ಈ ಪುಟವನ್ನು ಪ್ರಕಟಿಸಲಾಗಿದೆ
ಹರಕೆಯ ಖಡ್ಗ
87
ಗಂಟ ಉಣ್ಣು, ನೀಡತೀನಿ, ಹಸಿವು ಇ೦ಗೋ ಮಟ ಉಣ್ಣು.”
“ನನ್ನ ಹಸಿವು ಹಿಂಗಬೇಕಾದರೆ ಫರಂಗಿಯೋರನ್ನ ಈ ದೇಶದಿಂದ ಓಡಿಸಬೇಕು, ಬಸವಿ.”
- “ಸಾವಿರ ಕುದುರೆ ಸರದಾರ, ಓಡಿಸೀಯಂತೆ.”
- “ಬಾ. . . .”
- “ಬಂದ್ನಿ ರಾಜ...”
- ಹಸಿವು, ನೀರಡಿಕೆ...
- ಆಹಾರವಲ್ಲ. ಒಂದು ಗುಟುಕು ನೀರು...
****
- ನೀರು, ನೀರೂ ನೀರೂ....
- ಬಾ ಅಂದರು.
ಸುಲ್ತಾನರು ಸೈನ್ಯದಲ್ಲಿ ಭಡತಿ ಕೊಡುತಾರೆ, ದಳಪತಿ ಮಾಡುತಾರೆ.... ನಿನ್ನ ಮೇಲೆ ಸುತರಾಂ ಸಿಟ್ಟಿಲ್ಲ.
- ತಾನು ಬಂದೆ. ಬರಬಾರದಾಗಿತ್ತು, ಬಂದೆ.
- ಒಮ್ಮೆ ಪಟ್ಟಣ ಸೇರಿದ ಮೇಲೆ ಕಿವಿಗೆ ಬಿದ್ದ ರಾಗ ಬೇರೆಯೇ.
ಒಂಟಿ ಸಲಗನಾಗಬೇಡ-ಎಂದರು ಗೆಳೆಯರು. ಚನ್ನಗಿರಿಯಿಂದ ಹೆಣ್ಣು ತಂದು ಮದುವೆಯಾಯಿತು.
- ದೂರು. ಚಾಡಿ. ಯಾರದೋ ಮಸಲತ್ತು,
ಗಂಡು ಮಗುವಿಗೆ ತಂದೆಯಾದೆ ಎಂದು ಸಡಗರ, ಇಲ್ಲಿ ತನ್ನ ಬದುಕು ವ್ಯರ್ಥವಾಗುತ್ತಿದೆಯಲ್ಲ ಎಂಬ ದುಗುಡ.
- ಒಂದು ದಿನ...
ಹಿಡಿದು ಕೈಕಾಲುಗಳನ್ನು ಕಟ್ಟಿ ಕೆಡವಿದರು, ತಲೆ ಬೋಳಿಸಿದರು.
“ಧಾರವಾಡದಲ್ಲಿ ಆಳಬೇಕೂಂತಿದ್ದೆಯಾ? ಇದು ನಿನಗೆ ಶಿಕ್ಷೆ. ಇನ್ನು ನಿನ್ನ ಹೆಸರು ಗುಲಾಮ್.”
- “ನನ್ನ ಹೆಸರು ಧೋಂಡಿಯಾ!”
ದೇಹ ಜರ್ಜರಿತವಾಗುವಂತೆ ಹೊಡೆದರು. ಮೂರ್ಛೆ ಹೋದವನನ್ನು ಸೆರೆಮನೆಗೆ ಎಸೆದರು. ఆల్లి ಮುಖಕ್ಕೆ ನೀರೆರಚಿದರು.
- ನೀರೆರಚಿದರು.
- ನೀರು....
****