14 Sacha ಅಪ್ರಿಯವಾದುದೇನನ್ನು ತಿಳಿಸುವುದಕ್ಕೂ ಆ ಮನಸ್ಸು ಒಡಂಬಡಲಿಲ್ಲ. ಆಕೆ ಯೆಂದಳು: “ಇಲ್ಲ. ಇರುವಷ್ಟು, ದಿನವಾದರೂ ನಾವು ಜತೇಲೇ ಇರಬೇಕೂಂತ ಅಕ್ಕನನ್ನ ಇಲ್ಲೇ ಉಳಿಸ್ಕೊಂಡೆ.” “ಹಾಗೇನು? ನೀವಿಬ್ಬರೂ ತುಂಬಾ ಅನ್ನೋನ್ಯ ಅಂತ ಕಾಣುತ್ತೆ!” “ನೀವೂ ನಿಮ್ಮ ತಮ್ಮನೂ ಅನ್ನೋನ್ಯವಾಗಿಲ್ವ?" “ಇದೀವಿ! ನಾನೇನು ಹಾಗಿರೋದು ತಪ್ಪು ಅಂದ್ರೆ!” ವಿಜಯಾ ಮೌನವಾಗಿ ನಕ್ಕಳು. ಅಷ್ಟರಲ್ಲಿ ಸುನಂದೆಯ ಸ್ವರ ಕೇಳಿಸಿತು. "way" ಮರೆತುದು ಯಾವುದೋ ನೆನಪಾದವನಂತೆ ವೆಂಕಟರಾಮಯ್ಯ ಹೆಂಡತಿಯ ಮುಖ ನೋಡಿದ. ಅಂತ. “ಯಾರನ್ನೆ ನಿಮ್ಮಕ್ಕ ಕೂಗಿರೋದು?” ಅದು ಬಲು ಹಿತಕರವಾದ ಕಣ್ಣು ಮುಚ್ಚಾಲೆಯಾಟ “ನನಗೇನೊತ್ತು?” ವೆಂಕಟರಾಮಯ್ಯ ಸಿಟ್ಟಾದ "ಸುಳ್ಳು ಹೇಳ್ತಿದಿಯಾ, ಆಗ್ಲೆ ಅಂದ್ರು ನಿಮ್ಮಕ್ಕ ಪದುಮ ಕಾಣಿಸ್ಲಿಲ್ವೇನು? ಕತ್ತು ಕೊಂಕಿಸಿ ನುಡಿದ 'ಪದುಮ ಕಾಣಿಸ್ತಿಲ್ವೇನು?' ಎಂಬ ಪದೋಚ್ಛಾರ ಸುನಂದೆಯ ಸ್ವರದ ಅನುಕರಣವಾಗಿತ್ತು. ವಿಜಯಾ ಬಿದ್ದು ಬಿದ್ದು ನಕ್ಕಳು. ಆ ದೃಶ್ಯ ಮನಮೋಹಕವಾಗಿತ್ತೆಂದು ವೆಂಕಟರಾಮಯ್ಯ ಒಂದು ಕ್ಷಣ ಸುಮ್ಮನೆ ಕುಳಿತ. ಬಳಿಕ, ಅವಮಾನಿತನಾದವನಂತೆ ನಟಿಸುತ್ತ ಆತನೆಂದ; “ಯಾಕೆ ನಗ್ತಿದೀಯಾ ಹಾಗೆ?” “ನೀವು ಮೈಸೂರು ಮಲ್ಲಿಗೆ ಹೆಸರು ಕೇಳಿದೀರಾ?” ಸುನಂದಾ ಮುಡಿದಿದ್ದ ಮಲ್ಲಿಗೆ ಹೂವಿನತ್ತ ನೋಡುತ್ತ ಆತನೆಂದ: “ಮೈಸೂರು ಮಲ್ಲಿಗೆಯೇ?” “ಹಾಡಿನ ಪುಸ್ತಕದ ಹೆಸರು ಕ” "2" 46 ಅದರಲ್ಲೊಂದು ಹಾಡಿದೆ 'ರಾಯರು ಬಂದರು ಮಾವನ ಮನೆಗೆ ರಾತ್ರಿಯಾಗಿ “ಓಹೋ! ಆಮೇಲೆ? ಅದೇನು ಹಾಡು? ರಾಗವಾಗಿ ಹೇಳು ದಮ್ಮಯ್ಯ!” “ಹೂ ಹೂ! ಇದೊಳ್ಳೇ ಉಪಾಯ ನಿಮ್ಮದು, ನಾನು ಹಾಡೊಲ್ಲ...
ಪುಟ:Ekaangini by Nirajana.pdf/೧೮
ಈ ಪುಟವನ್ನು ಪರಿಶೀಲಿಸಲಾಗಿಲ್ಲ.