ಈ ಪುಟವನ್ನು ಪ್ರಕಟಿಸಲಾಗಿದೆ

ವಿಜ್ಞಾನದ ವಿಷ

೧೦೩

ನೋಡುತ್ತಿರುವಂತೆ ಅವಳಲ್ಲಿ ಮಾತೃಭಾವನೆ ಜ್ವಾಲಾಮುಖಿಯಂತೆ ಸ್ಫೋಟವಾಯಿತು. ರಾಜ ಸಭಾಭವನವನ್ನು ಸೇರಿದರ, ಮುದುಕಿ ಸುಬ್ಬಮ್ಮ ನಿಂತಲ್ಲಿಯೇ ನಿಂತು ಕಣ್ಣು ಮುಚ್ಚಿಕೊಂಡಳು. ಅವಳಿಗೆ ತನ್ನ ದುಃಖ ಎಲ್ಲಿಯೋ ಮಾಯವಾದಂತೆ ಭಾಸವಾಯಿತು. ದು:ಖದ ಎಡೆಯಲ್ಲಿ ಮೇರೆ ಮೀರಿದ ಆನಂದ, ಸಂತೋಷ ನಲಿಯತೊಡಗಿತು. ಮುಟ್ಟಿದಂತೆಯೇ ಅವಳ ಮನಸ್ಸು ಅವಳನ್ನು ಭೂತ ಕಾಲಕ್ಕೆ ಸೆಳೆದೊಯ್ದಿತು. ಸುಬ್ಬಮ್ಮ ತನ್ನ ಹಿಂದಿನ ದಿನಗಳನ್ನು ಜ್ಞಾಪಿಸಿ ವಿಚಾರಿಸತೊಡಗಿತು.

--ಆ ಹಳ್ಳಿಯಲ್ಲಿ ಒಬ್ಬ ಸಾಲೆಯ ಮಾಸ್ತರರ ಮನೆಯ ಬದಿಯಲ್ಲಿಯೇ ತಾನು ತನ್ನ ಗಂಡನೊಂದಿಗೆ ಇದ್ದಳು. ತನ್ನ ಗಂಡ ಕುಲಕರ್ಣಿಕೆಯನ್ನು ಕಳೆದುಕೊಂಡ ಕುಲಕರ್ಣಿಯಾಗಿದ್ದ. ಮಂದಿಯ ಹೊಲ ಲಾವಣಿ ಹಿಡಿದು ಮಾಡಿ ದುಡಿದು ಮನೆಯನ್ನು ನಡೆಯಿಸಿದ್ದ. ಹೀಗಾಗಿ ತಾನೂ ಬಡವಿ, ಮಾಸ್ತರರೂ ಹೇಳಿಕೊಳ್ಳುವಷ್ಟು ಸಿರಿವಂತರಲ್ಲ. ಮುಂದೆ ಆ ಮಾಸ್ತರರ ಹೆಂಡತಿಯ ಪ್ರಸೂತಿಯ ದಿನ--ಅಯ್ಯೋ, ಅದು ಅವರ ಜೀವನದಲ್ಲಿ ಬಂದ ಬಿರುಗಾಳಿ--ದೊಡ್ಡ--ಸೂಲಗಿತ್ತಿಯ ಕೆಲಸಕ್ಕೆ ತಾನೇ ನಿಂತುಕೊಂಡಿದ್ದಳು. ಆದರೆ ದುರ್ದೈವ! ಮಾಸ್ತರರ ಹೆಂಡತಿ ಸುಸೂತ್ರಳಾಗಿ ಹಡೆದಳೇನೋ ನಿಜ; ಆದರೆ ಹಡೆದ ಬೇನೆಯಿಂದ ಮೂರನೆಯ ದಿನವೇ ಮರಣಹೊಂದಿದಳು. ಅವಳಿಗಿಂತಲೂ ಒಂದು ವರುಷ ಮೊದಲು ತನ್ನ ಹೆರಿಗೆಯಾಗಿತ್ತು. ತಾನೂ ಗಂಡುಮಗನನ್ನು ಹಡೆದಿದ್ದಳು. ಆ ಮಗುವಿಗೆ ಅದೇ ವರುಷ ತುಂಬುತ್ತಿತ್ತು. ಅಂತಹ ಆಪತ್ಕಾಲದಲ್ಲಿಯೂ ತಾನು ತನ್ನ ಮಗುವನ್ನು ಬದಿಗಿರಿಸಿ ಮಾಸ್ತರನ ಮಗನಿಗೆ ತನ್ನ ಎದೆಹಾಲನ್ನು ಕುಡಿಸಿದಳು.

ತನ್ನ ಹಾಲಿನಿಂದಲೇ ಆ ಮಗು ದೊಡ್ಡದಾಯಿತು. ಮುಂದೆ ಆ ಮಗು ೧೭ ವರುಷದವನಾಗುವ ವರೆಗೂ ತಾನೇ ತಾಯಿಯಾಗಿದ್ದಳು. ಮುಂದೆ ಮಾಸ್ತರರಿಗೆ ಯಾವುದೋ ಲಾಟ್ರಿಯಲ್ಲಿ ಅಪಾರ ಹಣ ದೊರಕಿತು. ಅವರು ಹಳ್ಳಿ ಬಿಟ್ಟು ಮಗನ ಮುಂದಿನ ಶಿಕ್ಷಣಕ್ಕಾಗಿ ಮುಂಬಯಿಗೆ ಹೋದರು. ಅಂದೇ ಅವರ ತಮ್ಮ ಪರಿಚಯ ಮರೆತುಹೋಯಿತು. ಜೀವನವೂ ಒಂದು ಪ್ರವಾಹ, ಬಿರುಗಾಳಿ ಬಿಟ್ಟಾಗ ದೋಣಿಗಳು ಒಂದೆಡೆಯಲ್ಲಿ ಸೇರಿ ಒಬ್ಬರೊಬ್ಬರ ಸಹಾಯ ಬಯಸುತ್ತವೆ, ಮತ್ತೆ ಬಿರುಗಾಳಿ ನಿಂತಿತೆಂದರೆ, ಅವು ತಮ್ಮ ತಮ್ಮ