ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಯವರು, ಓದಿನವರು ಇವರೆಲ್ಲ ಒಂದು ಕಡೆ, ನಿಷ್ಠೆ ಯವರು ಒಲವಿನವರು, ಸಾಧುತ್ವವುಳ್ಳವರು, ಇವರು ಇನ್ನೊಂದು ಕಡೆ, ಗಿರಿಜೆ, ನನ್ನ ಭಕ್ತ ಬೇಡ ನೆಂದೆಯಲ್ಲವೆ ? ಹೌದು, ಅವನು ತನಗೆ ಯಾವ ಪದವಿಯ ಬೇಕೆಂದು ಬೇಡನು. ನನ್ನ ನ್ನಲ್ಲದೆ ಬೇರೊಂದನ್ನೂ ಹಾಡನು, ನೋಡನು, ಅವನ ಕೈಯಲ್ಲಿ ಹೊಲಸು ; ಮನಸ್ಸಿನಲ್ಲಿ ಅಮ್ಮ ತ; ಗೌರೀ, ಅವನ ಬಾಯಲ್ಲಿ ನೀರು ; ಮನದಲ್ಲಿ ಅಗ್ಗವಣಿ, ಆವನ ಮಂಡೆಯ ಮೇಲಿನ ಹೂವು ನನಗೆ ಮನಸ್ಸಿನ ಪರಿಮಳ, ಅವನ ಕಾಲಾಟ ನನಗೆ ಅತಿ ಸ್ನೇಹದ ಅರ್ಚನೆ. < ಎನ್ನ ವನೇ ? ಎಂಬ ಸಲುಗೆಯ ನುಡಿ ನಿಜವಾಗಿಯೂ ಮಂತ್ರವೇ ಸರಿ ನನ್ನ ನೈಟಿ ಒಲಿದು ಮಾಡುವ ಅವನ ಚರ್ಯೆಯೆಲ್ಲವೂ ಶಿವತಂತ್ರವೇ ಹೌದು. ಸ್ವಲ್ಪ ಸೈರಿಸು. ಈ ಭಕ್ತ, ಆ ಏಪ್ರ- ಇಬ್ಬರ ಯೋಗ್ಯತೆಯನ್ನೂ ನಿನಗೆ ತೋರಿಸುತ್ತೇನೆ” ಎಂದನು. ಕಣ್ಣಪ್ಪನ ಭಕ್ತಿ ಪೂಜೆ ಪ್ರಾರಂಭವಾಗಿ ಆರು ದಿನ ಕಳೆಯಿತು. ಏಳ ನೆಯ ದಿನ ಶಿವಾರ್ಚನೆಯ ಬ್ರಾಹ್ಮಣನಿಗೆ ಮನಸ್ಸಿನಲ್ಲಿ ಕೋಪ ಮಿತಿಮೀರಿ ಉಕ್ಕಿತು. ಶಿವಾಲಯದಲ್ಲಿ ಹೊಲಸುಮಾಡುವ ಕಿರಾತನನ್ನು ಇವೊತ್ತು ಕೊಲ್ಲಲೇ ಬೇಕೆಂದು ನಿಶ್ಚಯಿಸಿ ಒಂದು ಕಠಾರಿಯನ್ನು ಸಿದ್ಧಮಾಡಿಟ್ಟು ಕೊಂಡನು. ಅವನ ಜಡಬುದ್ದಿಗೆ ಮತ್ತೆ ಯಾವ ನಿದರ್ಶನ ಬೇಕು ? ಕಠಾರಿ ಯನ್ನು ತೆಗೆದುಕೊಂಡು, “ ಆ ತೊಂಡ ಬೇಡ ಹೀಗೆ ಮಾಡುವನೇ ! ” ಎಂದು ಕೊಂಡು ಬೆಟ್ಟವನ್ನೇರಿ ದೇವಾಲಯದ ಬಾಗಿಲಿಗೆ ಬಂದನು. ಅಷ್ಟರಲ್ಲಿ ಶಿವನು ತನ್ನ ಅರ್ಚಕರ ಮನಸ್ಸನ್ನು ಪರೀಕ್ಷಿಸಲು ಒಂದು ಅದ್ಭುತದ ಉಪಾಯವನ್ನು ಆಲೋಚಿಸಿದನು. ಶಿವಲಿಂಗದಲ್ಲಿ ಎರಡು ಕಣ್ಣುಗಳನ್ನು ಅಳವಡಿಸಿದನು. ಅದರಲ್ಲಿ ಒಂದು ಒಡೆದಂತಿದೆ ; ಅದರಲ್ಲಿ ನೆತ್ತರು ಒಸರು ತಿದೆ. ಬ್ರಾಹ್ಮಣನು ಒಳಹೊಕ್ಕು ಲಿಂಗದ ಅಂದಿನ ರೀತಿಯನ್ನು ಕಂಡು, ( ಏನಿದದ್ಭುತ ! ” ಎಂದು ಅಂಜೆ ನಡುಗಿದನು, " ನಮಃ ಶಿವಾಯ' ಎಂದು ಜಪಿಸತೊಡಗಿದನು. “ ಅರಸನಿಗೆ ಕೇಡಾಗುವುದೋ ? ದೇಶಕ್ಕೇ ಕೆಟ್ಟ ಬಾಗುವುದೋ ? ಏನು ಮಹೋತ್ಸಾತವೋ, ಹರನೇ ಬಲ್ಲ ! ” ಎಂದು ಭಯ ಗೊ೦ಡು ನೊಂದು ನಿಂತನು. ಸ್ವಲ್ಪ ಹೊತ್ತು ಅಲ್ಲಿದ್ದು, ಅದನ್ನು ನೋಡ ಲಾರದೆ ಮನಗುಂದಿ ಪಟ್ಟಣಕ್ಕೆ ಹಿಂತಿರುಗಿದನು. ಆ ಸೋಜಿಗದ ಸುದ್ದಿ