23 ಆದರೆ ಗಂಡನಿದ್ದ ಕೊಠಡಿಯಿಂದ ಎದ್ದು ಬಂದು, “ರಾತ್ರೆಯ ಗಾಡಿಗೆ ಹೋಗ್ತಿವಿ” ಎಂದು ವಿಜಯಾ ಹೇಳಿದಾಗ, ಮನೆಯಲ್ಲಿ ಪ್ರತಿಯೊಬ್ಬರಿಗೂ ಸಂತೋಷ ವಾಗದೆ ಇರಲಿಲ್ಲ. ಅಳಿಯನ ಪರವಾಗಿ ಮಗಳೇ ಈ ಮಾತು ಹೇಳಿದಳೆಂದು ಹೆಮ್ಮೆಪಡುತ್ತ ತಂದೆ, ವೆಂಕಟರಾಮಯ್ಯ ನದರು ಅಂದರು: “ಈ ರಾತ್ರಿ ಪ್ರಯಾಣ ಅಂದರೆ ನಿದ್ದೆ ಕೆಡಬೇಕು. ರಾತ್ರಿಯೂ ಇಲ್ಲೇ ಇದ್ದು ನಾಳೆ ಬೆಳಗ್ಗೆ ಹೊರಟರಾಗದೆ ?” “ಇಲ್ಲ, ಬೇಡಿ ಇನ್ನೊಂದು ದಿವಸ ರಜಾ ತಗೊಳೋದಕ್ಕಾಗಲ್ಲ." ಅಳಿಯನ ಕಟ್ಟುನಿಟ್ಟಿನ ಜೀವನ ಕ್ರಮದ ಅಲ್ಪ ಪರಿಚಯ ಆಗಲೇ ಇದ್ದ ಮಾವ ಇದಿರು ಹೇಳಲಿಲ್ಲ. “ನಿಮ್ಮಿಷ್ಟ. ಇವತ್ತು ಹಗಲಾದರೂ ಇದ್ದು ಹೋಗೀಂತ ನಾವೇ ಪ್ರಾರ್ಥಿ ಸ್ಟೇಕಾಗಿತ್ತು. ಅದಕ್ಕೆ ಅವಕಾಶವೇ ಇಲ್ಲದ ಹಾಗೆ ವಿಜಯಾನೇ ನಿಮ್ಮನ್ನ ಒಪ್ಪಿಸಿದ್ದು !” ವೆಂಕಟರಾಮಯ್ಯ ಮುಗುಳುನಕ್ಕೆ. ಈಗ ಸಾಕಷ್ಟು ಬಿಡುವಿದ್ದುದರಿಂದ ಪ್ರಯಾಣ ಸಿದ್ಧತೆ ವ್ಯವಸ್ಥಿತವಾಗಿಯೆ ನಡೆಯಿತು. ಹಗಲೆಲ್ಲ ಅಕ್ಕನ ಜೊತೆಯಲ್ಲಿ ಇರಬೇಕೆಂದು ವಿಜಯಾ ಆಶಿಸಿದ್ದಳು. ಆದರೆ ಅದು ಸಾಧ್ಯವಾಗಲಿಲ್ಲ. ಒಬ್ಬನಿಗೇ ಹೊತ್ತು ಹೋಗುವುದಿಲ್ಲವೆಂದು ಹೆಂಡತಿ ಯನ್ನು ಆತ ಬಳಿಯಲ್ಲೇ ಇರಿಸಿಕೊಂಡ. ಸಂಜೆ ದಂಪತಿ ಊರಿನ ಬೀದಿಗಳಲ್ಲಿ ಸುತ್ತಾಡಿ ಬಂದರು. ಮಾತನಾಡುವ ಕೆಲಸವನ್ನೆಲ್ಲ ಗಂಡನಿಗೆ ಬಿಟ್ಟುಕೊಟ್ಟ, ಸುನಂದೆಯ ತಾಯಿ ಕಿರಿಯ ಮಗಳನ್ನು ಕಳುಹಿಸಿಕೊಡಲಾಗದೆ ಕಂಬನಿ ಸುರಿಸಿದರು. ತನ್ನ ತಂಗಿಯನ್ನು ಕರೆದೊಯ್ಯಲು ನಿಂತಿದ್ದ ವೆಂಕಟರಾಮಯ್ಯನನ್ನು ಸುನಂದಾ ಬಿಟ್ಟಿಸಿದಳು. ತಾಯಿ ಮಕ್ಕಳ ಅಗಲುವಿಕೆಯ ದೃಶ್ಯವನ್ನು ನೋಡಲಾರದೆ ಆತ ಉಗುಳು ನುಂಗಿದಂತೆ ತೋರಿತು. ಟ್ರಂಕು, ತಿಂಡಿಯ ಬುಟ್ಟಿ, ಚೀಲಗಳು ಜಟಕಾದಲ್ಲಿ ಕುಳಿತು, ನವದಂಪತಿಯ ಹಾದಿ ನೋಡಿದುವು. zon... 66 "ತಡವಾಗುತ್ತೆ,” ಎಂದರು ಸುನಂದೆಯ ತಂದೆ. “ಸ್ಟೇಷನ್ನಿಗೆ ನೀನೂ ಬರೀಯಲ್ಲಕ್ಕ?” ಎಂದು ವಿಜಯಾ ಕೇಳಿದಳು. ಹಿಂದೆ ಸುನಂದಾ ಗಂಡನ ಮನೆಗೆ ಹೋದಾಗ ಬೀಳ್ಕೊಡಲು ಬಂದಿದ್ದಳು ಆ ತಂದೆಯ ಜತೆಯಲ್ಲಿ ರೈಲು ನಿಲ್ದಾಣದ ತನಕ ಸುನಂದೆಯೂ ಬರುವಳೆಂದೇ ಗೊತ್ತಾಗಿತ್ತು. ಮೂವರು ಪ್ರಯಾಣ ಹೊರಡಬಾರದೆನ್ನುವುದೂ ಅದಕ್ಕೊಂದು ಕಾರಣ. ಆದರೆ ಆ ಕುದುರೆ ಗಾಡಿಯಲ್ಲಿ ಜಾಗವಿರಲಿಲ್ಲ.
ಪುಟ:Ekaangini by Nirajana.pdf/೨೭
ಈ ಪುಟವನ್ನು ಪರಿಶೀಲಿಸಲಾಗಿಲ್ಲ.