ಈ ಪುಟವನ್ನು ಪ್ರಕಟಿಸಲಾಗಿದೆ

೫೪

ಸಾಲ ಪರಿಹಾರ

"ಮುಖ್ಯ ಮಾರಮ್ಮನ ಕೃಪೆ ಬೇಕಲ್ಲಮ್ಮ ?"
"ಮಾರೆಮ್ಮನಿಗೆ ನೀವು ಹರಿಕೆ ಹೊರಬೇಕು."

“ಮನೆಯಲ್ಲಿ ಮಾರೆಮ್ಮನಿಗೆ ಕುರಿ ಕೋಳಿ ಹರಿಕೆ ಹೊರೋವರು ಇರತಾ ನಮ್ಮದೇನು ಮಹಾ ಹರಿಕೆ, ಫಲ ಪುಷ್ಪದ್ದು.”

ಈ ಮಾತು ಕೇಳಿ ಭಾಗೀರತಿಯ ಎದೆ ನಡುಗಿತು. ಮಾತನ್ನು ಮುಗಿಸುವದಕ್ಕಿಂತಲೂ ಮುಖವನ್ನೇ ಮರೆ ಮಾಡಬೇಕೆನ್ನಿಸಿತು ಅವಳಿಗೆ, ಮಾತಿನ ಮುಖ್ಯ ವಿಷಯ ಬದಲಿಸಿ ಭಾಗೀರತಿ “ಅಯ್ಯೋ, ಅವರು ಕೋಣೆಗೆ ಹೋಗಿಬಿಟ್ಟಿದ್ದಾರೆ. ಅವರಿಗೆ ಹಾಸಿಗೆ ಹಾಸಿ ಕೊಡೋದಿತ್ತಲ್ಲಾ” ಎನ್ನುತ್ತಲೇ ಭಾಗೀರತಿ ರಾಮರಾಯರ ಕೋಣೆ ಸೇರಿದಳು.

ಕೆಲ ನಿಮಿಷದಲ್ಲಿಯೇ ಬಾಗಿಲ ಒಳ ಚಿಲಕ ಹಾಕಿದ ಸಪ್ಪಳ ವೇಣಕ್ಕೆನಿಗೆ ಕೇಳಿಸಿತು. ಒಂದು ದೀರ್ಘ ಉಸಿರು ಬಿಟ್ಟು ಮೂಲೆಯಲ್ಲಿಯೇ ವೇಣಕ್ಕೆ ಅಡ್ಡಾದರು.



ರಾಮರಾಯರು ಸಿರಿವಂತ ತಂದೆ ತಾಯಿಯ ಹೊಟ್ಟೆಯಲ್ಲಿ ಜನಿಸಿರಲಿಲ್ಲ. ಅವರ ಕುಶಾಗ್ರ ಬುದ್ಧಿ ಅವರ ಮೈಯಿಂದ ಬೆವರು ಇಳಿಸದೇ ಭಾಗ್ಯಶ್ರೀಯನ್ನು ಒಲಿಸಿಕೊಂಡಿತ್ತು. ಶಿರ್ಶಿಯ ಹತ್ತಿರದ ಒಂದು ಸಣ್ಣ ಹಳ್ಳಿಯಲ್ಲಿಯ ಶಾನುಭೋಗಿಕೆಯೇ ಅವರ ಆನುವಂಶಿಕ ಆಸ್ತಿ, ಆ ಆಸ್ತಿಯನ್ನು ದ್ವಿಗುಣಿಸಿ ವರ್ಗಿಕರಿಸಿದ ಶ್ರೇಯವೆಲ್ಲ ರಾಮರಾಯರದು. ಅವರ ಕೈ ಮೇಲಿನ ಧನದ ಗೆರೆಯೇ ಹಾಗಿತ್ತೇನೋ? ಸಾಲೆಯಲ್ಲಿ ಸಂಪಾದಿಸಿದ ವಿದ್ಯೆ ಅಷ್ಟಕ್ಕಷ್ಟೆಯಾಗಿದ್ದರೂ ಕೈಚಳಕೆದ ಬುದ್ಧಿ ಅಪಾರವಾಗಿತ್ತು.

ಈ ರೀತಿಯಾಗಿ ಬೆಳೆಯುತ್ತಿರುವ ಅವರ ಸಂಪತ್ತು ಅವರ ಮೂಲದ ಮನಸ್ಸಿನಲ್ಲಿ ಮಾರ್ಪಾಟು ಮಾಡುತ್ತಿತ್ತು. ಚಿನಿವಾಲ ತನ್ನ ತಂಗಿಯ ಚಿನ್ನವನ್ನೂ ಕದಿಯುವದರಲ್ಲಿ ಹಿಂದೆ ಮುಂದೆ ನೋಡಲಾರ ಎಂಬ ನಾಣ್ಣುಡಿ ಇದ್ದಂತೆ, ಬರುವ ರೊಕ್ಕದಲ್ಲಿ, ಇವರು ತನ್ನವರು, ಇವರು ಬಳಗದವರು, ಎಂಬ ಭೇದ ಭಾವವನ್ನು ರಾಮರಾಯರು ಇಡುತ್ತಿರಲಿಲ್ಲ. ಈ ಒಂದು