ಈ ಪುಟವನ್ನು ಪರಿಶೀಲಿಸಲಾಗಿಲ್ಲ.

27 ವಾಚನಾಲಯದ ಕಡೆಗೋ ದಿನಸಿ ಅಂಗಡಿಗೋ ಹೋಗಿದ್ದ ಕೃಷ್ಣಪ್ಪನವರು, ಮನೆಗೆ ಬಂದೊಡನೆ ಕೇಳುತ್ತಿದ್ದರು: "ಏನಾದರೂ ಕಾಗದ ಬಂತೇನೇ ಸುನಂದಾ?” ವಿಜಯಾ ಗಂಡನ ಮನೆಗೆ ಹೋದ ಆರನೆಯ ದಿನ ಆ ಕಾಗದ ಬಂತು. ಒಂದು ಲಕೋಟೆಯೊಳಗೆ ಎರಡು, ತಮಗೊಂದು, ತಮಗೊಂದು, ಅಕ್ಕನಿಗೊಂದು. ಬರೆಯಲು ತಡವಾಯಿತೆಂದು ಕ್ಷಮಾಯಾಚನೆ. ತಾನು ಆರೋಗ್ಯವಾಗಿದೇನೆಂದೂ ತನ್ನನ್ನೆಲ್ಲರೂ ಚೆನ್ನಾಗಿ ನೋಡುಕೊಳ್ಳುತ್ತಿರುವರೆಂದೂ ಆಶ್ವಾಸನೆ ಬೇಡಿಕೊಂಡ ಆಶೀರ್ವಾದಗಳು, “ಮಗು ಚೆನ್ನಾಗಿದಾಳಂತಾ?” ಎಂದು ಆಗಲೆ ಎರಡು ಬಾರಿ ಕೇಳಿ ಉತ್ತರ ದೊರೆಯದೆ ಸ್ವಲ್ಪ ಸಿಟ್ಟುಗೊಂಡಿದ್ದರು ಸುನಂದೆಯ ತಾಯಿ, ಮೂಗಿನ ಮೇಲೆ ಕನ್ನಡಕವೇರಿಸಿ ಕೃಷ್ಣಪ್ಪನವರು ಮೌನವಾಗಿ ಕಾಗದ ಓದಿ ಮುಗಿಸಿದ ವರೆಗೂ, ಅವರು ಸಹನೆಯಿಂದ ನಿಂತರು, ತಲೆ ಬಾಗಿಸಿ ಕನ್ನಡಕದೆಡೆಯಿಂದ ಅವರು ತಮ್ಮನ್ನು ಕುರಿತು ಮುಗುಳು ನಕ್ಕಾಗ ಮಾತ್ರ ಅವರಿಗೆ ಮೈಯುರಿಯಿತು. “ಮಗು ಏನು ಬರೆದಿದೆ? ಸ್ವಲ್ಪ ಗಟ್ಟಿಯಾಗಿ ಓದ್ದಾರೆ ಕೃಷ್ಣಪ್ಪನವರು ಸಣ್ಣನೆ ನಕ್ಕು ತಲೆಯೆತ್ತಿ ಗಟ್ಟಿಯಾಗಿ ನಿಧಾನವಾಗಿ ಓದಿ ಹೇಳಿದರು. ಓದಿ ಮುಗಿದ ಬಳಿಕ ಕಾಗದವನ್ನು ಮಡಚಿ ಹಾಗೆಯೇ ಲಕೋಟೆಯೊಳಗಿರಿಸಿ ಅವರು ಸಮಾಧಾನದ ನಿಟ್ಟುಸಿರು ಬಿಟ್ಟರು.

  • ಅಂತೂ ವಿಜಯಾ ಒಳ್ಳೆ ಮನೆ ಸೇರಿದ ಹಾಗಾಯ್ತು, ಇನ್ನೆಲ್ಲಾ ಲಾ ದೇವ

ಅಷ್ಟರಲ್ಲಿ ಅವರಿಗೆ, ತನ್ನ ಕಾಗದವನ್ನೆತ್ತಿಕೊಂಡು ಒಳಹೋಗಿದ್ದ ಸುನಂದೆಯ ನೆನಪಾಯಿತು. ಅವರು ಕರೆದರು: “ಸುಂಬಾ, ಅದೇನಮ್ಮ ಬರೆದಿದಾಳೆ ನಿಂಗೆ? ....ಸುನಂದಾ ಆಗಲೇ ಕಾಗದವನ್ನು ಓದಿಯಾಗಿತ್ತು. ಅಕ್ಕನಿಗೆ ಬರೆದ ಆ ಓಲೆಯಲ್ಲಿದ್ದುದು ಸಲಿಗೆಯ ಧ್ವನಿ. 'ಈ ಊರು ಬೇಜಾರು, ಹೊತ್ತೇ ಹೋಗಲ್ಲ. ಅವರು ಆಫೀಸಿನಿಂದ ಬರೋವರೆಗೂ ಎಷ್ಟು ಕಷ್ಟವಾಗುತ್ತೆಂತ!' ಅತ್ತೆಯ ವಿಷಯ ವಾಗಿ ಒಳ್ಳೆಯ ಮಾತು. “ನಿನ್ನ ಕೈಲಿ ಎಷ್ಟಾಗುತ್ತೋ ಅಷ್ಟು ಸಹಾಯ ಮಾಡಮ್ಮಾ... ಅಂತಾರೆ... ಮೈದುನನ ಒಳ್ಳೆಯವರು. ಈಗಲೇ ಮದುವೆ ಮಾಡಿ ಕೊಳ್ಳೋದಿಲ್ಲವಂತೆ... ಮತ್ತೆ ತವರುಮನೆಯ ನೆನಪು. ನಿನ್ನೆ ರಾತ್ರೆ ಇದ್ದಕ್ಕಿದ್ದಂತೆ ಅಳು ಬಂದು ಬಿತ್ತು. ಯಾಕತ್ತೀಯಾ? ಅಂದರು ನಮ್ಮವರು. ತವರು ಮನೆ ನೆನಪಾಯ್ತಾ? ಅಂತ ಕೇಳಿದರು. ಅಂತ ಕೇಳಿದರು. ಹೂಂ ಅಂದೆ. ಹುಚ್ಚಿ ಎಳೆ ಮಗು-ಅಂತ