ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಕೊನೆಗಳಿಗೆ 98 ಸತಿ ಗರತಿ. ಮೈಯಲ್ಲಿ ಒಲವು ಚೆಲುವಿನ ಮಿಲನವಿಲ್ಲ. ಅದೊ ಮನೆಯ ಮುಂದಿನ ದಾರಿ ಮೈ ಮುರಿವ ಮೂಲೆಯೊಳು ಕಾದಿರುವಳು ರತಿ ನಿನಗೆಂದೆ ಮೈಮರೆಯಿಸುವ ಸುರತದಾನಂದ ಕೊಡುವ ಲಾವಣ್ಯವತಿ. ಸುಂದರವು ಮಂದಗತಿ. ಕಾಮಭಾರಕೆ ಬಳ್ಳಿ ಮೈ ಮಣಿಯದೇ, ದಣಿಯದೇ? ಬಯಕೆ ಕಾವಿಗೆ ಸಿಕ್ಕ ಹೆಣ್ಣು ಮೆತ್ತೆ ಇನ್ನೇನು ಮತ್ತೆ.......? ಕನಸೆ ಇಳೆಗಿಳಿದು ಬಂದರು ನಿನಗೆ ತೂಗು ಮನಸೆ? 'ರಮಿಸು ಬಾ, ವಿಶ್ರಮಿಸು ಬಾ ಇರವ ಮರೆಯುವೆಯಂತೆ ತೊರೆ ತಿರೆಯ ಚಿಂತೆ! ಗಂಡಿಂಗೆ ಹೆಣ್ಣಾಗಿ ಕಾಡಿತ್ತು ಮಾಯೆ. ಮುಗಿಲ ಮಾರ್ದವವಿತ್ತು ಮುತ್ತಂಥ ಮಾತಿನೊಳು: 'ಹೆಣ್ಣಿನಾಲಿಂಗನದಿ ಮೈಮರೆತುದಿಲ್ಲವೆ?' “ಎಷ್ಟು ಎತ್ತರ ನೆಗೆದರೇನು ಬುಗ್ಗೆ ಮತ್ತೆ ಕೆಡೆಯುವುದು ನೆಲದೊಲವು ಜಗ್ಗೆ ಅರೆಘಳಿಗೆ ತಿರೆ ಮರೆತು ರಮಿಸಿದನುಭವವುಂಟು.' 'ಚಪ್ಪಾಳೆಯಪ್ಪಳಿಸಿದೆರಡು ಕೈಗಳ ಕೂಟ ಆ ಬೇಟ ಎರಡು ಮೈಗಳ ಘಳಿಗೆಯಾಮೋದದಾಟ! ಗಲ್ಫ್ಮು ನೆತ್ತರನು ಹೊತ್ತ ಮೈ ಮೆತ್ತೆಯೋಳು ಅಂತರವಿರದಾನಂದದೂಟ!; 'ಹಸುರಿನುಡುಗೊರೆಯನ್ನು ತಿರೆಗೆ ಕರೆತರುತಿತ್ತು, ಬಂಜೆಯಪ್ಪುಗೆ ನಿನದು, ಒಲ್ಲೆ