ಏಕಾಂಗಿನಿ 43 ಮುಖಭಾವಗಳಂತೂ ಕೃಷ್ಣಪ್ಪನವರಲ್ಲಿ ಆಸೆಯನ್ನೂ ಧೈರ್ಯವನ್ನೂ ತುಂಬಿದುವು. “ಈಗ ನಾನೇನು ಮಾಡೋಕು ಅಂತೀಯಾ?” ಅದು, ಉತ್ತರದ ಹಾದಿ ನೋಡುತ್ತ ಅಲೆಯುತ್ತಲಿದ್ದ ಪ್ರಶ್ನೆ.
- ಸರಿಯಾಗಿ ನಾಲೈಟು ಬಿಗೀಬೇಕು ಆ ಮುಂದೇ ಗಂಡನಿಗೆ
ರಾಮಕೃಷ್ಣಯ್ಯ ಕೊಟ್ಟ ಉತ್ತರ ಅಂಥದು. ಆದರೆ ಅದರ ಜತೆಯಲ್ಲಿ “ಹೂಂ” ಎಂಬ ನಿಟ್ಟುಸಿರೂ ಅವರಿಂದ ಹೊರಬಿತ್ತು. ಇದೀಗ ಆ ಮೃದು ಹೃದಯ ಸಹಾನುಭೂತಿ ತೋರಿಸುತ್ತಿದ್ದ ರೀತಿ, ಮತ್ತೆ ಅವರ ಬಾಯಿಯಿಂದ ಮಾತುಗಳು ಹೊರಟವು. “ನೀನು ನಾಳೆ ದಿವಸ ಹೋಗಿ ಮಾತಾಡ್ಕೊಂಡು ಬಾ. ಅವನ ಮನಸ್ಸಲ್ಲೇ ನಿದೆಯೋ ಗೊತ್ತಾಗುತ್ತಲ್ಲ! ಅಮೇಲೆ ನಾನೂ ಒಂದ್ಬಲ ನಿನ್ನ ತೇಲಿ ಬದ್ದೀನಿ.” ಕೃಷ್ಣಪ್ಪನವರು ಒಪ್ಪಿದರು. ಆ ದಿನವೆಲ್ಲ ಒಳಗಿನ ಕೊರಗನ್ನು ಹಾಗೆ ನಾಲ್ಕು ಜನರಿಗೆ ಹಂಚಿದ ಬಳಿಕ, ಅವರಿಗೆ ಈಗ ಸಮಾಧಾನವೆನಿಸಿತ್ತು. ಈ ಸಮಸ್ಯೆಯನ್ನು ಯಶಸ್ವಿಯಾಗಿ ಬಗೆಹರಿಸಬಹುದೆಂಬ ಭರವಸೆಯನ್ನೇನೂ ರಾಮಕೃಷ್ಣಯ್ಯ ಕೊಟ್ಟಿರ ಲಿಲ್ಲ. ಆದರೂ ಅಸಹಾಯತೆಯಿಂದ ನರಳುವುದರಲ್ಲಿ ಅರ್ಥವಿರಲಿಲ್ಲ. ಕಿರಿಯ ಸೊಸೆಯ ಕೈಲಿ ಕುಡಿಯುವ ನೀರಿನ ಬಿಂದಿಗೆಯನ್ನೂ ಲೋಟವನ್ನೂ ಕೃಷ್ಣಪ್ಪನವರಿಗೆ ಕೊಡಿಸಿದ ಬಳಿಕ ರಾಮಕೃಷ್ಣಯ್ಯ ಮಲಗುವ ಕೊಠಡಿಗೆ ನಡೆದರು. ಹೊರಗಿದ್ದ ಬರಿಯ ಮಂಚ ಕೃಷ್ಣಪ್ಪನವರ ಸೇವೆಯನ್ನು ಸ್ವೀಕರಿಸಿತು. “ತಗೋ ಅಜ್ಜಾ," ಎನ್ನುತ್ತ ರಾಮಕೃಷ್ಣಯ್ಯನ ಮೊಮ್ಮಗು ತಂದು ಕೊಟ್ಟ, ದಿಂಬಿನ ಮೇಲೆ ಕೃಷ್ಣಪ್ಪ ತಲೆ ಇರಿಸಿದರು, ಬರುತ್ತ ತಂದಿದ್ದ ಜೀರ್ಣವಾಗಿದ್ದ ಕಾಶ್ಮೀರಿ ಶಾಲನ್ನು ಹೊದಿದುಕೊಂಡರು. ದೀಪವಾರಿದ ಬಳಿಕ “ರಾಮಚಂದ್ರಾ” ಎಂದರು, ಸ್ವಲ್ಪ ಹೊತ್ತು ನಿದ್ದೆ ಮಾಡಿದ್ದುದರಿಂದ ರಾತ್ರೆ ಸ್ವಲ್ಪ ಹೊತ್ತು ಎಚ್ಚರವಿರಲೇ ಬೇಕಾಯಿತು. ಬೆಳಗಾದ ಮೇಲಿನ ಕಾರ್ಯಕ್ರಮವನ್ನು ಯೋಚಿಸುತ್ತ ಅವರು ಮಲ ಗಿದರು. ಅಳಿಯನೊಡನೆ ತಾವು ಆಡಬೇಕಾದ ಮಾತುಗಳೂ ರೂಪುಗೊಂಡುವು ಹಾಗೆ ಸಿದ್ಧತೆ ನಡೆಯುತ್ತಿದ್ದಾಗಲೇ ಅವರಿಗೆ ನಿದ್ದೆ ಬಂತು. ಎಂದಲ್ಲ. ಸುನಂದೆಯ ಗಂಡ ಪುಟ್ಟಣ್ಣ, ಮಾವನ ಆಗಮನವನ್ನು ನಿರೀಕ್ಷಿಸಿಯೇ ಇರಲಿಲ್ಲ ಆದರೆ ಅದು ಆ ದಿನವೇ ಆಗುವುದೆಂದು ಆತ ಭಾವಿಸಿರಲಿಲ್ಲ, ಆಫೀಸಿಗೆ