ಈ ಪುಟವನ್ನು ಪರಿಶೀಲಿಸಲಾಗಿಲ್ಲ.

36 ಕೃಷ್ಣಪ್ಪನವರು ಉಗುಳು ನುಂಗಿದರು. ಸಾಧ್ಯವಿದ್ದಿದ್ದರೆ ಅದಕ್ಕಿಂತಲೂ ಕಠಿನ ವಾದ ಮಾತನ್ನೆ ಆಡಲು, ಶಪಿಸಿಬರಲು, ಅವರು ಸಿದ್ದರಿದ್ದರು. ಆದರೆ ಈಗ ಅವೆಲ್ಲ, ತಮ್ಮೊಳಗೆ ತಾವೇ ಅಂದುಕೊಳ್ಳಬೇಕಾದ ಮಾತುಗಳು ಮಾತ್ರ. ಸುನಂದೆಯ ತಾಯಿ ಬಿಕ್ಕಿಬಿಕ್ಕಿ ಅತ್ತರು: ಉರಿಯುತ್ತಿದ್ದ ಬೆಂಕಿಯ ಮುಂದೆ ಬಿಸಿಯಾದ ಕಂಬನಿ ಒಂದರಮೇಲೊಂದಾಗಿ ತೊಟ್ಟಿಕ್ಕಿತು; ಅಂದರು; ಕೈಹಿಡಿದವಳ ಸಂಕಟವನ್ನು ಸಹಿಸಲಾರದೆ ಕೃಷ್ಣಪ್ಪನವರು ಅಸಹನೆಯಿಂದ a “ಅಳಬೇಡ, ಯಾಕ್ಷುಮ್ಮೆ ಅಲ್ಲೀಯಾ? ನೀನು ಅತ್ತರೆ ಅವನಿಗೆ ಬುದ್ದಿ ಬರು ತೇನು?... ಮಾಡೋ ಕೆಲಸ ನಾವು ಮಾಡೋಕು. ಉಳಿದದ್ದೆಲ್ಲ ಭಗವಂತನ ಇಚ್ಛೆ. ಸ್ವಸ್ಥವಾಗಿರು. ಎಲ್ಲಾ ಸರಿಹೋಗುತ್ತೆ.” ಆ ನಂಬಿಕೆಯೊಡನೆ ಅವರ ಮಾತುಕತೆ ಮುಕ್ತಾಯವಾಯಿತು.

  • . ಬುಧವಾರ ಬಂತು.

ಮಗಳಿಗೂ ಹೇಳಿದರು: “ಬರೋದು ತಡವಾಗುತ್ತೋ ಹೊರಡಲನುವಾದ ಕೃಷ್ಣಪ್ಪನವರು ಹೆಂಡತಿಗೂ ಏನೋ, ಭಾನುವಾರ ಆತನಿಗೆ ರಜಾ, ಅಂತೂ ಆ ರಾತ್ರಿಯೋ ಸೋಮವಾರವೋ ಅಲ್ಲಿಂದ ಹೊರಡ್ತೀನಿ.” ಕಾಗದ ಬರೀತೀಯಾ?” ಎಂದು ಸುನಂದಾ ಕೇಳಿದಳು. ಅಂತಹ ಅಭ್ಯಾಸವೇ ಸಾಮಾನ್ಯವಾಗಿ ಇಲ್ಲದ ಕೃಷ್ಣಪ್ಪನವರು ಉತ್ತರಕ್ಕಾಗಿ ಅರೆಕ್ಷಣ ತಡವರಿಸಿ ಅಂದರು: “ತುರ್ತಾಗಿ ತಿಳಿಸ್ಟೇಕಾದ್ದು ಏನಾದರೂ ಇದ್ದರೆ ಬರೀತೀನಿ.” “ನಾನು ಬರೋಕಾಗುತ್ತಾ?” “ಪರಿಸ್ಥಿತಿ ನೋಡ್ಕೊಂಡು ಬರೀತೀನಿ ಸುನಂದಾ.' ಸುನಂದೆಯ ತಾಯಿ ಏನನ್ನೂ ಹೇಳಲಾರದೆ ಸುಮ್ಮನೆ ನಿಂತರು. ಕೃಷ್ಣಪ್ಪನವರು ಹಳೆಯದಾಗಿದ್ದ ತಮ್ಮ ಚಪ್ಪಲಿ ಮೆಟ್ಟಿಕೊಂಡು, ಧೋತರದ ಅಂಚನ್ನು ಬಲಗೈಯಿಂದ, ಎಡಗೈಯಲ್ಲಿ ಚೀಲಹಿಡಿದು, ರೈಲು ನಿಲ್ದಾಣದ ಕಡೆಗೆ ನಡೆದರು. ಕೃಷ್ಣಪ್ಪನವರು ಬೆಂಗಳೂರು ಸೇರಿದಾಗ ಸೂರ್ಯ ನಡುನೆತ್ತಿಯನ್ನು ದಾಟಿ ಪಕ್ಕಕ್ಕೆ ಸರಿದಿದ್ದ. ತಾಲ್ಲೂಕು ಕಚೇರಿಯ ಗುಮಾಸ್ತೆಯಾಗಿ ಹತ್ತೆಂಟು ಊರು