ಈ ಪುಟವನ್ನು ಪರಿಶೀಲಿಸಲಾಗಿಲ್ಲ.

42 “ಹ್ಯಾಗೂ ಭಾನುವಾರದವರೆಗೆ ಇದ್ದೀರಾ, ಶನಿವಾರ ಮಧ್ಯಾಹ್ನ ನಮ್ಮಲ್ಲಿಗೇ ಊಟಕ್ಕೆ ದಯಮಾಡಿದ್ದೇಕು. ನನಗೆ ಬೆಳಗ್ಗೆ ಆಫೀಸು. ಒಂದು ಘಂಟೆಗೆಲ್ಲ ಮನೆಗೆ ಬಂದಿದ್ದೀನಿ." ರಾಧಮ್ಮ ಧ್ವನಿ ಕೂಡಿಸಿದರು: “ಇಲ್ಲ ಅನ್ವೇಡಿ. ಸಾಧ್ಯವಾದರೆ ಜತೇಲಿ ನಿಮ್ಮ ಅಳಿಯನನ್ನೂ ಕರಕೊಂಡ ಕಾದಿದ್ದೀವಿ.” “ಆಗಲಿ, ಆಗಲಿ,” ಎಂದರು ಕೃಷ್ಣಪ್ಪ, ...ಅವರು ಶೇಷಾದ್ರಿಪುರ ತಲಪಿದಾಗ ಆಗಲೆ ಎಂಟೂವರೆ ಗಂಟೆಯಾಗಿತ್ತು. ರಾಮಕೃಷ್ಣಯ್ಯ ಮನೆಗೆ ಬಂದಿದ್ದರು. “ಬತ್ತೀನಿಂತ ಒಂದು ಕಾರ್ಡು ಹಾಕ್ಟಾರಾಗಿತ್ತೆ? ನಾನು ಸುಮ್ಮುಮ್ಮೆ ಯಾರಾರ ಜತೇಲೋ ಹರಟೆ ಹೊಡೀತಾ ನಿಂತಿಟ್ಟೆ, ಹೂಂ, ಎಲ್ಲಿ, ನಶ್ಯ ನೋಡೋಣ. ಬಹಳ ದಿವಸವಾಯು ನಿಮ್ಮೂರಿನ ನಶ್ಯ ಮೂಗಿಗೇರಿಸದೆ.” ಆ ಸ್ವಾಗತ ಭಾಷಣದ ಬಳಿಕ ರಾಮಕೃಷ್ಣಯ್ಯ, ಕೃಷ್ಣಪ್ಪ ನೀಡಿದ ಡಬ್ಬದಿಂದ ಚಿಟಿಕೆ ನಶ್ಯವನ್ನು ಏರಿಸಿ ಹೆಹೆ ಎಂದು ಸದ್ದು ಮಾಡಿದರು. ಚಿಟಕ್ಕೆಂದು ಬೆರಳಿನಲ್ಲಿ ಉಳಿದಿದ್ದ ನಶ್ಯದ ಧೂಳಿಯನ್ನು ಗಾಳಿಗೆ ಹಾರಿಸಿ ಅವರೇ ಅಂದರು: ಮಾತು. “ಸ್ನಾನ ಸಂಧ್ಯಾವಂದನೆ ಮುಗಿಸ್ಕೊಂಡು, ಊಟಕ್ಕೇಳೋಣ, ಆಮೇಲೆ ಬಿಸಿ ನೀರಿನ ಸ್ಪರ್ಶ ಹಿತಕರವಾಗಿತ್ತು. ಸಂಧ್ಯಾವಂದನೆಯ ಮಂತ್ರಗಳು ಅಭ್ಯಾಸ ಬಲದಿಂದ ಕೃಷ್ಣಪ್ಪನವರ ನಾಲಗೆಯ ಮೇಲೆ ಕುಣಿದುವು. ಅವು ಸರಿಯಾಗಿ ದ್ದುವೋ ಇಲ್ಲವೋ ಎಂದು ಯೋಚಿಸುವ ಗೋಜಿಗೆ ಅವರು ಹೋಗಲಿಲ್ಲ. ಎಲೆಯ ಮುಂದೆ ಊಟಕ್ಕೆಂದು ಕುಳಿತಾಗ ಏನೂ ಬೇಡವೆನಿಸಿತು ಕೃಷ್ಣಪ್ಪನವ ಆದರೆ ರಾಮಕೃಷ್ಣಯ್ಯನ ನಗೆ ಮಾತುಗಳು ಮನೋವೇದನೆಯ ಇಕ್ಕುಳ ಹಿಡಿತದಿಂದ ಅವರನ್ನು ಸ್ವಲ್ಪ ಮಟ್ಟಿಗೆ ಸಡಿಲಿಸಿದುವು, ಅಂತೂ ರಾಮಕೃಷ್ಣಯ್ಯ ಊಟದಲ್ಲಿ ತೋರಿದ ಆಸಕ್ತಿಯ ಸ್ವಲ್ಪಾಂಶವನ್ನು ಕೃಷ್ಣಪ್ಪನವರೂ ತೋರಿದರು. ಊಟವಾದ ಮೇಲೆ ನನ್ನ ಸಂಕಟದ ಕತೆ ಕೇಳಿದಾಗ ಈತನಿಗೆ ಬೇಸರವಾಗ ವುದು ಇದ್ದೇ ಇದೆ,' ಎಂದು ತಮ್ಮಷ್ಟಕ್ಕೆ ಆಗ ಅವರು ಅಂದುಕೊಂಡರು. ಆದರೆ ರಾಮಕೃಷ್ಣಯ್ಯನವರಿಗೆ ಮುನ್ಸೂಚನೆ ಬಂದೇ ಇತ್ತು. ಊಟವಾದ ಬಳಿಕ ಅವರಾಡಿದ ಮೊದಲ ಮಾತಿನಿಂದಲೇ ಕೃಷ್ಣಪ್ಪನವರಿಗೆ ಆದು ತಿಳಿಯಿತು. "100. ಇನ್ನು ಬಿಚ್ಚು-ಗೋಳಿನ ಕಂತೆನಾ ಆ ಆತ್ಮವಿಶ್ವಾಸದ ಧ್ವನಿ ಕೃಷ್ಣಪ್ಪನವರ ಹೃದಯವನ್ನು ಸ್ವಲ್ಪ ಮಟ್ಟಿಗೆ ಹಗುರಗೊಳಿಸಿತು. ಮಾತಿನ ನಡು ನಡುವೆ ಆ ಸ್ನೇಹಿತ ವ್ಯಕ್ತಪಡಿಸುತ್ತಿದ್ದ ಉದ್ಘಾರ