37 ತಿರುಗಿದ್ದ ಅವರಿಗೆ, ಸಂಸ್ಥಾನದ ಆಡಳಿತ ಕೇಂದ್ರವಾದ ಬೆಂಗಳೂರು ಹಳೆಯ ಪರಿ ಅದು ಬೇಸರ ಬರಿಸುವಷ್ಟು ಹಳೆಯ ಪರಿಚಯ, ಚಯದ ಜಾಗ. ಆದರೆ ಈ ಸಾರೆಯಷ್ಟು ಅಸ್ತವ್ಯಸ್ತ ಮನಸ್ಸಿನಿಂದ ಹಿಂದೆಂದೂ ಅವರು ಬೆಂಗಳೂರಿಗೆ ಬಂದಿರಲಿಲ್ಲ. ಮೊದಲ ನೋಟಕ್ಕೆ ಗೊಂದಲಪುರವಾಗಿ ಕಾಣುತಿದ್ದ ಬೆಂಗಳೂರಿನ ಹಿನ್ನೆಲೆಯಲ್ಲಿ, ಈಗ ಅವರ ತಲೆಯೊಳಗಿನ ಗೊಂದಲವೂ ಹೆಚ್ಚಿತು. ಕಳೆದ ನಾಲ್ಕು ವರ್ಷಗಳಲ್ಲಿ ಅವರಿಗೆ ಬೆಂಗಳೂರು, ಒಂದು ರೀತಿಯಲ್ಲಿ ಅಪ್ಪ ವಾಗಿತ್ತು. ಅವರ ಪಾಲಿಗೆ ಆ ಮಹಾ ನಗರ ಬರಿಯ ಗೆಳೆಯರಿದ್ದ ಊರು ಮಾತ್ರ ವಾಗಿರಲಿಲ್ಲ. ಅಲ್ಲಿತ್ತು ಅಳಿಯನ ಮನೆ ತನ್ನ ಮಗಳ ಗಂಡನ ಮನೆ. ಆದರೆ ಈಗ ಆ ಊರಲ್ಲಿ ಯಾರೂ ಇಲ್ಲ. ಅಳಿಯ ಇನ್ನೂ ಅಲ್ಲೇ ಇದ್ದರೂ ಆ ನಗರವನ್ನು ಕುರಿತಾದ ಆತ್ಮೀಯತೆಗೆ ಕೃಷ್ಣಪ್ಪನವರ ಹೃದಯದಲ್ಲಿ ಎಡೆಯೇ ಇರಲಿಲ್ಲ, ಅಭ್ಯಾಸ ಸ ಬಲದಿಂದಲೆ ಕೃಷ್ಣಪ್ಪನವರು ಬೀದಿಯುದ್ದಕ್ಕೂ ನಡೆದು, ನೀರಿಲ್ಲದ ಧರ್ಮಾಂಬುಧಿ ಕೆರೆಗಿಳಿದು, ಅದನ್ನು ಹಾದು, ಮೆಜೆಸ್ಟಿಕ್ ವೃತ್ತವನ್ನು ತಲಪಿದರು, ಅಲ್ಲಿ ನಿಂತು, 'ಇಲ್ಲಿ ತನಕ ಬಂದುದಾಯ್ತು, ಇನ್ನೆಲ್ಲಿಗೆ?” ಎಂದು ತಮ್ಮನ್ನೇ ಕೇಳಿದರು. ಈಗಲೇ ನೇರವಾಗಿ ಪುಟ್ಟಣ್ಣನ ಆಫೀಸಿಗೆ ಹೋಗುವುದೇ ಸರಿ ಎಂದು ಎಂದು ಒಮ್ಮೆ ಯೋಚಿಸಿದರು. ಬಳಿಕ, ಆತುರಪಡುವುದು ಸರಿಯಲ್ಲ, ಈ ಹೊತ್ತು ಸುಮ್ಮನಿದ್ದು ನಾಳೆಯ ದಿನ ಆತನ ಭೇಟಿ ಮಾಡಿದರಾಯಿತು, ಎಂದು ಹಿಂದಿನ ಯೋಚನೆಯನ್ನು ಬದಿಗೆ ಸರಿಸಿದರು. ಒಂದಲ್ಲ ಒಂದು ಕಾಲದಲ್ಲಿ ಸಹೋದ್ಯೋಗಿಗಳಾಗಿದ್ದ ಒಬ್ಬಿಬ್ಬರು ಗೆಳೆಯರೂ ಬೆಂಗಳೂರಲ್ಲಿದ್ದರು. ರಾಮಕೃಷ್ಣಯ್ಯನ ಮನೆಯಲ್ಲಿ ಇಳಿದುಕೊಂಡರಾಯಿತೆಂದು ತೀರ್ಮಾನಿಸಿದರು. ಅದಕ್ಕೆ ಕಾರಣವಿತ್ತು. ಅವರಿಬ್ಬರ ವಯಸ್ಸಿನಲ್ಲಿ ಎರಡು ಮೂರು ವರ್ಷಗಳ ಅಂತರವಿದ್ದರೂ ಆ ಇಬ್ಬರೂ ನೌಕರಿಯಿಂದ ನಿವೃತ್ತರಾದುದು ಒಂದೇ ವರ್ಷ. ಕೃಷ್ಣಪ್ಪನವರ ಸಂಸಾರಕ್ಕಿಂತಲೂ ದೊಡ್ಡದು ರಾಮಕೃಷ್ಣಯ್ಯನವರದು. ದೊಡ್ಡ ಸಂಸಾರದ ಸುಖದುಃಖಗಳ ಸವಿಯುಂಡು ರಾಮಕೃಷ್ಣಯ್ಯ ಅನುಭವಿಯಾಗಿ ದ್ದರು. ತಮ್ಮ ಅಥವಾ ಇನ್ನೊಬ್ಬರ ಕಷ್ಟವನ್ನು ಕಂಡು ಸುಮ್ಮನಿರುವ ಪ್ರವೃತ್ತಿ ಅವರದಲ್ಲ. ಎಂದೆಂದೂ ಬರಿದಾಗದಂತಹ ಸಹಾನುಭೂತಿಯ ಆಗರ ಅವರ ಹೃದಯ, ಹಿಂದೆ ಸಾಮಾನ್ಯವಾಗಿ ಕೃಷ್ಣಪ್ಪನವರು ತಮಗಿಂತ ಚಿಕ್ಕವನೊಬ್ಬನ ಮನೆಯಲ್ಲಿ ಇಳಿಯುತ್ತಿದ್ದರೂ ಈ ಸಾರೆ ರಾಮಕೃಷ್ಣಯ್ಯನ ಸಾಮೀಪ್ಯವನ್ನೇ ಬಯ ಸಿದರು. ಶೇಷಾದ್ರಿಪುರಕ್ಕೆ ಒಂದಾಣೆಯ ಮೋಟಾರು ಪ್ರವಾಸ ಶೇಷಾದ್ರಿ ಪುರಕ್ಕೆ ಅವರನ್ನು ತಂದು ಬಿಟ್ಟಿತು. ಅಲ್ಲಿ ಐದು ನಿಮಿಷ ಕಾಲ್ನಡಿಗೆ, ರಾಮಕೃಷ್ಣಯ್ಯ ಮನೆಯಲ್ಲಿರಲಿಲ್ಲ.
- ಬನ್ನಿ, ಕೂಳ್ಳಿ, ಅಪರೂಪವಾಗಿ ಬಂದಿರಿ. ಮನೇಲಿ ಎಲ್ಲರೂ ಸೌಖ್ಯವಾ
ವಿಜಯಾ ಮದುವೆ ಚೆನ್ನಾಗಿಯೇ ಆಯ್ತಂತೆ"....ಎಂದೆಲ್ಲ ರಾಮಕೃಷ್ಣಯ್ಯನವರ