನೆಂದು ತಿಳಿದು ಬರುತ್ತದೆ. ಅವನು ಕಾರವಾರದಿ೦ದ ಕಲ್ಲಿಕೋಟೆಯವರೆಗೆ ಅನೇಕ ಪ್ರಾ೦ತ್ಯಗಳನ್ನು ಸಂದರ್ಶಿಸಿದ್ದನೆಂದು ತಿಳಿದು ಬರುತ್ತದೆ. ಅವನು ಬಾರಕೂರನ್ನು ಪಾಕನೂರು ಎಂದೂ, ಮಂಗಳೂರನ್ನು 'ಮಂಜರೂರು' ಎ೦ದು ಬರೆದದ್ದು ತಿಳಿದುಬರುತ್ತದೆ. ಆಗಿನ ಕಾಲದಲ್ಲಿ ದಾರಿಹೋಕರಿಗೆ ಆಶ್ರಯವಾಗಿ ಅರ್ಧ ಮೈಲಿಗೊ೦ದು 'ಅರವಟ್ಟಿಗೆ'ಗಳಿದ್ದವೆ೦ದೂ ಹಾಗೆಯೇ ಅದರ ಉಸ್ತುವಾರಿಯನ್ನು ನೋಡಿಕೊಳ್ಳಲು ಒಬ್ಬನನ್ನು ಮೇಲ್ವಿಚಾರಣೆಗೆ ಇಡುತ್ತಿದ್ದರೆ೦ದು ಆತ ಬರೆದಿದಿದ್ದು, ದಕ್ಷಿಣ ಕನ್ನಡ ಜಿಲ್ಲೆಯನ್ನು ಸಮೃದ್ಧ ನಾಡೆ೦ದು ವರ್ಣಿಸಿದ್ದಾನೆ.

18