ಈ ಪುಟವನ್ನು ಪರಿಶೀಲಿಸಲಾಗಿಲ್ಲ.

39 ಗದ್ದಲ ಒಂದನ್ನೂ ಲೆಕ್ಕಿಸದೆ ನಿದ್ದೆ ಹೋಗುವ ಅವರ ಅಭ್ಯಾಸ ಅಸಾಧಾರಣ ವಾದದ್ದು...ಆಯಾಸದ ಪರಿಣಾಮವಾದ ನಿದ್ದೆ ಮುಗಿದು ಎಚ್ಚರವಾದಾಗ ಮುಚ್ಚಂಜೆ ಯಾಗಿತ್ತು. ರಾಮಕೃಷ್ಣಯ್ಯ ಇನ್ನೂ ಮನೆಗೆ ಬಂದಿರಲಿಲ್ಲ. ಅವರು ಎಚ್ಚೆತ್ತುದನ್ನು ಗಮನಿಸಿ ಹೊರಬಂದ ಮನೆಯೊಡತಿಯನ್ನು ನೋಡಿ ಕೃಷ್ಣಪ್ಪ ಅಂದರು: 66 “ನಾನು ಸ್ವಲ್ಪ ತಿರುಗಾಡ್ಕೊಂಡು ಬನಿ, ಚೀಲ ಇಲ್ಲೇ ಇಲ್ಲ, “ಹೋಸ್ಪಿಟ್ಟು ಬನ್ನಿ, ಇನ್ನೇನು, ಅವರು ಬರೋ ಹೊತ್ತೂ ಆಯ್ತು, ಎಂದರು ರಾಮಕೃಷ್ಣಯ್ಯನ ಹೆಂಡತಿ, ಬೀದಿಯ ಕಡೆ ನೋಡುತ್ತ, ನಿದ್ದೆ ಮುಗಿದು ಕಣ್ಣು ತೆರೆದಾಗಲೆ, ತಾವೊಮ್ಮೆ ರಾಧಮ್ಮನನ್ನು ಕಂಡು ಬರ ಬೇಕೆಂಬ ಅಪೇಕ್ಷೆ ಅವರ ಮನಸ್ಸಿನಲ್ಲಿ ಸ್ಪುಟವಾಗಿತ್ತು. ...ಎರಡು ಬೇರೆ ಬೇರೆ ಬಸ್ಸುಗಳನ್ನೇರಿ ಇಳಿದು, ಆ ಬಡಾವಣೆಗೆ ನಡೆದು ಕೃಷ್ಣಪ್ಪನವರು ತಮ್ಮ ಅಳಿಯ ಹಿಂದೆ ವಾಸವಾಗಿದ್ದ ಮನೆಯನ್ನು ತಲಪಿದರು. ಬಾಗಿಲು ತಟ್ಟಿ, “ರಾಮಯ್ಯರೇ” ಎಂದು ಕರೆದುದಾಯಿತು. “ಯಾರು?” ಎನ್ನುತ್ತ ರಾಮಯ್ಯ ಕದ ತೆರೆದರು. ವಿದ್ಯುದ್ದೀಪದ ಮಂದ ಪ್ರಕಾಶ ಆ ಮನೆಯೊಳಗೆ ನೆರಳು-ಬೆಳಕುಗಳ ಚೆಲ್ಲಾಟ ನಡೆಸಿತ್ತು. ಬಂದ ವ್ಯಕ್ತಿಯ ಪರಿಚಯವಾಗದೆ ಇದ್ದರೂ “ಬನ್ನಿ' ಎಂದರು ರಾಮಯ್ಯ, ಗಂಡನ ಹಿಂದೆಯೇ ಬಂದು ಹೊರನೋಡಿದ ರಾಧಮ್ಮ, ಕೃಷ್ಣಪ್ಪನವರ ಗುರುತು ಹಿಡಿದು ಸಂತೋಷದ ಧ್ವನಿಯಲ್ಲಿ ಅಂದರು: “ಬನ್ನಿ ... ಸುನಂದೆಯ ತಂದೆ ಕ]...!” www “ದಯಮಾಡಿಸಿ, ದಯಮಾಡಿಸಿ," ಎಂದರು ರಾಮಯ್ಯ ಈಗ ಲವಲವಿಕೆಯಿಂದ ತುಂಬಿದ ಸ್ವರದಲ್ಲಿ, “ಮೊದಲು ಗುರುತು ಸಿಗಲಿಲ್ಲ. ಮುಖತಃ ಮಾತನಾಡಿ ಪರಿಚಯವಿಲ್ಲ ನೋಡಿ. ಹೀಗಾಗಿ ಹೀಗಾಗಿ.." ಎಂದೂ ಹೇಳಿದರು, ವಿವರಣೆ ಕೊಡುವ ಧ್ವನಿಯಲ್ಲಿ. ಕೃಷ್ಣಪ್ಪನವರು ಒಳಹೊಕ್ಕು, ಮನೆಯವರು ಹಾಸಿದ ಚಾಪೆಯ ಮೇಲೆ ಕುಳಿ ತರು. ಓದುತ್ತ ಬರೆಯುತ್ತ ಕುಳಿತಿದ್ದ ಹುಡುಗರಿಬ್ಬರು ತಲೆಯೆತ್ತಿ ಬಂದವರನ್ನು ನೋಡಿದರು. 'ರಾಧಮ್ಮನ ಮಕ್ಕಳಿರಬೇಕು' ಎಂದುಕೊಂಡರು ಕೃಷ್ಣಪ್ಪ, ದೃಷ್ಟಿ ಬಾಗಿಲಿನಾಚೆಗೆ ಇರುಳನ್ನು ಭೇದಿಸುತ್ತ ಪಕ್ಕದಲ್ಲಿದ್ದ ಮನೆಯತ್ತ ಹರಿಯಿತು, ಸುನಂದ ಪುಟ್ಟಣ್ಣನೊಡನೆ ಸಂಸಾರ ಮಾಡಿದ ಮನೆ. ಅಲ್ಲಿಂದ ನಾಲ್ಕಾರು ಹುಡುಗರ ಸ್ವರಗಳು ಕೇಳಿಸುತ್ತಿದ್ದುವು: ಒಬ್ಬ ಮಗ್ಗಿ ಗಟ್ಟಿ ಮಾಡುತ್ತಿದ್ದ ಇನ್ನೊಬ್ಬ ಇತಿಹಾಸವನ್ನು ಇಬ್ಬರು ಜಗಳವಾಡುತ್ತಿದ್ದರು... “ಸುನಂದಾನ ಕರಕೊಂಡು ಬರಿಲ್ಲಾ?” ಎಂದು ಕೇಳಿದರು ರಾಧಮ್ಮ, “ಇಲ್ಲ. ಮೊದಲು ನಾನೊಬ್ಬೇ ನೋಡ್ಕೊಂಡು ಹೋಗೋಣಾಂತ ಬಂದೆ.