ಈ ಪುಟವನ್ನು ಪರಿಶೀಲಿಸಲಾಗಿಲ್ಲ.

25 “ಅಪ್ಪಾ ಬೆಳಗಾಯ್ತು, ಏಳಲ್ವೇ?” ಕೃಷ್ಣಪ್ಪ ಈಗ ಎದ್ದರು. ತೂರಿ ಒಳಕ್ಕೆ ಬರುತ್ತಿದ್ದ ಬೆಳಕನ್ನು ನೋಡುತ್ತ ಬಳಿಕ ತಮ್ಮ ನರನಾಡಿಗಳನ್ನು ಕತ್ತು ಹಣೆಗಳನ್ನು ಕಣ್ಣು ಕಿರಿದುಗೊಳಿಸಿದರು. ತಾವೇ ಮುಟ್ಟಿ ನೋಡಿದರು. “ಸುಂದಾ, ಮೈ ಬೆಚ್ಚಗಿದೆಯಲ್ಲೇ.” ಎಂದರು. ಎಷ್ಟೋ ದಿನಗಳಾಗಿದ್ದುವು. ಸುಂದಾ' ಎಂದು ತಂದೆ ಕರೆಯದೆ, ಅದು, ತೀರಾ ಆತ್ಮೀಯವಾದ ಘಳಿಗೆಯಲ್ಲಿ ಅವರು ಬಳಸುತ್ತಿದ್ದ ಪದ. ಒಲವಿನ ಆ ಸಂಬೋಧನೆ ಕೇಳಿ ಸುನಂದೆಯ ಹೃದಯ ಹಿಗ್ಗಿತು. ಆದರೆ, ಅದರ ಬೆನ್ನಲ್ಲೆ ಬಂದ ಮಾತಿನಿಂದ ಮುಖ ಮುದುಡಿತು. ಕೈಯಲ್ಲಿದ್ದ ಪೊರಕೆಯನ್ನು ಕೆಳಕ್ಕೆಸೆದು, ಆಕೆ ಕೊಠಡಿಯೊಳಕ್ಕೆ ಕಾಲಿಟ್ಟಳು. ತಂದೆಯ ಹಣೆಯನ್ನು ಮುಟ್ಟ ನೋಡಿದಳು. “ಎಲ್ಲೋ ಸ್ವಲ್ಪ ಬಿಸಿ ಇದೆ,” ಎಂದಳು. “ಮೂರು ನಾಲ್ಕು ದಿವಸವೆಲ್ಲ ಓಡಾಡ್ತಾನೇ ಇದ್ದೆ. ಆ ಆಯಾಸಕ್ಕೆ ಹಾಗಾಗಿದೆ.” ಎಂದು ತನ್ನ ಅಭಿಪ್ರಾಯವನ್ನೂ ಕೊಟ್ಟಳು. ಕೃಷ್ಣಪ್ಪ ಕಂಬಳಿಯನ್ನು ಕೆಳಕ್ಕೆ ಸರಿಸಿ ಎದ್ದು ನಿಂತರು. “ನಿಮ್ಮಮ್ಮನಿಗೆ ಹೇಳೋಡ, ಗಾಬರಿ ಬೀಳ್ತಾಳೆ,” ಎಂದರು. ತಾಯಿಯ ಸ್ವಭಾವವನ್ನು ಚೆನ್ನಾಗಿಯೇ ತಿಳಿದಿದ್ದ ಸುನಂದೆಗೆ ತಂದೆಯ ಮಾತಿ ನಿಂದ ಆಶ್ಚರ್ಯವೇನೂ ಆಗಲಿಲ್ಲ. “ಇವತ್ತು ಮನೇಲೇ ಇದ್ದು ವಿಶ್ರಾಂತಿ ತಗೋಪ್ಪಾ," ಎನ್ನುತ್ತ ಆಕೆ ಹಾಸಿಗೆ ಸುತ್ತಿದಳು... ....ಮುಂದೆ ಆ ದಿನ ಕಾತರಕ್ಕೆ ಕಾರಣವಾದುದು ತಂದೆಯ ಜ್ವರವಲ್ಲ, ತಾಯಿಯು ಕಾಹಿಲೆ ಸೂರ್ಯ ಮೇಲಕ್ಕೇರಿದಂತೆಯೆ ಆಕೆ ನರಳುವುದು ಹೆಚ್ಚಿತು, ಕೆಟ್ಟ ನೆಗಡಿ; ಮೂಗಿನಿಂದ ಒಂದೇ ಸಮನೆ ನೀರು ಸೋರುತ್ತಿತ್ತು. ಸಾಲದುದಕ್ಕೆ ವಿಜಯಳನ್ನು ಕುರಿತು ಏನಾದರೂ ಮಾತನಾಡುತ್ತ ಅವರು ಅಳುತ್ತಿದ್ದರು. ಮಧ್ಯಾ ದ ಅಡುಗೆಯೇನೋ ಆಯಿತು. ಆದರೆ ಸುನಂದೆಯ ತಾಯಿ ಊಟಕ್ಕೇಳಲಿಲ್ಲ. “ಯಾಕೋ ಮೈಯೆಲ್ಲ ಛಳಿ ಛಳಿ, ಸ್ವಲ್ಪ ಬೆಚ್ಚಗೆ ಮುಸುಕು ಹಾಕ್ಕೊಂಡು ಮಲಕ್ಕೊ ತೀನಿ,” ಎನ್ನುತ್ತ ಅವರು ಹಾಸಿಗೆಯ ಆಶ್ರಯ ಪಡೆದರು. ಸದ್ಯ ತಾಯಿಯು ಪರಿ ಸ್ಥಿತಿಯನ್ನು ತಂದೆಯಿಂದ ಬಚ್ಚಿಡುವ ಅಗತ್ಯ ಸುನಂದೆಗಿರಲಿಲ್ಲ. ತನ್ನಾಕೆಯ ಆರೋಗ್ಯ ಸರಿಯಾಗಿಲ್ಲವೆಂದು ತಿಳಿಯುವುದು ಕೃಷ್ಣಪ್ಪನವರಿಗೆ ಕಷ್ಟವಾಗಲಿಲ್ಲ. ಅದನ್ನು ಗಂಡ ನಿಂದ ಬಚ್ಚಿಡಲು ಆ ಸಾಧ್ವಮಣಿ ಯತ್ನಿಸಿದ್ದರೆ ತಾನೆ? ಅವರು ಕೈಹಿಡಿದವಳಿಗಾಗಿ ಕಷಾಯ ಸಿದ್ಧಗೊಳಿಸಿದರು. ತಾವೇ ಕೈಯಾರ ಅದನ್ನು ಕುಡಿಸಿದರು.