ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಭರತ-ಬಾಹುಬಲಿ ಇವುಗಳಲ್ಲಿ ಮೊದಲು ಯಾವ ಶುಭಕ್ಕಾಗಿ ಉತ್ಸವ ನಡೆಸಬೇಕೆಂದು ಸ್ವಲ್ಪ ಹೊತ್ತು ಯೋಚಿಸಿದನು. ' ಧರ್ಮ, ಅರ್ಥ, ಕಾಮ,--ಎಂಬ ಪುರು ಷಾರ್ಥಗಳಲ್ಲಿ ಧರ್ಮವೇ ಮುಖ್ಯ. ಧರ್ಮದ ಫಲ ಅರ್ಥ, ಕಾಮ ಆ ಫಲದ ರಸ. ಆದ್ದರಿಂದ ಅರ್ಹತ್ಪರಮೆಶ್ವರನ ಪೂಜೆಯೇ ಪ್ರಥಮ ಕರ್ತವ್ಯ ? ಎಂದು ನಿಶ್ಚಯಿಸಿದನು. ಬಳಿಕ ಅಂತಃಪುರ ಪರಿವಾರ ಸಮೇತನಾಗಿ ಸಮವ ಸರಣ ಮಂಟಪದೆಡೆಗೆ ಪ್ರಯಾಣ ಮಾಡಿದನು. ಧರ್ಮಾಮೃತ ವರ್ಷ ಸಮಸ್ತ ರಾಜಚಿಹ್ನೆಗಳನ್ನೂ ದೂರದಲ್ಲಿ ಬಿಟ್ಟು ಕಾಲ್ನಡಿಗೆಯಿಂದಲೆ ಅರ್ಹನ ಅಡಿದಾವರೆಗಳೆಡೆಗೆ ನಡೆದನು, ಮೂರು ಸಾರಿ ಪ್ರದಕ್ಷಿಣೆ ಮಾಡಿ ಭಗವಂತನ ಎದುರಿಗೆ ನಿಂತು ಕೈಮುಗಿದು ಭಕ್ತಿಯಿಂದ ಸ್ತೋತ್ರಮಾಡಿ * ಇಂದ್ರ ಪದವಿಯೇ ಮೊದಲಾದ್ದು ಯಾವುದೂ ಸ್ಥಿರವಲ್ಲ. ಅದೊಂದೂ ನನಗೆ ಬೇಡ, ಉತ್ತಮ ಜ್ಞಾನ ದೊರೆಯುವಂತೆ ಕರುಣಿಸು ' ಎಂದು ಪ್ರಾರ್ಥಿಸಿದನು. ಭರತನ ಪ್ರಾರ್ಥನೆಯನ್ನು ಸಾರ್ಥಕಪಡಿಸಲೋ ಎಂಬಂತೆ ಆದಿ ತೀರ್ಥಂಕರನು ದಿವ್ಯ ಧ್ವನಿಯಲ್ಲಿ ಧರ್ಮೋಪದೇಶ ಮಾಡತೊಡಗಿದನು. ಆ ಉಪದೇಶ ಸಭೆಯಲ್ಲಿದ್ದ ಸಮಸ್ತರಿಗೂ ಅವರವರ ಭಾಷೆಯಲ್ಲಿ ಅರ್ಥವಾಗು ತಿತ್ತು. ಲೋಕದ ಸ್ವರೂಸ, ತತ್ವನಿವೇಚನೆ, ಮುಕ್ತಿ ಸಾಧನೆಯ ವಿಧಾನ ಎಲ್ಲವೂ ಆ ಬೋಧನೆಯಿಂದ ಸ್ಪಷ್ಟವಾಯಿತು. ಅಲ್ಲಿ ನೆರೆದ ಎಷ್ಟೋ ಜನರು – ಅರಸುಗಳೂ ಸಾಧಾರಣರೂ, ಗಂಡ ಸರೂ, ಹೆಂಗಸರೂ-ಆ ದಿಜಿನನ ಸನ್ನಿಧಿಯಲ್ಲಿ ದೀಕ್ಷೆ ತೆಗೆದುಕೊಂಡರು. ಬ್ರಹ್ಮ ಸೌಂದರಿಯರು ವೈರಾಗ್ಯಕ್ಕೆ ಮನಸ್ಸು ಕೊಟ್ಟರು. ವಿವಾಹವನ್ನೊಲ್ಲದೆ ಗುರುಪ್ರಸಾದದಿಂದ ದೀಕ್ಷೇತಾಳಿ ಗಣಿನೀ ಗಣಕ್ಕೆ ಮುಖ್ಯೆಯರಾದರು. ಭರತ ಬಾಹುಬಲಿಗಳು ಭಗವಂತನನ್ನು ವಂದಿಸಿ ತಮ್ಮ ತಮ್ಮ ರಾಜಧಾನಿಗಳಿಗೆ ಹೋದರು. ಆದಿತೀರ್ಥಂಕರನು ಸಮವಸರಣ ಮಂಟಪದಲ್ಲಿ ನೆಲಸಿ ಶಕ, ಕಾಶ್ಮೀರ, ಆಂಧ್ರ, ಕರ್ನಾಟಕ, ಮಗಧ ಮೊದಲಾದ ದೇಶಗಳಲ್ಲಿ ಸಂಚರಿಸಿ ಅಲ್ಲೆಲ್ಲ