ಈ ಪುಟವನ್ನು ಪ್ರಕಟಿಸಲಾಗಿದೆ

ಸಾಲ ಪರಿಹಾರ

೬೩

ಯಂತೆ ಕಂಗೊಳಿಸುತ್ತಿತ್ತು. ಚಿನ್ನಿ ನೀರಿಗಾಗಿ ಬಗ್ಗಿದಾಗ ಅಲ್ಲಿ ಅವಳ ಪ್ರತಿಬಿಂಬ ನಿಚ್ಚಳವಾಗಿ ಕಾಣಿಸತೊಡಗಿತು. ಆರೆನಿಮಿಷ ಹಾಗೆಯೇ ಬಗ್ಗಿ ನಿಂತಳು. ಮೈ ಕೈ ತುಂಬಿಕೊಂಡ ದೇಹ, ಬಗ್ಗಿದಾಗ ಮೇಲಿನ ಸೆರಗು ಜಾರಿ ಹೋಗಿತ್ತು. ಭರದಿಂದ ಉಬ್ಬಿದ ಎದೆ. ಪುಟ ಚೆಂಡುಗಳನ್ನು ಬಿಗಿಯಾಗಿ ಕಟ್ಟಿದಂತೆ ಭಾಸವಾಗುತ್ತಿತ್ತು. ಆ ಚಿತ್ರವನ್ನು ನೋಡುತ್ತಿರುವಂತೆ ಚಿನ್ನಿಗೆ ಅಪ್ಪನ ಸ್ಥಿತಿ ನೆನಪಾಯ್ತು. ಅವನ ಸಾಲ,....ಜ್ವರ....ಹುಚ್ಚು.

ನೀರಲ್ಲಿಯ ಆ ಯೌವನ ಮೂರ್ತಿ, ಎದೆ ಮುಂದೆ ಮಾಡಿ ಮಾದಕನಗೆ ನಕ್ಕಂತೆ ಭಾಸವಾಯಿತು. ಎಮ್ಮೆ ಮತ್ತೊಂದು ಸಲ ಕೂಗಿಕೊಂಡದ್ದರಿಂದ, ಚಿನ್ನಿಯ ಸಮಾಧಿ ಭಂಗವಾಯಿತು. ಬಾದ್ಲಿಯನ್ನು ನೀರಲ್ಲಿ ಮುಣುಗಿಸಿದಳು. ನೀರು ಅಲ್ಲೋಲ ಕಲ್ಲೋಲವಾಯಿತು. ಸೂರ್ಯನ ಪರಿವರ್ತನ ಕಿರಣವೊಂದು ಅವಳ ಕಣ್ಣನ್ನು ಕುಕ್ಕಿಸಿತು. ಆ ಕಿರಣವೇ ಕತ್ತಲಲ್ಲಿ ಅವಳಿಗೆ ಆಶಾಕಿರಣವಾಗಿ ಗೋಚರಿಸಿತು. ನೀರಲ್ಲಿ ಹಾಗೇ ನೋಡುತ್ತಿರುನಂತೆ ಅವಳಿಗೆ ಅಲ್ಲಿ ಮತ್ತೊಂದು ಪ್ರತಿಬಿಂಬ ಕಾಣಿಸಿತು. ಚಿನ್ನಿ ಬೆಚ್ಚಿ ಹಿಂತುರಿಗಿ ನೋಡಿದಳು. ಮತ್ತಾರೂ ಇರಲಿಲ್ಲ ರಾಯರು ಕೈಯಲ್ಲಿ ಕಿರ್ದೀ ಬುಕ್ಕನ್ನು ಹಿಡಿದುಕೊಂಡು ಕಾಮಯುಕ್ತ ನಗೆಯನ್ನು ಬೀರುತ್ತಿದ್ದರು. ಮೊದಲು ಚಿನ್ನಿ ಅಂಜಿದಳು. ಆದರೂ ಮುಂದೆ ಚಿನ್ನಿ ಮಾದಕ ನಗೆಯನ್ನು ಬೀರಿದಳು. ರಾಯರು––

"ಸಾಲದ ಹಣ ಕೇಳಲು ಬಂದಿದ್ದೆ.”
"ರೂಪಾಯಿಗಳೇ ಬೇಕೇ?"
"ಮತ್ತೇನು?"
"ಅದರ ಬದಲು......."
"ಬಂಗಾರ, ಬೆಳ್ಳಿ, ಚಿನ್ನ ಏನಾದರೂ ಇದೆಯೇ?”
"ಅದರ ಬದಲು ಚಿನ್ನ."
"ಸರಿ, ಆಗಬಹುದು?"
"ಒಳಗೆ ಬನ್ನಿ"

ಚಿನ್ನಿ ರಾಯರನ್ನು ಕರೆದುಕೊಂಡು ತನ್ನ ತಂದೆ ಮಲಗಿದ್ದ ಪಡಸಾಲೆಯಿಂದಲೇ ಒಳಕೋಣೆಗೆ ಕರೆದುಕೊಂಡು ಹೋದಳು. ಸೋಮ ಅರ್ಧ ನಿದ್ದೆ