ಈ ಪುಟವನ್ನು ಪರಿಶೀಲಿಸಲಾಗಿಲ್ಲ.

22 SCAR “ನೀನು ಸುಖಿಯಾಗಿರು ವಿಜಯಾ, ಅಷ್ಟೇ ಸಾಕು ನನಗೆ, ಅಷ್ಟೇ ಸಾಕು. ಭಗವಂತ ನಿನಗೆ ಒಳ್ಳೇದು ಮಾಡಲಿ....” “ಏನು ವಿಜಯಾ 49 77 “ನೀನೇನು ಪಾಪ ಮಾಡೇಂತ ಭಗವಂತ ನಿನಗೆ ಕೆಟ್ಟದು ಮಾಡ್ಡ ಅಕ್ಕಾ?" “ನನ್ನಾಣೆ! ಹಾಗೆಲ್ಲ ಮಾತಾಡ್ತಾರದು ನೀನು..." ಕಂಬನಿಯ ಆನಂತರ ನಿಟ್ಟುಸಿರು, ಬಳಿಕ ಮೌನ, ಮನ ಮುರಿದು ಸುನಂದಾ ಎಂದಳು “ನಾವು ಜತೆಯಾಗಿರೋದು ಇದೇ ಕೊನೇ ರಾತ್ರೆ, ಅಲ್ಲವಾ?” ಬೇರೆ ವಾತಾವರಣದಲ್ಲಿ ಆ ಮಾತು ಕೇಳಿ ವಿಜಯಳ ಮೈ ಪುಲಕಿತಗೊಳ್ಳು ವುದು ಸಾಧ್ಯವಿತ್ತು. ಮಾರನೆಯ ದಿನ ರಾತ್ರೆ ಆಕೆಯ ಶಯನ ಗಂಡನ ಜೊತೆಗೆ ಆದರೆ ಈಗ ಆ ಯೋಚನೆ, ಮರಳಲ್ಲಿ ಇಂಗಿದ ನೀರ ಹನಿಯ ಹಾಗೆ ಹೇಳ ಹೆಸರಿಲ್ಲದೆ ಮರೆಯಾಯಿತು. ಉಳಿದುದೊಂದೇ ಬೆಂಗಾಡಿನ ಉಸುಬು; ಸುಖಿಯಲ್ಲದ ಅಕ್ಕನನ್ನು ಬಿಟ್ಟಿರಬೇಕೆಂಬ ದುಃಖ, “ಅಕ್ಕ, ನಿನ್ನ ಹಾಸಿಗೇನ ಇನ್ನೂ ಈಚೆಗೆ ಎಳಕೋ ಅಕ್ಕಾ," ಸುನಂದಾ ಹಾಗೆ ಮಾಡಲೆಂದು ಮುಂದಾದಳು. ಸರಸ್ವತಿಗೆ ಎಚ್ಚರವಾಗದಂತೆ ಹಾಸಿಗೆಯನ್ನು ಮೆಲ್ಲನೆ ಎಳೆದು ತಂಗಿಯದಕ್ಕೆ ಜೋಡಿಸಿದಳು. ಅಕ್ಕ-ತಂಗಿ ಮತ್ತೆ ಹಸುಳೆಗಳಾಗಿ ಒಬ್ಬರಿಗೊಬ್ಬರು ಆತುಕೊಂಡು ಮಲಗಿದರು. ....ಕತ್ತಲು ಕಳೆದು ಬೆಳಗಾಯಿತು. ಆ ಮನೆಯಲ್ಲಿ ಅದು ಸಂಭ್ರಮದ ಹಗಲು, ಬಳಿಕ ಸಂಭ್ರಮದ ಇರುಳು. ಕೊನೆ ಘಳಿಗೆಯವರೆಗೂ ನಿಮಿಷವೂ ಬಿಡುವಿಲ್ಲದೆ ಸುನಂದಾ ಉತ್ಸಾಹದಿಂದ ಓಡಾಡಿದಳು. ಆಮಂತ್ರಿತರಾಗಿ ಬಂದಿದ್ದ ಮುತ್ತೈದೆಯರು ಕುತೂಹಲದಿಂದ ಆಕೆ ಯನ್ನು ನೋಡದಿರಲಿಲ್ಲ. 'ಸುನಂದೇನ ಗಂಡ ಬಿಟ್ಟು ಬಿಟ್ಟಿದ್ದಾನಂತೆ' ಎಂಬ ಆಲಾ ಪನೆಯನ್ನು ಕೆಲವು ಸ್ತ್ರೀ ಕಂಠಗಳು ಈಗಾಗಲೇ ಮಾಡಿಯ ಇದ್ದುವು. ಅವರ ನೋಟಗಳೊಂದನ್ನೂ ಸುನಂದಾ ಲೆಕ್ಕಿಸಲೇ ಇಲ್ಲ. ಆಕೆ ಮುಂದಿರಿಸಿಕೊಂಡುದೊಂದೇ ಗುರಿ: ತಂಗಿಯನ್ನು ಹರ್ಷ ಚಿತ್ತಳಾಗಿಡುವುದು, ಅದಕ್ಕೋಸ್ಕರ ತಾನೊಂದು ಕ್ಷಣವೂ ಸಪ್ಪೆ ಮೋರೆ ಹಾಕುವಂತಿರಲಿಲ್ಲ. ಗುರಿ ಸಾಧನೆಯಲ್ಲಿ ಸುನಂದಾ ಯಶಸ್ವಿಯಾಗಿದ್ದಳು. ಹಾಸಿಗೆಯ ಮೇಲೆ ಮೈಚಾಚಿದೊಡನೆ ಮಾತ್ರ, ಕತ್ತಲಲ್ಲಿ ಎಲ್ಲಿಲ್ಲದ ಬೇಸರ ಅವಳನ್ನು ಆವರಿಸಿತು. ಆವರಿಸಿತು. ಆದರೆ, ಬೇಸರಕ್ಕಿಂತಲೂ ಆದರೆ, ಬೇಸರಕ್ಕಿಂತಲೂ ಮಿಗಿಲಾಗಿತ್ತು ಓಡಾಟದ ಆಯಾಸ. ಸುನಂದೆಗೆ ಬೇಗನೆ ನಿದ್ದೆ ಬಂತು. ಎರಡು ಮೂರು ದಿನಗಳಾದರೂ ಇದ್ದು ಹೋಗುವುದು ನ್ಯಾಯವಾಗಿತ್ತು, ಆದರೆ ಅಳಿಯನಿಗೆ ರಜವಿರಲಿಲ್ಲ. ಬೆಳಗ್ಗಿನ ರೈಲಿನಲ್ಲಿ ಹೊರಡುವುದೆಂದು ಗೊತ್ತಾಗಿತ್ತು.