28 ಏಕಾಂಗಿ ಅಂದೆ. ನನಗ್ಯಾಕೋ ತಿಂಗಳಿಗೊಂದು ಒಳ್ಳೇ ಗೇಲಿ ಮಾಡಿದರು. ಅದು ಸರೀನಾ ಅಕ್ಕಾ? ವಯಸ್ಸು ಎಷ್ಟಾದರೇನಂತೆ? ಹುಟ್ಟಿ ಬೆಳೆದ ಮನೆಯ ನೆನಪಾಗೋದು ಸ್ವಾಭಾವಿಕ ಅಲ್ವಾ? ನಿನ್ನೆ ಬಾ ಆವರೊಂದು ವಸ್ತು ಕೊಂಡ್ಕೊಂಡು ಬಂದರು. ಏನು ಹೇಳು? ಉಹೂಂ, ಬೆಟ್ ಕಟ್ಟಿನಿ. ನಿನ್ನೆಲಾಗಲ್ಲ, ಮೈಸೂರು ಮಲ್ಲಿಗೆ ಕಣೇ, ಕಥೆ ಪುಸ್ತಕವಂತೂ ಈಗ ಬಹಳ ಅಗ ಅಂದರು. ಅದು ನನಗೆ ಮೊದಲೇ ಗೊತ್ತಿತ್ತು ಕಥೆ ಪುಸ್ತಕ ಕೊಂಡ್ಕೊಳ್ಳೋಣ ಅಂದರು. ಭಯ, ಕೊಂಡು ಕೊಂದ್ಮಲೆ ಚೆನ್ನಾಗಿಲ್ಲೆ ಹೋದರೆ? ದುಡ್ಡು ದಂಡ, ಅದಕ್ಕೆ ಯಾವುದಾದರೂ ಲೈಬ್ರೆರಿಗೆ ಮೆಂಬರಾಗೋದೇ ವಾಸೀಂತಿದೀನಿ, ಆ ವಿಷಯ ಅವರಿಗೆ ಹೇಳೇಕು, ನಿನ್ನ ದೇಮ ಅಭಿಪ್ರಾಯ... ನನ್ನ ಪಾಲಿಗೆ ಬಂದ ಪಂಚಾಮೃತ ಹೀಗಿರುತ್ತೇಂತ ಕನಸಿ ಕಲ್ಲ ನಾನು ಊಹಿಸಿಲ್ಲ ಅಕ್ಕ. ಆ ಗಿಣೀನ ಅವನ ಕೈಗೆ ಕೊಡ್ತಾರಲ್ಲಾ ಅಂತ ಪಕ್ಕದ ಮನೆಯೋರು ಅಂದಿಲ್ವೆ ಆ ದಿವಸ? ಜ್ಞಾಪಿಸಿಕೊಂಡರೆ ನಗು ಬರುತ್ತೆ. ಗಿಣೀನ ಈಗ ಸಾಕ್ತಿರೋದು ಕಿರಾತನಲ್ಲ ದೇವರು!?........ಮತ್ತೆ ಪುನಃ ಬೇಸರದ ಧ್ವನಿ.... “ನೀನು ಹ್ಯಾಗಿದೀಯಾ ಅಕ್ಕ ನಾನು ಮನೆ ಬಿಟ್ಟು ಬಂದಮೇಲೆ ಏನು ವಿಶೇಷ? ಸರಸ್ವತಿ ನನ್ನನ್ನ ಮರೆಟ್ಟ ದಾಳೋ ಏನೋ, ಅಮ್ಮ ಅಪ್ಪನ್ನ ನೋಡ್ಕೊ ಅಕ್ಕ, ನೀನೂ ಇಲ್ಲದೆ ಹೋಗಿದ್ರೆ ಎಷ್ಟೊಂದು ಕಷ್ಟವಾಗಿತ್ತು ಅವರಿಗೆ ಅಕ್ಕ-ಅಕ್ಕ- ನಿನ್ನ ಮನಸ್ಸು ಹೇಗಿದೆ? ಆಳು ಒರಿದೆ ನಂಗೆ. ನಿನ್ನನ್ನು ನೋಡಬೇಕೂಂತ ಆಸೆ ಯಾಗ್ತಿದೆ..