ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೪ ಏಳು ಸುತ್ತಿನ ಕೋಟೆ ಎಚ್ಚರಿಕೆ ಇರದಾಗ ಹುಚ್ಚು ಮನಸನು ಮೋಹ ದೂರವಿರು ಕದಿವ ರೀತಿಯ ಬಲ್ಲೆ. ಬಳಿಗೆ ನೀ ಬಾರದಿರು! 2 ಕರುಳು ಕೊಯ್ಯುವ ನರಳು ಎದೆಯೊಡೆದು ಬಂತು. ಮುಗುಳ ನಕ್ಕಳು ಬಾಲೆ ರೋಗಿ ಮಗ್ಗುಲನಾಂತು ಹಣೆಯ ಮೇಲಣ ಕುರುಳ ಕುಶಲ ಕೇಳಿತು ಅಂಗನೆಯ ಬೆರಳು. ತುಟಿ ತುಟಿಯ ಸಂಧಿಸಿತು; ತೋಳವನ ಬಂಧಿಸಿತು! ಒಲ್ಲದಾಲಿಂಗನಕೆ ಸೆಟಗೊಂಡ ಗಂಡು ಮೈ ಮಿಲುಗಾಡತೊಡಗಿತ್ತು ಸುಟ್ಟ ಇಟ್ಟಿಗೆ ಮೇಲೆ ಇಟ್ಟ ನಾಗರದಂತೆ! ತುಟಿ ತುಟಿಯ ಬಿಡಲಿಲ್ಲ........ ಜೀವ ತಂತುವು ಕತ್ತರಿಯ ಕಂಡ ದಾರದೊಲು ಎರಡಾಗಲಿಲ್ಲ. ನರನರವು ನುಡಿದವನ ನರಳುದನಿಯಳೆಯಂತೆ, ಶಾಮಿಗೆಯ ನೂಲಂತೆ, ಉರಿವ ಸಿಗರೇಟ ತೆಳು ನೀಲಿ ಹೊಗೆಯಂತೆ, ಎಳೆವರೆಯದಾದರ್ಶದಾಕಾಂಕ್ಷೆಯಂತೆ, ತೆಳುವಾಗಿ ಕೊನೆಗೊಮ್ಮೆ ಶೂನ್ಯದೊಳು ಕರಗಿತು. ಬೀದಿ ಮಗ್ಗುಲ ಕಲ್ಲು ಮಡುವಿನಾಳದ ನೆಮ್ಮದಿಯೊಳೊರಗಿತು........