ಈ ಪುಟವನ್ನು ಪರಿಶೀಲಿಸಲಾಗಿದೆ



ದಿಗ್ಬಂಧನ

'ಫಟ್' – ಎಂಬ ಮಂತ್ರದಿಂದ 3 ಬಾರಿ ಒಂದರ ಮೇಲೊಂದು ತಟ್ಟಿ

ನಂತರ 'ಫಟ್” ಮಂತ್ರದಿಂದ ಬಲಗೈ ಹೆಬ್ಬೆಟ್ಟು ಹಾಗೂ ತರ್ಜನಿ ಬೆರಳಿನಿಂದ ಪೂರ್ವದಿಂದ ಶುರುಮಾಡಿ
ಒಂದು ಸುತ್ತು ಚಿಟಿಕೆ ಹಾಕಿ (8 ದಿಕ್ಕುಗಳು, ಕೆಳಗೆ ಮತ್ತು ಮೇಲೆ - ಒಟ್ಟು 10)



ಭೂಮಿವಿಘ್ನನಿವಾರಣ

'ಫಟ್' ಮಂತ್ರದಿಂದ ಎಡಗಾಲಿನ ಹಿಮ್ಮಡಿಯಿಂದ ಭೂಮಿಯನ್ನು 3 ಬಾರಿ ಸ್ಪರ್ಶಿಸಿ.


ಅಂತರಿಕ್ಷವಿಘ್ನನಿವಾರಣ

ಅರ್ಘ್ಯ ಜಲವನ್ನು ತೆಗೆದುಕೊಂಡು (ಕೈಯಲ್ಲಿ) -
'ಅಸ್ತ್ರಾಯ ಫಟ್'
ಎಂಬ ಮಂತ್ರದಿಂದ ಮೇಲೆ ಸಿಂಪಡಿಸಿ ಅಂತರಿಕ್ಷಲೋಕದ ವಿಘ್ನಗಳು ನಿವಾರಣೆಯಾಯಿತೆಂದು ಭಾವಿಸಿ.


ದೇವತಾಶುದ್ಧಿ ಮತ್ತು ಪೂಜಾದ್ರವ್ಯಶುದ್ಧಿ

'ಓಂ ಹ್ರೀಂ ಫಟ್'
ಎಂಬ ಮಂತ್ರದಿಂದ ದೇವತಾ ಪೂಜಾ ದ್ರವ್ಯಗಳ ಮೇಲೆ 3 ಬಾರಿ ಪ್ರೋಕ್ಷಿಸಿ ಹಾಗೂ 'ಧೇನು ಮುದ್ರೆ' ತೋರಿಸಿ


ಮಂತ್ರಶುದ್ದಿ

ಮಾತೃಕಾವರ್ಣಗಳಿಂದ ಸಂಪುಟೀಕರಿಸಿ ಬೀಜಮಂತ್ರವನ್ನು ಜಪಿಸಿ -

ಅಂ ಹ್ರೀಂ ಅಂ | ಕಂ ಹ್ರೀಂ ಕಂ | ಚಂ ಹ್ರೀಂ ಚಂ | ಟಂ ಹ್ರೀಂ ಟಂ |

ತಂ ಹ್ರೀಂ ತಂ | ಪಂ ಹ್ರೀಂ ಪಂ | ಯಂ ಹ್ರೀಂ ಯಂ | ಶಂ ಹ್ರೀಂ ಶಂ |


ವಹ್ನಿಪ್ರಾಕಾರ ಚಿಂತನೆ

'ರಂ' ಎಂಬ ಮಂತ್ರದಿಂದ ತನ್ನ ನಾಲ್ಕು ದಿಕ್ಕಿಗೆ ಜಲ ಪ್ರೋಕ್ಷಿಸಿ, ಪೂಜಾ ಪ್ರದೇಶಕ್ಕೆ ಅಗ್ನಿಯ ಆವರಣ
ಇದೆಯೆಂದು ಭಾವಿಸಿ
.


ದೇಹಮಾರ್ಜನ

ಓಂ ಕ್ರೀಂ ಶ್ರೀದುರ್ಗಾಯ್ಕೆ ದೇವತಾಯ್ಕೆ ನಮಃ |
ಮಂತ್ರದಿಂದ ಕರದ್ವಯ ಸಹಿತಾ ದೇಹದ ಮೇಲೆ ಕೈಯಾಡಿಸಿ ದೇಹವನ್ನು ಪರಿಶುದ್ಧಗೊಳಿಸಿ.


ಆತ್ಮರಕ್ಷಾ

ಹೃದಯದ ಮೇಲೆ ಕೈಯಿಟ್ಟು - ಓಂ ದುರ್ಗೆ ದುರ್ಗೆ ರಕ್ಷಿಣಿ ಸ್ವಾಹಾ | ಓಂ ಆಂ ಹೂಂ ಫಟ್ ಸ್ವಾಹಾ |


ಪ್ರಾಣಾಯಾಮ

'ಪ್ರೀಂ' ಮಂತ್ರದಿಂದ 4/16/8 (3 ಬಾರಿ)

4