ಈ ಪುಟವನ್ನು ಪ್ರಕಟಿಸಲಾಗಿದೆ

86

ನಿರಂಜನ: ಕೆಲವು ಸಣ್ಣ ಕಥೆಗಳು

“ಸರಿ, ಹತ್ತು ಕುದುರೇನ. ನಂಜಪ್ಪನ ಜತೆ ಕತ್ತಿ ವರಸೆ ಆಗಲಿ....”

ಖಾನರು, “ಸಾಕು ನಿಲ್ಸಿ!"–ಎನ್ನದಿದ್ದರೆ ಆ ನಂಜಪ್ಪ ಸತ್ತುಹೋಗುತ್ತಿದ್ದ.

(ಸತ್ತಿದ್ದರೆ ಚೆನ್ನಾಗಿತ್ತು. ಮುಂದೆ ಆಜನ್ಮ ತನ್ನ ಶತ್ರುವಾದ.)
ಮೈಸೂರು ದಂಡನ್ನು ತಾನು ಸೇರಿದೆ.
-“ಭೇಷ್ ಧೊಂಡಿಯಾ!”
-“ಭಪ್ಪರೆ ಧೊಂಡಿಯಾ!”
ಎಷ್ಟು ಸಾರೆ ಹೊಗಳಿದರು ಖಾನರು...
“ತಾನು ಸರದಾರನಾಗಬೇಕಿತ್ತು.”
ಆದರೆ ಖಾನರು ಸತ್ತರು.
.. ತನಗೆ ಸಾವು? ಬಾಯಿ ಆರಿ ಆರಿ ಸಾವು?

ఆ... ನಾವು ಸಿದ್ಧರಾಗುವುದಕ್ಕೆ ಮುಂಚೆಯೇ ಅವರು ನಮ್ಮ ಮೇಲೆ ಬಿದ್ದರು. ಯಾರ ನಡುವಿನಲ್ಲವೂ ನೀರಿನ ಚೀಲವಿಲ್ಲ... ಹಾ... ಆ...

****

ನೀರು, ನೀರೂ ನೀರೂ...

ಟಿಪ್ಪು ಸುಲ್ತಾನನಿಗೆ ತಾನು ವಿಧೇಯನಾಗಿಯೇ ಇದ್ದೆ. ಆದರೆ ಆ ನಂಜಪ್ಪ ತನ್ನ ದಾರಿಯ ಮುಳ್ಳಾದ.

ಕಾರ್ನ್‍ವಾಲಿಸ್ ‍ ಶ್ರೀರಂಗಪಟ್ಟಣವನ್ನು ಮುತ್ತಿ, ಮೈಸೂರು ಸೈನ್ಯಕ್ಕೆ ಸೋಲಾದಾಗ, ತಾನು ಹೊರಬಿದ್ದು ಧಾರವಾಡದತ್ತ ಹೋದೆ.

ದಾರಿಯಲ್ಲಿ...

ಗಾಯಗೊಂಡು ಯಾತನೆ ಅನುಭವಿಸುತ್ತಿರುವಾಗಲೂ ಆಕೆಯ ನೆನಪಾಗುತ್ತಿದೆಯಲಾ?

ಹೊಲದಲ್ಲಿ ದುಡಿಯುವ ಹೆಣ್ಣು ತನಗೆ ಎಷ್ಟೊಂದು ಕೊಟ್ಟಳು! ಆಶ್ರಯ, ಆತಿಥ್ಯ....ಏನು ಜೀವ, ಏನು ಕಸುವು ಆ ಮೋಹಕ ದೇಹದಲ್ಲಿ! ತನಗೆ ನೀಡಿದಳು, ತನ್ನಿಂದ ಪಡೆದಳು...

“ಹ್ವಾದಿ ಅಂದರ ಮತ್ತ ಬರತೀಯೆಲ್ಲಿ ರಾಜ?”
"ಬರತೀನಿ ಬಸವಿ.”
“ರಾಜ್ಯ ಕಟ್ಟಾಂವ ಹೆಣ್ಣಿಗೆ ಮರುಳಾಗಬಾರದು.”
“ನೀನೇ ರಾಜ್ಯಲಕ್ಷ್ಮಿ"
“ಲಕ್ಸುಮಿಯೋ ಪಾರೋತಿಯೋ, ಅದಕ ಅಂತೀನೀ, ಇಲ್ಲಿ ಇರೋ