ಈ ಪುಟವನ್ನು ಪರಿಶೀಲಿಸಲಾಗಿಲ್ಲ.

24

  • ಈ ಸಾಮಾನುಗಳ ಜತೇಲಿ ನಾಲ್ಕು ಜನ ಕೂಳ್ಳೋಕಾಗೋಲ್ಲ,” ಎಂದು

ಅಸಹಾಯತೆಯ ಧ್ವನಿಯಲ್ಲಿ ಸುನಂದೆ ತಂದೆ ನುಡಿದರು. ವೆಂಕಟರಾಮಯ್ಯ ಬೀದಿಯುದ್ದಕ್ಕೂ ಅತ್ತಿತ್ತ ನೋಡುತ್ತ ಕೇಳಿದ: “ಇನ್ನೊಂದು ಜಟಕಾ ತರಿಸೋಣ, ಆಗದೆ?” “ಜಟಕಾ ಬೇಕಾದರೆ ಮಾರ್ಕೆಟು ಚೌಕಕ್ಕೆ ಹೋಗೋಕು. ಇಲ್ಲೆಲ್ಲಿ ಸಿಗುತ್ತೆ? ಟೈಮ ಆಗೋಯ್ತು.” ನಿಲ್ದಾಣದವರೆಗೆ ತಾನೂ ಹೋಗಬಹುದೆಂದು ಕೊನರಿದ ಆಸೆಯನ್ನು ಅಷ್ಟರಲ್ಲಿ ಹಿಂದಕ್ಕೆ ತಳ್ಳಿ ಸುನಂದಾ ಅಂದಳು; “ಏನೂ ಬೇಡ ಅಪ್ಪಾ, ತಡವಾಗುತ್ತೆ. ಆಮೇಲೆ ರೈಲ್ನಲ್ಲಿ ಕೂತಿರೋಕೆ ಸರಿ ಯಾಗಿ ಸೀಟೂ ಸಿಗೋಲ್ಲ. ಸರಸ್ವತೀನ ಎತ್ಕಂಡು ನೀವು ಹೊರಡಿ.” ವೆಂಕಟರಾಮಯ್ಯ ಮೊದಲು ಗಾಡಿಯನ್ನೇರಿದ. ಬೀದಿ ದೀಪದ ಬೆಳಕಿನಲ್ಲಿ ಗಡಿಯಾರವನ್ನು ನೋಡಿದ ವಿಜಯಾ ತುಟಿ ಬಿಗಿದುಕೊಂಡು ತಾಯಿಗೆ ಪ್ರಣಾಮ ಮಾಡಿದಳು. ಅಕ್ಕನ ಎದೆಯಲ್ಲಿ ಮುಖವಿಟ್ಟಳು. ಸರಸರನೆ ಹೊರಕ್ಕಿಳಿದು, ಅಕ್ಕಪಕ್ಕದ ಮನೆಗಳೆದುರು ನಸು ಬೆಳಕಿನಲ್ಲಿ ನಿಂತಿದ್ದ ಪರಿಚಿತ ಹೆಂಗಸರನ್ನೊಮ್ಮೆ ನೋಡಿದಳು. ಕೈಯನ್ನು ಹಿಡಿದು ಗಾಡಿಯನ್ನೇರಿದಳು. ಸಾಬಿಯ ಕುದುರೆಗಾಡಿ “ಟೇಸನಿ'ಗೆ ಹೊರಟಿತು. ಗಂಡ ನೀಡಿದ ಬಹಳ ಹೊತ್ತು ಅಂಗಳದಲ್ಲಿ ನಿಂತ ಅನಂತರ, ಸೆರಗಿನಿಂದ ಕಣ್ಮರೆಸಿ ಕೊಳ್ಳುತ್ತ, ಬರಿದಾಗಿದ್ದ ಮನೆಯನ್ನು ಸುನಂದೆಯ ತಾಯಿ ಹೊಕ್ಕರು. ಸುನಂದೆಯ ಒಳಬಂದಳು. ಒಂಟಿಯಾಗಿದ್ದ ಕೊಠಡಿ ಆಕೆಯನ್ನು ಕರೆಯಿತು, ಅಲ್ಲಿ ದೀಪ ಆರಿಸಿ, ಹೊರಗಿನ ಕತ್ತಲೆಯನ್ನು ಕಿಟಕಿಯ ಮೂಲಕ ದಿಟ್ಟಿಸುತ್ತ, ಆಕೆ ನಿಂತಳು. ಕಣ್ಣೀರ ಧಾರೆಗಳೆರಡು ಕಪೋಲಗಳನ್ನು ತೋಯಿಸುತ್ತ ಸದ್ದಿಲ್ಲದೆ ಕೆಳಕ್ಕೆ ಹರಿದುವು. ವಿಜಯಾ ಗಂಡನ ಮನೆಗೆ ಹೊರಟುಹೋದ ಮಾರನೆಯ ದಿನ ಆಕೆಯ ತಂದೆ ಕೃಷ್ಣಪ್ಪನವರು ಏಳುವುದು ತಡವಾಯಿತು. ಎಚ್ಚರವಾದರೂ ಮೈ ಕೈ ನೋಯು ತ್ತಿತ್ತೆಂದು ಮುಸುಕೆಳೆದು ಹಾಗೆಯೇ ಮಲಗಿದರು. ನಡುಮನೆಯಲ್ಲಿ ಕಸಗುಡಿಸಿದ ಬಳಿಕ ಕೊಠಡಿಯತ್ತ ಇಣಿಕಿನೋಡಿ ಸುನಂದಾ