ಕಾಗದ ಬರಿ ಅಕ್ಕಾ, ದೊಡ್ಡ ಕಾಗದ-ದೊಡ್ಡದು... ಓದಿ ಮುಗಿಸಿದಳು ಸುನಂದಾ, ಆಕೆಯ ಪಾಲಿಗೆ ಅದು ಅಪೂರ್ವ ಅನುಭವ, ಓದುತ್ತ ಆಗಾಗ್ಗೆ ನಗು ಬಂತು. ಒಮ್ಮೊಮ್ಮೆ ಮೆದುಳು ಧೀಂಗುಟ್ಟಿತು. ಉಗುಳು ಗಂಟಲಲ್ಲಿ ಸಿಲುಕಿತು. ಬಳಿಕ ಒಮ್ಮೆಲೆ ತಣುಪಾದ ಗಾಳಿ ಬೀಸಿದಂತಾಗಿ ಹೃದಯ ಹಾಡಿತು ಪ್ರದಃ ... '... ಕಾಗದ ಓದಿಯಾಯ್ತಿ ಸುನಂದಾ?" ಮತ್ತೆ ಬಂದಿತ್ತು ತಂದೆಯ ಸ್ವರ, ಸುನಂದಾ, ಸೆರಗಿನ ಅಂಚಿನಿಂದ, ತೇವ ಮಯವಾಗಿದ್ದ ಕಣ್ಣುಗಳನ್ನೊಮ್ಮೆ ಒತ್ತಿಕೊಂಡಳು, ಮುಗುಳು ನಗುತ್ತ ಕಾಗದ ದೊಡನೆ ಹೊರಬಂದಳು. “ವಿಜಯಾ ನಿನಗೂ ಬರೆದಿದಾಳಾ? " ಎಂದು ತಾಯಿ ಕೇಳಿದರು. “ಹೂಂ,” ಎನ್ನುತ್ತ ಸುನಂದಾ ಕಾಗದವನ್ನು ತಂದೆಯ ಕೈಗೆ ಕೊಟ್ಟಳು. ಅವರು, ತಮ್ಮ ಕೈಲಿದ್ದುದನ್ನು ಮಗಳಿಗಿತ್ತು, ಆಗಲೆ ತೆಗೆದು ಕಿಟಕಿಯ ದಂಡೆಯ ಮೇಲಿರಿಸಿದ್ದ ಕನ್ನಡಕವನ್ನು ಮತ್ತೆ ಏರಿಸಿದರು. ಒಂದೆರಡು ಸಾಲುಗಳ ಮೇಲೆ ಮೌನವಾಗಿ ಕಣೋಡಿಸಿ, ಬಳಿಕ, ಹೆಂಡತಿಗೂ ಕೇಳಿಸಲೆಂದು ಗಟ್ಟಿಯಾಗಿ ಓದತೊಡ ಗಿದರು. ಓದುತ್ತಲಿದ್ದಂತೆ ನಗು ಬಂತು. ಬಿದ್ದು ಬಿದ್ದು ನಕ್ಕರು. ನಗುತ್ತ ಓದಿದರು. ವಯಸ್ಸಾದ ಕಣ್ಣುಗಳಿಂದ ಹರ್ಷಾತ್ತು ಉದುರಿತು. ಒಡಹುಟ್ಟಿದವರೊಳಗಿನ ಒಲ
ಪುಟ:Ekaangini by Nirajana.pdf/೩೨
ಈ ಪುಟವನ್ನು ಪರಿಶೀಲಿಸಲಾಗಿಲ್ಲ.