ಈ ಪುಟವನ್ನು ಪ್ರಕಟಿಸಲಾಗಿದೆ

ತ್ರಿಕವಾಗಿ ಉತ್ತರಿಸುವ ವ್ಯವಸ್ಮೆ ಎಂದೂ ಆತನಿಗೆ ಮೆಚ್ಚುಗೆಯಾಗಿರಲಿಲ್ಲ. ಸದ್ಯಃ ಶಾಲೆಯ ಪರೀಕ್ಷೆ ಮಾತ್ರ ಎಂಬ ಭಾವನೆಯಾದರೂ ಉಂಟಾದರೆ ಅದರಿಂದ ದೌದ್ಧಿಕ ಪ್ರದರ್ಶನಕ್ಕೆ ಹೆಚ್ಚು ಒಳ್ಳೆಯ ವಾತಾವರಣ ಎರ್ಪಡುವುದು ಸಾಧ್ಯವಿತ್ತು.

ವಿದ್ಯಾಖಾತೆಯ ಈ ನಿರ್ಧಾರದಿಂದ ಹೆಚ್ಚಿನ ಪರಿಣಾಮ ಉಂಟಾದುದು ನಾಲ್ಕನೆ ತರಗತಿಯ ವಿದ್ಯಾರ್ಥಿಗಳ ಮೇಲೆ, ಅವರೇ ಎಲ್. ಎಸ್. ಪರೀಕ್ಷೆಯ ಕೊನೆಯ ತಂಡ.

ಜಯದೇವ ನಗುತ್ತ ಹೇಳಿದ:

“ನೀವೆಲ್ಲ ಮುದುಕ ಮುದುಕೀರಾದಾಗ್ಲೂ ಮೊಮ್ಮಕ್ಕಳ ಮುಂದೆ ಜಂಭ ಕೊಚ್ಕೋಬಹುದು--ಕಡೇ ಸಲ ಎಲ್. ಎಸ್. ಪರೀಕ್ಷೆ ಕಟ್ಟೋರು ನಾವೇ ಅಂತ ! "

ಆದರೆ ನಾಲ್ಕಾರು ದಡ್ಡ ಹುಡುಗರಿಗೆ ಮಾತ್ರ ಅನಿಸದಿರಲಿಲ್ಲ;

'ಈ ಸಲ ಫೇಲಾದ್ರೆ ತೊಂದರೆ ಇಲ್ಲ. ಮುಂದಿನ್ಸಲ ಮೇಷ್ಟ ಪರೀಕ್ಷೆ. ಹೇಳಿಸಿ ಪಾಸ್ಮಾಡಿಸ್ಕೊಂಡರಾಯ್ತು!' ಇಂತಹ ಸಂಭವಗಳ ನಡುವೆ ರೇಂಜ್ ಇನ್ಸ್ಪೆಕ್ಟರರು ಬರುವರೆಂದು ಮುನ್ಸೂಚನೆ ಬಂತು. ಒಂದೇ ದಿವಸ ಆ ಊರಲ್ಲಿದ್ದು ಶಾಲಾ ಸಂದರ್ಶನ ಮುಗಿಸಿ ಮತ್ತೆ ಮುಂದಿನ ಊರಿಗೆ ಹೊರಡುವ ಕಾರ್ಯಕ್ರಮ.

ನಂಜುಂಡಯ್ಯನವರಿಗೆ ಅವರ ಪರಿಚಯವಿತ್ತು. ವೆಂಕಟರಾಯರಿಗೆ ಇರಲಿಲ್ಲ.

“ಯಾರ್ರೀ ಈತ ? ರಾಧಾಕೃಷ್ಣಯ್ಯ ಅಂತೆ. ಗುರುತೇ ಇಲ್ವಲ್ಲಾ!”

“ಹೋದ ವರ್ಷವೂ ಆತನೇ ಬಂದಿದ್ರಪ್ಪಾ..”

“ಹುಡುಗ್ನೋ?"

“ಮಧ್ಯವಯಸ್ಸು, ಸ್ವಲ್ಪ ವಿಚಿತ್ರ ಮನುಷ್ಯ, ರಂಗರಾಯರ ಮೇಲಿನ ಆರೋಪಗಳ ವಿಷಯಲ್ಲಿ ಷರಾ ಬರೆಯೋಕೂ ಒಪ್ಲಿಲ್ಲ, ಸುಮ್ಮೆ ಡಿ.ಇ.ಒ. ಕಡೆ ದಾಟಿಸ್ಬಿಟ್ರು.”

“ಗಟ್ಟಿ ಅನ್ನಿ"

“ಗಟ್ಟಿನೋ ಮೆತ್ತಗೋ, ಆಳವಾದ ಮನುಷ್ಯ, ಗೊತ್ತೇ