ಈ ಪುಟವನ್ನು ಪರಿಶೀಲಿಸಲಾಗಿಲ್ಲ.

0 “ವಿಜಯಾ...ಲೇ ವಿಜಯಾ...ಏಳೇ.* ತೋಳಿನ ಕೆಳಗೆ ಮುಖ ಮರೆಸಿಕೊಂಡಿದ್ದ ವಿಜಯಾಗೆ ಆಗಲೇ ಎಚ್ಚರವಾಗಿತ್ತು, ಆದರೂ ಪದ್ಧತಿಯಂತೆ, ಎಬ್ಬಿಸಲೆಂದು ಬರುವ ಅಕ್ಕನನ್ನೋ ಅಮ್ಮನನ್ನೊ ಇದಿರು ನೋಡುತ್ತ ಆಕೆ ಮಲಗಿಯೇ ಇದ್ದಳು. ಈಗ ಅಕ್ಕನ ಸ್ವರ ಕೇಳಿಸಿತೆಂದು ಸಮಾಧಾನ ವಾಯಿತು ಆಕೆಗೆ “ಇದೇನೇ ಇದು-ಇವತ್ತೂ ಮಲಗಿಕೊಂಡೇ ಇದೀಯಾ!? ಇವತ್ತು? ಲೋಕದ ದೃಷ್ಟಿಯಲ್ಲಿ ತನ್ನ ಪಾಲಿಗಿದೊಂದು ಶುಭ ದಿನ ಕೈ ಹಿಡಿದ ಗಂಡನು ತನ್ನನ್ನು ಕರೆದೊಯ್ಯಲು ಬರುವ ದಿನ, ಆದರೆ ತನ್ನ ದೃಷ್ಟಿಯಲ್ಲಿ? “ಏಳೋಲ್ವೆನೇ? ಲೇ ವಿಜಿ...” ಪ್ರೀತಿಯ ಅಕ್ಕನ ಸ್ವರ, ಇವತ್ತು ಮತ್ತು ನಾಳೆ, ಹೆಚ್ಚೆಂದರೆ ಮತ್ತೊಂದು ದಿವಸ, ಬಳಿಕ, ಅಕ್ಕನ ಈ ಕರೆ ಕೇಳಿಸದಂತಹ ದೂರದೂರಿಗೆ ತಾನು ಹೋಗಬೇಕು, “ಏಳೇ ವಿಜಯಾ, ಏನಮ್ಮ ಇದು-ಥ!" ಆ ಇದು ನಾಲ್ಕನೆಯ ಸಾರೆ. ಇನ್ನು ಪಾದಗಳು ನಡೆದು ತನ್ನೆಡೆಗೆ ಬರುವುವು. ಅಕ್ಕ ಮಂಡಿಯೂರುವಳು. ಆಕೆಯ ಕೈ ತನ್ನದನ್ನೆತ್ತುವುದು. ಆಕೆಯ ಕೈ ತನ್ನದನ್ನೆತ್ತುವುದು, ಆ ಕಣ್ಣುಗಳು ನಗು ವುವು. ಹಾಗೆ ಮುಕ್ತಾಯವಾಗುವುದು ನಿದ್ದೆಯ ನಟನೆ.... “ಥ ಕಳ್ಳಿ!” ವಿಜಯಾ ನಕ್ಕಳು. ನಕ್ಕು, ಅಕ್ಕನ ಮುಖವನ್ನೇ ನೋಡಿದಳು. ನೋಡುತ್ತ ಲಿದ್ದಂತೆ ನಗೆ ಮಾಯವಾಯಿತು. ತಂಗಿಯ ಮುಖಭಾವ ಬದಲಾದುದನ್ನು ಗಮನಿಸಿದ ಸುನಂದಾ ಅಂದಳು; “ನಗು ನಗ್ತಾ ಏಳು ವಿಜೀ, ರೈಲು ಬರೋ ಹೊತ್ತಾಯ್ತು. ಅಪ್ಪ ಆಗಲೇ ಸ್ಟೇಷನ್ನಿಗೆ ಹೋದ. ಏಳಮ್ಮ, 99 ವಿಜಯಾ ಅಕ್ಕನ ಅಂಗೈಗಳನ್ನು ಮುಟ್ಟಿ ನೋಡಿದಳು, ಹೃದಯದೊಳಗಿನ ಸಂಕಟವನ್ನೆಲ್ಲ ಅದುಮಿ ಹಿಡಿದು ನಗೆಯ ಮುಖವಾಡ ಧರಿಸಿದ್ದಳು ತನ್ನ ಅಕ್ಕ. ಆ ನೋವಿನ ಆಳ ಎಷ್ಟೆಂಬುದು ತನಗೆ ತಿಳಿಯದೆ? ಒಡಹುಟ್ಟಿದವಳಾದ ತನಗೆ ತಿಳಿಯದೆ? “ಅಕ್ಕಾ!” “ಏನು ವಿಷಯಾ?'