ಈ ಪುಟವನ್ನು ಪರಿಶೀಲಿಸಲಾಗಿಲ್ಲ.

40 66 “ನನ್ನ ಕಾಗದ ತಲಕ್ಕೆ?" “ಹೂಂ, ಅದು ಬಂದ ಮೇಲೆಯೇ ಹೊರಡೋ ತೀರ್ಮಾನ ಮಾಡ್ಡೆ. ರಾಮಯ್ಯನವರನ್ನು ರಾಧಮ್ಮ ಒಳಕ್ಕೆ ಕರೆದರು. ಅಲ್ಲಿಂದ ಹೊರ ಬರುತ್ತ ರಾಮಯ್ಯ ಹೇಳಿದರು: ತಾವು ನಮ್ಮನೇಲೇ ಉಳಕೋಬೇಕು. ಬಡವರ ಮನೆ ಅತಿಥ್ಯ... ಈ ಪ್ರೇಮಾದರವೆಲ್ಲ ಮುಳ್ಳು ಮೊನೆಯಾಗಿತ್ತು ಕೃಷ್ಣಪ್ಪನವರ ಪಾಲಿಗೆ ತಮ್ಮನ್ನು ಕುಗ್ಗಿಸುತ್ತಿದ್ದ ಹೃದಯದ ಭಾರವೊಂದಿಲ್ಲದೆ ಇದ್ದಿದ್ದರೆ, ಆತ್ಮೀಯತೆಯ ನುಡಿಗಳನ್ನು ಕೇಳಿದಾಗ ಅವರಿಗೆ ಹಾಗೆ ಸಂಕಟವಾಗುತ್ತಿರಲಿಲ್ಲ. ರಾಧಮ್ಮನ ಅಪೇಕ್ಷೆಯನ್ನು ಮಾತಿನ ರೂಪದಲ್ಲಿ ವ್ಯಕ್ತಪಡಿಸಿದ ರಾಮಯ್ಯ ನವರ ಆಹ್ವಾನ ಕೇಳುತ್ತ, ಕೃಷ್ಣಪ್ಪನವರ ಕಣ್ಣು ಮಂಜಾಯಿತು. “ದಯವಿಟ್ಟು, ಕ್ಷಮಿಸ್ಟೇಕು, ನನ್ನ ಸ್ನೇಹಿತನೊಬ್ಬನ ಮನೇಲಿ ಆಗಲೆ ಚೀಲ ಇಟ್ಟು ಬಂದಿದೀನಿ. ಅಲ್ಲಿಯೇ ಇದ್ದೀನಿ, ನೀವೇನೂ ತಿಳ್ಕೊಬಾರದು.” ಬಾಗಿಲ ಬಳಿ ನಿಂತು ರಾಧಮ್ಮನೆಂದರು: “ಹಾಗಾದರೆ ಉಟಾನಾದರೂ ಇಲ್ಲೇ ಮಾಡಿ.” “ಇಲ್ಲ ತಾಯಿ. ಆ ಮನೇಲಿ ಆಗ್ಗೆ ಅಡುಗೆ ಮಾಡಿಟ್ಟಿದ್ದಾರೆ. ನಾನು ಇನ್ನೂ ಎರಡು ಮೂರು ದಿವಸ ಇದ್ದೀನಿ. ಊಟಕ್ಕೆ ಇನ್ನೊಮ್ಮೆ ಬಡ್ತೀನಿ.” ಆ ಮಾತಿನಿಂದ ದಂಪತಿಗಳಿಗೆ ಸ್ವಲ್ಪ ಸಮಾಧಾನವಾದಂತಾಯಿತು. ...ಕೇಳಿ ತಿಳಿದುಕೊಂಡುದು, ರಾಧಮ್ಮ ಕಾಗದದಲ್ಲಿ ಬರೆದಿದ್ದ ವಿಷಯಗಳನ್ನೇ ಮಾತನಾಡಿದವರು ರಾಧಮ್ಮನೇ, ರಾಮಯ್ಯ ನಡು ನಡುವೆ ತಲೆಯಾಡಿಸುತ್ತ ರಾಧಮ್ಮ “ಅಲ್ವೇ?” ಎಂದು ತಮ್ಮೆಡೆಗೆ ತಿರುಗಿದಾಗ "ಹೌದೆನ್ನುತ್ತಾ ಮಾತುಕತೆ ಯಲ್ಲಿ ಭಾಗಿಯಾದರು. “ರೂಮಿಗೆ ಹೋಗಿ ಓದೊ" ಎಂದು ತಾಯಿ ಸೂಚಿಸಿ ಮದರಿಂದ ಹುಡುಗರು ಮೊದಲೆ ಎದ್ದು ಬಿಟ್ಟಿದ್ದರು. “ಈಗ ನಾನೇನು ಮಾಡೋಕೂಂತ ಹೇಳೀರಿ ತಾಯಿ?” ಕೃಷ್ಣಪ್ಪನವರು ಕೇಳಿದ ಪ್ರಶ್ನೆಗೆ ರಾಧಮ್ಮನವರಲ್ಲಿ ಉತ್ತರ ಸಿದ್ಧವಿರಲಿಲ್ಲ. ಅವರು ತಮ್ಮ ಗಂಡನ ಮುಖ ನೋಡಿದರು. ಸುಮ್ಮನೆ ಪಿಳಿಪಿಳಿ ಕಣ್ಣು ಬಿಟ್ಟರು ರಾಮಯ್ಯ, ಉತ್ತರ ಬರದೆ ಇದ್ದುದನ್ನು ಕಂಡು ಕೃಷ್ಣಪ್ಪನವರು ಒಂದೆರಡು ಕ್ಷಣ ಸುಮ್ಮ ನಿದ್ದು ಮತ್ತೆ ಅಂದರು: “ನಾನೊಂದು ಪ್ರಶ್ನೆ ಕೇಳೀನಿ. ನನ್ನ ಮಗಳ ಹಿತಕ್ಕಾಗಿಯೇ ನಾನು ಹೀಗೆ ಕೇಳೋದು. ಯಾವ ಸಂಕೋಚವೂ ಇಲ್ಲೆ ನೀವು ಉತ್ತರ ಕೊಡೋಕು, ಅಳಿಯನಿಗೆ ಬೇಸರ ಬರೋ ರೀತೀಲಿ ಸುನಂದಾ ನಮ್ಮೊಳ್ತಾ ಇದ್ದೆ?” “ಛೇ! ಛೇ!” ಎಂದರು ರಾಧಮ್ಮ, ನೊಂದ ಧ್ವನಿಯಲ್ಲಿ ಈ ಆರೋಪ ಸರಿಯಲ್ಲ