ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕನ್ನಡ ಸಾಹಿತ್ಯ ಚಿತ್ರಗಳು ಧರ್ಮಾಮೃತ ವರ್ಷವನ್ನೆರೆಡು ಲೋಕವನ್ನು ಧನ್ಯವಾಗಿ ಮಾಡಿದನು. ಕಡೆಗೆ ಕೈಲಾಸ ಪರ್ವತದಲ್ಲಿ ನೆಲಸಿದನು, ಭರತನ ದಿಗ್ವಿಜಯ ಪ್ರಯಾಣ ಸಮವಸರಣದಿಂದ ರಾಜಧಾನಿಗೆ ಹಿಂದಿರುಗಿದ ಭರತರಾಜನು ಆಯುಧಾಗಾರಕ್ಕೆ ಹೋಗಿ ಚಕ್ರಪೂಜೆಯನ್ನು ನೆರವೇರಿಸಿದನು. ಆ ಚಕ್ರ ರತ್ನದ ಜೊತೆಯಲ್ಲಿ ಇನ್ನೂ * ಹದಿಮೂರು ಇತರ ರತ್ನಗಳಿಗೂ ಪೂಜೆ ಮಾಡಿದನು. ಬಳಿಕ ಅರಮನೆಗೆ ಬಂದು ಸಿ” ಯ ಮಗನಿಗೆ ಜಾತಕರ್ಮೋ ತ್ಸವವನ್ನು ನೆರವೇರಿಸಿದನು. ಯಾರ ಆಯುಧಾಗಾರದಲ್ಲಿ ಚಕ್ರರತ್ನವು ವಿಸುವುದೋ ಆ ರಾಜನೇ ಚಕ್ರವರ್ತಿಯಾಗತಕ್ಕವನು. ಈ ಅವಸರ್ಪಿಣಿಯಲ್ಲಿ ಭರತನೇ ಆದಿಚಕ್ರ ವರ್ತಿ, ಲೋಕದ ದೊರೆಗಳನ್ನೆಲ್ಲ ಅಡಿಗೆರಗಿಸಿದಲ್ಲದೆ ಯಾರೂ ಚಕ್ರವರ್ತಿ ಯಾಗುವ ಹಾಗಿಲ್ಲ. ಆದ್ದರಿಂದ ಭರತನು ದಿಗ್ವಿಜಯಕ್ಕೆ ಸನ್ನಾಹಮಾಡ ತೊಡಗಿದನು. ಅಷ್ಟರಲ್ಲಿ ಶರತ್ಕಾಲ ಬಂತು. ಅದು ವಿಜಯಯಾತ್ರೆಗೆ ಸರಿಯಾದ ಕಾಲ, ಪುರೋಹಿತನು ವಿಜಯಪ್ರಯಾಣಕ್ಕೆ ಶುಭ ಮುಹೂರ್ತವನ್ನು ಗೊತ್ತು ಮಾಡಿದನು. ರಾಜಾಜ್ಞೆಯಿಂದ ದಿಗ್ವಿಜಯ ಪ್ರಯಾಣ ಸೂಚನೆಯ ಭೇರಿಯನ್ನು ಹೊಡೆಯಿಸಿದರು. ಚತುರಂಗ ಸೈನ್ಯ ನೆರೆಯಿತು. ಸರ್ವಾಲಂಕಾರ ಭೂಷಿತನಾದ ಭರತ ರಾಜನು ಪುರೋಹಿತನ ಆಶೀರ್ವಾದಗಳನ್ನಾಲಿಸುತ್ತ ನಿಂತಿರಲು ಅಜಿತಂ ಜಯವೆಂಬ ಆತನ ವಿಜಯರಥ ಸಜ್ಜಾಗಿ ಬಂತು, ಹೂರ್ತಿಕರು, “ದೇವಾ, ವಿಜಯಪ್ರಸ್ಥಾನ ಲಗ್ನ ಹತ್ತಿರ ಬಂತು' ಎಂದು ವಿಜ್ಞಾಪಿಸಿದರು. ದುಂದುಭಿಗಳ ಘೋಷ ದಿಕ್ಕುಗಳ ಕೊನೆಮುಟ್ಟಿತ್ತು ; ಮಂಗಳ ಗೀತಗಳ ಇನಿ ದನಿ ವಾದ್ಯಗಳ ನಾದದೊಡನೆ ಬೆರೆಯಿತು. ಗುರುಜನರು ನಾನಾವಿಧವಾಗಿ

  • ಛತ್ರರತ್ನ, ಖಡ್ಡ ರತ್ನ, ದಂಡ ರತ್ನ, ಚರ್ಮರತ್ನ, ಮಣಿರತ್ನ, ಕಾಕಿಣಿ ರತ್ನ, ಗೃಹಪತಿರತ್ನ, ಸೇನಾನಿರತ್ನ, ತಕ್ಷಕ ರತ್ನ, ಪುರೋಹಿತರತ್ನ, ಹಸ್ತಿರತ್ನ ತುರಗರತ್ನ, ಸ್ತ್ರೀರತ್ನ, ಇಲ್ಲೆಲ್ಲ ರತ್ನ ' ಎಂದರೆ ಅತ್ಯಂತ ಶ್ರೇಷ್ಟವಾದ್ದು ಎಂದು ಅಭಿಪ್ರಾಯ.