ಈ ಪುಟವನ್ನು ಪ್ರಕಟಿಸಲಾಗಿದೆ

೬೨

ಸಾಲ ಪರಿಹಾರ


“ಬಿಡಿ, ರಾಯರೇss ಕೈಗೆ ಹಗ್ಗ ಕಟ್ಟಬೇಡಿ, ನಾನು ಸಾಲ ಮುಟ್ಟಿಸುತ್ತೇನೆ” ಎಂದು ಸೋಮ ನಿದ್ದೆಗಣ್ಣಿನಲ್ಲಿಯೇ ಕೂಗಿಕೊಂಡ.

ಅದನ್ನು ಕೇಳಿದ ಚಿನ್ನಿಯ ಕಣ್ಣುಗಳಲ್ಲಿ ನೀರು ಧಾರಾಕಾರವಾಗಿ ಹರಿಯತೊಡಗಿತು. ಗಲ್ಲದ ಮೇಲೆ ಬಿದ್ದ ಕಣ್ಣೀರನ್ನು ಒರೆಸಿಕೊಳ್ಳದೇ ಚಿನ್ನಿ--

"ಅಪ್ಪಾ, ನಾನು ರಾಯರಲ್ಲ, ಚಿನ್ನಿ ನಿನ್ನ ಮಗಳು " ಎಂದು ಹೇಳಿದಳು.

"ಏನು ಚಿನ್ನಿsನಾ, ಇದ್ದೀಯಾ. ನಾನೇನೂ ತಿಳಿದಿದ್ದೆ ಸತ್ತೆ ಎಂದು, ಆ೦” ಎಂದು ಗಹಗಹಿಸಿ ನಕ್ಕ. ಚಿನ್ನಿ ಬಿಚ್ಚಿದಳು. ಅಪ್ಪನಿಗೆ ಎಲ್ಲಿ ಹುಚ್ಚು ಹಿಡಿಯಿತೋ ಎಂದಂಜಿದಳು. ಇದ್ದುದರಲ್ಲಿಯೇ ಧೈರ್‍ಯ ತಂದುಕೊಂಡು--

"ಅಪ್ಪಾ, ಒಂದು ಭಾಳ ಸಂತೋಷದ ಸುದ್ದಿ. ರಾಯರು ಅರ್ಧ ಸಾಲಾ ಸೂಟ ಬಿಡ್ತೇನೆ ಅಂತ ಹೇಳಿದರು" ಎಂದು ಸುಳ್ಳು ಹೇಳಿದಳು.

ಸಾಗರದ ಕಾಡು ಮರಳಿನಲ್ಲಿ ನಡೆಯುವವನಿಗೆ ನೀರು ಚಿಮುಕಿಸಿದಂತಾಗಿತ್ತು. ಸೋಮನ ಮುಖದ ಮೇಲಿನ ಹುಚ್ಚು ಕಳೆ ಮಾಯವಾಗತೊಡಗಿತು.

"ರಾಯರದು ದೊಡ್ಡ ಗುಣ. ದೇವರು ರಾಯರನ್ನು ಕಾಪಾಡಲಿ" ಎಂದು ಹೇಳಿ ಮತ್ತೆ ಹಾಸಿಗೆಯಲ್ಲಿ ಒರಗಿದ.

ಚಿನ್ನಿ ನಿಶ್ಚಿಂತೆಯ ದೀರ್ಘ ಶ್ವಾಸವನ್ನು ಬಿಟ್ಟಳು. ಏನೋ ಸುಳ್ಳು ಹೇಳಿ ಆ ವಿಷನಿಮಿಷವನ್ನು ದೂಡಿದ್ದಳು. ಆದರೆ ಮುಂದೆ? ಎಂಬ ಪ್ರಶ್ನೆ ಅವಳ ಎದುರಿನಲ್ಲಿ ಭೂತಾಕಾರವಾಗಿ ನಿಂತಿತು. ತನ್ನ ಅಪ್ಪನೇ ತನಗೆ ಸರ್ವಸ್ವ. ಅದೇ ತನ್ನ ಪಂಚಪ್ರಾಣ, ಅದನ್ನೇ ಕಳೆದುಕೊಂಡರೆ..?‍

ಇಲ್ಲ. ಏನನ್ನಾದರೂ ಮಾಡಿ ಅಪ್ಪನನ್ನು ಉಳಿಸಿಕೊಳ್ಳಬೇಕು ಎಂದು ಮನದಲ್ಲಿ ನಿರ್ಧರಿಸಿ ಹೊರಬಂದಳು. ತೊಟ್ಟಿಯಲ್ಲಿ ಕಟ್ಟಿದ ಎಮ್ಮೆ ಒಂದು ಸಲ ಒದರಿತು. ಪಾಪ, ಕೆಲಸದ ಗಡಿಬಿಡಿಯಲ್ಲಿ ಅದಕ್ಕೆ ನೀರು ಕುಡಿಸುವದಕ್ಕೆ ಮರೆತಿದ್ದಳು. ಚಿನ್ನಿ ಒಮ್ಮೆಲೆ ಬಾದ್ಲಿಯನ್ನು ತೆಗೆದುಕೊಂಡು ಅಂಗಳಕ್ಕೆ ಡೋಣಿಯಲ್ಲಿಯ ನೀರು ತೆಗೆದುಕೊಳ್ಳುವದಕ್ಕೆ ಬಂದಳು. ಸೂರ್ಯ ಕಿರಣಗಳು ಡೋಣಿಯ ನೀರಲ್ಲಿ ಬಿದ್ದುದರಿಂದ ನೀರು ಪಾರದರ್ಶಕ ಕನ್ನಡಿ