ಈ ಪುಟವನ್ನು ಪರಿಶೀಲಿಸಲಾಗಿಲ್ಲ.

13 “ನನಗೂ ಹಾಗೇ ಆಗಿಲ್ವೇನೋ?” ವೆಂಕಟರಾಮಯ್ಯ, ಆ ತುಟಿ ಮೂಗು ಕಣ್ಣುಗಳನ್ನು ದಿಟ್ಟಿಸಿ ನೋಡಿದ ಪ್ರಾಮಾಣಿಕವಾಗಿದ್ದ ನುಡಿ, ಎಷ್ಟೊಂದು ಅಪ್ಯಾಯಮಾನ ಅದು! ತನ್ನ ಆತ್ಮೀಯ ಜೀವದ ಅನುಭವವೂ ತನ್ನ ದಕ್ಕಿಂತ ಭಿನ್ನವಲ್ಲವೆಂದು ತಿಳಿಯುವುದು ಎಷ್ಟೊಂದು ಸಮಾಧಾನದ ವಿಷಯ! “ಯಾವತ್ತು ಹೊರಡೋಣ ವಿಜಯ?* “ನಿಮ್ಮ ಮಾವನನ್ನ ಕೇಳಿ.” “ಪುನಃ ಪೂಜೆ ಪುನಸ್ಕಾರ ತಂತ್ರ ಮಂತ್ರ ಆಗೋಕೇನೋ?” "ಬೇಡವಾದರೆ ಬೇಡ.” “ಕೇಳ್ತಾರೆಯೆ ಅವರು? ನಮ್ಮ ಮಾತೆಲ್ಲಿ ನಡೆಯುತ್ತೆ?" ಬಾಗಿಲು ಮೆಲ್ಲಮೆಲ್ಲನೆ ಕಿರೆಂದಿತು. ಕಳ್ಳ ಹೆಜ್ಜೆಯಿಂದ ಬಂದು ಯಾರೋ ನಿಂತು ಆದನ್ನು ಸ್ವಲ್ಪ ಸ್ವಲ್ಪವೆ ತಳ್ಳಿದ ಹಾಗೆ, ವೆಂಕಟರಾಮಯ್ಯ ಹುಬ್ಬು ಗಂಟಿಕ್ಕಿದ ವಿಜಯ ಹೌಹಾರಿ ದೂರ ಕುಳಿತಳು, ಎದೆಯ ಮೇಲಿನ ಸೆರಗು ಸರಿಪಡಿಸಿಕೊಳ್ಳುತ್ತಾ, ಬಾಗಿಲು ತೆರೆದು ಒಳಗಿಣಿ ನೋಡಿದವಳು ಸರಸ್ವತಿ, ಹೊಸ ಗಂಡು ಮುಖ ಕಂಡು ಮಗುವಿಗೆ ದಿಗಿಲಾಯಿತು. ದಂಪತಿ ನಕ್ಕರು. ವಿಜಯಾ ಸರಸ್ವತಿಯನ್ನು "wade, wo..." ಸರಸ್ವತಿ ಬರಲಿಲ್ಲ. ಅವಸರ ಅವಸರವಾಗಿ ಪುಟ್ಟ ಹೆಜ್ಜೆಗಳನ್ನಿಡುತ್ತ, ಚಿಕ್ಕ ಮ್ಮನ ಜತೆಯಲ್ಲಿ ಯಾರೋ ಅಪರಿಚಿತನಿರುವನೆಂದು ದೂರು ಕೊಡಲು ಅಮ್ಮನೆಡೆಗೆ ಪಡೆದಳು. ವೆಂಕಟರಾಮಯ್ಯ ನಕ್ಕು ನುಡಿದ 66 ಬಂದಿತ್ತು. ಜಾಣೆ ಹುಡುಗಿ

  • 500!"

“ಯಾವತ್ತು ಬಂದ್ರು ನಿಮ್ಮಕ್ಕ? ಅವರ ಯಜಮಾನರನ್ನ ನಾನು ನೋಡೇ ಬಲು ಸಹಜವಾಗಿ, ಆದರೂ ವಿಜಯಳ ಪಾಲಿಗೆ ಅನಿರೀಕ್ಷಿತವಾಗಿ, ಆ ಮಾತು ಏನು ಉತ್ತರ ಕೊಡಬೇಕೆಂದು ತಿಳಿಯದೆ ಆಕೆ ಚಡಪಡಿಸಿದಳು. “ಅಕ್ಕ ಈಗ ಇಲ್ಲೇ ಇದಾಳೆ, " 的 “ಹಾಗಾ? ಮದುವೆಗೆ ಬಂದೋರು ಹೋಗೇ ಇಲ್ವೇನು?” ವಿಜಯ ಗಂಡನ ಮುಖವನ್ನೇ ದಿಟ್ಟಿಸಿದಳು. ಚಿಂತೆ ಸಂದೇಹಗಳು ಆ ಹುಬ್ಬು ಗಳ ಹಿಂದೆ ಒಂದುಗೂಡುತ್ತಿದ್ದುವೇ ಏನೆಂದು ಪರೀಕ್ಷಿಸಿದಳು. ತನ್ನ ದೇವರೆದುರು ತಾನೆಂದೂ ಸುಳ್ಳಾಡಬಾರದು ಎನ್ನುತ್ತಿತ್ತು ಮನಸ್ಸು. ಆದರೂ ತನ್ನ ಆತ್ಮನಿಗೆ ಆಗ