ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಿದ್ಯುಚ್ಚೋರನೆಂಬ ಋಷಿಯ ಕಥೆ ಮುಕ್ತರಾದ ದೊಡ್ಡವರ ಸಂಗತಿಗಳು ಆ ಎಲ್ಲ ಕಥೆಗಳಲ್ಲಿಯೂ ಬರುತ್ತವೆ. ಧರ್ಮ ಮತ್ತು ತಪಸ್ಸಿನ ವಿಷಯಗಳನ್ನು ಹೇಳುವ ಆ ಕಥೆಗಳಲ್ಲಿ ಜನರ ನಡವಳಿಕೆಗೆ ಸಂಬಂಧಪಟ್ಟ ಎಷ್ಟೋ ಸಂಗತಿಗಳು ಗೋತ್ತಾಗುತ್ತವೆ, ಎಲ್ಲ ಕಥೆಗಳೂ ಚೆನ್ನಾಗಿವೆ. "ವಡ್ಡಾರಾಧನೆ" ಎಂದರೆ "ವೃದ್ದಾರಾಧನೆ ದೊಡ್ಡವರ ಪೂಜೆ" ಎಂದರ್ಥ. ಕಠಿನವಾದ ತಪಸ್ಸಿನಲ್ಲಿ ತೊಡಗಿದ ಜೈನ ಸನ್ಯಾಸಿಗಳು ಈ ಕಥೆಗಳಲ್ಲಿ ಹೇಳಿರುವ ಹಿರಿಯರು ಎಂಥೆಂಥ ಕಷ್ಟಗಳನ್ನು ತಾಳಿಕೊಳ್ಳುತ್ತಿದ್ದರಂತೆ. ಹಿರಿಯರ ಒಳ್ಳೆಯ ಗುಣಗಳನ್ನು ನೆನೆದು ಅವರು ನಡೆದಂತೆ ನಡೆಯುವುದೇ ನಾವು ಅವರಿಗೆ ಮಾಡುವ ನಿಜವಾದ ಪೂಜೆ. ಅದಕ್ಕಾಗಿಯೇ ಈ ಪುಸ್ತಕಕ್ಕೆ "ನವ್ಡಾರಾಧನೆ" ಎಂದು ಹೆಸರಿಟ್ಟಂತೆ ತೋರುತ್ತದೆ.

  ನಮಗೆ ಇದುವರೆಗೆ ಸಿಕ್ಕಿರುವ ಕನ್ನಡ ಗ್ರಂಥಗಳಲ್ಲೆಲ್ಲ ಈ ವಡ್ಡಾರಾದನೆಯೇ ಬಹು ಹಳೆಯದು. ಇದು ಕ್ರಿ.ಶ ಣದು ಅಥವ ಆರನೆಯ ಶತಮಾನದಲ್ಲಿ ಬರೆದದ್ದಾಗಿರಬೇಕು.ಇನ್ನೂ ಹಿಂದಿನ ಕಾಲವಾಗಿದ್ದರೂ ಇರಬಹುದು.ಇದರ ಭಾಷೆ ಈಗ ನಾವು 'ಹಳೆಗನ್ನಡ' ಎನ್ನುತ್ತೇವಲ್ಲ ಅದಕ್ಕೂ ಹಳೆಯದು.ನಾಲ್ಕು ಐದನೆಯ ಶತಮಾನದ ಶಾಸನಗಳಲ್ಲಿ ಕೆಲವು ಕಡೆ ಇಂಥ ಭಾಷೆ ಕಂಡುಬರುತ್ತದೆ.ಇದನ್ನು 'ಪೂರ್ವದ ಹಲಗನ್ನಡ' ಎನ್ನಬಹುದು.
    ಇದನ್ನು ಬರೆದವರು 'ರೇವಾಕೋಟ್ಯಾಚಾರ್ಯ'ರೆಂಬ ಜೈನಗುರುಗಳು.